ಪಲಿಮಾರಿನಲ್ಲಿ ವಿಹಿತಮ್ ಮೇ. 18ರಂದು ಬ್ರಾಹ್ಮಣ ಯುವ ಸಮಾವೇಶ
ಪಡುಬಿದ್ರಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯ 18-40ರ ವಯೋಮಿತಿಯಯ ತ್ರಮತಸ್ಥ ಬ್ರಾಹ್ಮಣ ಯುವಕರ ಸಮಾವೇಶ ವಿಹಿತಮ್ ಮೇ 18ರಂದು ಶನಿವಾರ ಶ್ರೀ ಪಲಿಮಾರು ಮೂಲ ಮಠದಲ್ಲಿ ನಡೆಯಲಿದೆ.
ಈ ಬಗ್ಗೆ ಪಲಿಮಾರು ಮೂಲ ಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪಲಿಮಾರು ಮಠದ ಹಿರಿಯ ಸ್ವಾಮೀಜಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು (Palimaru Sri Vidhyadheesha theertha Swamiji) ಮಾಹಿತಿ ನೀಡಿದರು.
ಪ್ರಾತಃ ಸ್ಮರಣೀಯರಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಆರಾಧನೋತ್ಸವದ ಸಂದರ್ಭದಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಬ್ರಾಹ್ಮಣ ಸಮಾಜದ ಜೀವನಕ್ರಮದ ಅನನ್ಯತೆ ಮತ್ತು ಅದರ ಸಂರಕ್ಷಣೆ ಹಾಗೂ ವರ್ತಮಾನದ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜ ಆಂತರಿಕ ಮತ್ತು ಬಾಹ್ಯವಾಗಿ ಎದುರಿಸುತ್ತಿರುವ ಗಂಭೀರ ಸವಾಲುಗಳ ಬಗ್ಗೆ ಯುವ ಮನಸ್ಸುಗಳ ನಡುವೆ ಚಿಂತನ ಮಂಥನ ನಡೆಯಬೇಕು. ಬ್ರಾಹ್ಮಣರ ಸಂಘಟನಾತ್ಮಕ ಪ್ರಕ್ರಿಯೆಗಳಿಗೆ ಒಂದು ಶಕ್ತಿ ಮತ್ತು ಪ್ರೇರಣೆಯನ್ನು ನೀಡಬೇಕೆಂಬ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಉಭಯ ಜಿಲ್ಲೆಗಳ ೧೮-೪೦ ವಯಸ್ಸಿನ ವಿವಿಧ ಕ್ಷೇತ್ರ ಕ್ಷೇತ್ರಗಳಲ್ಲಿ ಸೇವೆ ನೀಡುತ್ತಿರುವ ೧೮-೪೦ರ ವಯೋಮಿತಿಯ ಬೆಂಗಳೂರು, ಮೈಸೂರು ಹಾಗೂ ಇತರೆಡೆ ನೆಲೆಸಿರು ಕರಾವಳಿ ಮೂಲದ ಯುವಕರನ್ನು ಆಹ್ವಾನಿಸಲಾಗಿದೆ.
ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು, ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಭೀಮನಕಟ್ಡೆ ಮಠದ ಶ್ರೀ ರಘುವರೇಂದ್ರ ತೀರ್ಥರು, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥರು, ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರು ಭಾಗವಹಿಸಿ ಮಾರ್ಗದರ್ಶನ ಗೈಯಲಿರುವರು.
ಸಂಸದ ತೇಜಸ್ವಿ ಸೂರ್ಯ (MP Tejasvi Soorya), ತರುಣ ಐಎಎಸ್ ಅಧಿಕಾರಿ ನಿತೀಶ್ ಹೆಬ್ಬಾರ್, ಸಂಗೀತ ಕಲಾವಿದರಾದ ಕೃಷ್ಣಪವನ್ ಕುಮಾರ್, ನಿಕ್ಷಿತ್ ಪುತ್ತೂರು, ಗಿನ್ನಿಸ್ ದಾಖಲೆಗೈದ ರೂಬಿಕ್ ಮೊಸಾಯಿಕ್ ಕಲಾವಿದ ಪೃಥ್ವೀಶ್ ಭಟ್, ಇನ್ಫೋಸಿಸ್ ಕಂಪೆನಿಯ ಅಧಿಕಾರಿ ರವಿ ಚಿಪ್ಳೂಣ್ಕರ್ (Ravi Chiploonkar Infosis)ಭಾಗವಹಿಸುವರು.
ಬಳಿಕ ಬ್ರಾಹ್ಮಣರ ಅನನ್ಯ ಜೀವನ ಕ್ರಮ ಮತ್ತು ಸಂರಕ್ಷಣೆಯ ಅನಿವಾರ್ಯತೆ ಎಂಬ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದೆ. ವಿದ್ವಾನ್ ಕೃಷ್ಣರಾಜ ಆಚಾರ್ಯ ಕುತ್ಪಾಡಿ ಉಪನ್ಯಾಸ ನೀಡುವರು.
ಮಧ್ಯಾಹ್ನ 12ಗಂಟೆಗೆ ಅಯೋಧ್ಯೆಯಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠಾ ಮಹೋತ್ಸವ ಮತ್ತು ೪೮ ದಿನಗಳ ಮಂಡಲೋತ್ಸವವನ್ನು ಯಶಸ್ವಿಯಾಗಿ ಪೊರೈಸಿದ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಅಭಿನಂದಿಸಲಾಗುವುದು.
ರೋಬೋಸಾಫ್ಟ್ ಕಂಪೆನಿಯ ಕೃಷ್ಣರಾಜ ರಾವ್, ಮಂಗಳೂರಿನ ಕಲ್ಬಾವಿ ಸಮೂಹ ಸಂಸ್ಥೆಗಳ ಕಲ್ಬಾವಿ ಪ್ರಕಾಶ್ ರಾವ್, ಪುತ್ತೂರಿನ ಸ್ವರ್ಣೋದ್ಯಮಿ ಕೇಶವ ಪ್ರಸಾದ್ ಮುಳಿಯ ಭಗವಹಿಸಲಿದ್ದಾರೆ.
ಪಲಿಮಾರು ಮಠದ ಅಧೀನದ ಸಾಧ್ಷೀ ಮಾಧ್ಷೀ ಶಾಲೆಯ ವಿದ್ಯಾರ್ಥಿನಿಯರಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.
ಅಪರಾಹ್ನ ಬ್ರ‍್ರಾಹ್ಮಣ ಸಮಾಜದ ಆಂತರಿಕ ಮತ್ತು ಬಾಹ್ಯ ಸವಾಲುಗಳು ಮತ್ತು ಪರಿಹಾರೋಪಾಯಗಳ ವಿಚಾರದಲ್ಲಿ ಹಿಂದೂ ಧಾರ್ಮಿಕ ಮುಖಂಡ ಬಾಲಾಜಿ ರಾಘವೇಂದ್ರಾಚಾರ್ಯರು ಉಪನ್ಯಾಸ ನೀಡುವರು. ಬಳಿಕ ಮಠಾಧೀಶರು ಮತ್ತು ಯುವಕರೊಂದಿಗೆ ಮುಕ್ತ ಸಂವಾದ ನಡೆಯಲಿದೆ.
ಸಮಾರೋಪ ಸಭೆಯಲ್ಲಿ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ, ಮಣಿಪಾಲ ಕೆಎಂಸಿಯ ತರುಣ ವೈದ್ಯ ಡಾ. ಅರ್ಜನ್ ಬಲ್ಲಾಳ್, ಪತ್ರಕರ್ತ ಜಿತೇಂದ್ರ ಕುಂದೇಶ್ವರ, ಜಿಲ್ಲಾ ವಿಶ್ವಹಿಂದು ಪರಿಷತ್ ಅಧ್ಯಕ್ಷ ಪಿ. ವಿಷ್ಣುಮೂರ್ತಿ ಆಚಾರ್ಯ ಭಾಗವಹಿಸಲಿದ್ದಾರೆ.
ಸಮಾವೇಶಕ್ಕೆ ಆಗಮಿಸುವ ಯುವ ವಿಪ್ರ ಪ್ರತಿನಿಧಿಗಳು ಸಾಂಪ್ರದಾಯಿಕ ಧೋತಿ ಮತ್ತು ಅಂಗಿಯನ್ನು ಧರಿಸಿ ಬರುವಂತೆ ವಿನಂತಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪಲಿಮಾರು ಕಿರಿಯ ಸ್ವಾಮೀಜಿಗಳಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ವಾಸುದೇವ ಭಟ್ ಪೆರಂಪಳ್ಳಿ, ವಿಷ್ಣು ಆಚಾರ್ಯ, ಪ್ರಣವ್ ಆಚಾರ್ಯ, ರಾಹುಲ್ ಬಾರಿತ್ತಾಯ, ಶಶಾಂಕ್ ಶಿವತ್ತಾಯ, ರೋಹನ್ ಬಾರಿತ್ತಾಯ ಉಪಸ್ಥಿತರಿದ್ದರು.

