• Home  
  • ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಸಮಾನತೆಯಿಂದ ಜಗತ್ತಿನ ಪ್ರಗತಿ ಎಂಬ ವಿಷಯದ ಕುರಿತು ಉಪನ್ಯಾಸ (Talk on “A world of equals, is a world of Progress” At Sri Madhwa Vadiraja Institute of Technology College)
- ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಸಮಾನತೆಯಿಂದ ಜಗತ್ತಿನ ಪ್ರಗತಿ ಎಂಬ ವಿಷಯದ ಕುರಿತು ಉಪನ್ಯಾಸ (Talk on “A world of equals, is a world of Progress” At Sri Madhwa Vadiraja Institute of Technology College)

Share: ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಸಮಾನತೆಯಿಂದ ಜಗತ್ತಿನ ಪ್ರಗತಿ ಎಂಬ ವಿಷಯದ ಕುರಿತು ಉಪನ್ಯಾಸ (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ (Shri Madhwa Vadiraja Institute of Technology and Management)ಮಹಿಳಾ ಸಬಲೀಕರಣ ಕೋಶ ಎನ್‌ಸಿಸಿ ಘಟಕದ ಸಹಯೋಗದೊಂದಿಗೆ ಮಹಿಳಾ ದಿನಾಚರಣೆಯ ಅಂಗವಾಗಿ ದಿನಾಂಕ  “ಸಮಾನತೆಯಿಂದ ಜಗತ್ತಿನ ಪ್ರಗತಿ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನೆರವೇರಿತು.   ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಮಾಜಿ ಉಪ ಪ್ರಾಂಶುಪಾಲರಾದ ದೀಪಾ ಭಂಡಾರಿಯವರು (Deepa […]

ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಸಮಾನತೆಯಿಂದ ಜಗತ್ತಿನ ಪ್ರಗತಿ ಎಂಬ ವಿಷಯದ ಕುರಿತು ಉಪನ್ಯಾಸ

(Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ (Shri Madhwa Vadiraja Institute of Technology and Management)ಮಹಿಳಾ ಸಬಲೀಕರಣ ಕೋಶ ಎನ್‌ಸಿಸಿ ಘಟಕದ ಸಹಯೋಗದೊಂದಿಗೆ ಮಹಿಳಾ ದಿನಾಚರಣೆಯ ಅಂಗವಾಗಿ ದಿನಾಂಕ  “ಸಮಾನತೆಯಿಂದ ಜಗತ್ತಿನ ಪ್ರಗತಿ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನೆರವೇರಿತು.

  ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಮಾಜಿ ಉಪ ಪ್ರಾಂಶುಪಾಲರಾದ ದೀಪಾ ಭಂಡಾರಿಯವರು (Deepa Bhandary, Former Vice Principal, St. Mary’s English Medium School, Udupi)  ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ದೀಪಾ ಭಂಡಾರಿಯವರು ಮಹಿಳಾ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿ, ಮಹಿಳೆಯರ ಬಗೆಗಿನ ಗೌರವವು ಮಹಿಳಾ ದಿನಾಚರಣೆಯಂದು ಮಾತ್ರ ಸೀಮಿತವಾಗಿರಬಾರದು. ಈ ವರ್ಷದ ಮಹಿಳಾ ದಿನವನ್ನು, “ಮಹಿಳೆಯರನ್ನು ಜಗತ್ತಿಗೆ ಹೊಂದಿಕೊಳ್ಳುವ ಬಗ್ಗೆ ಯೋಚಿಸಬೇಡಿ, ಬದಲಿಗೆ ಜಗತ್ತು ಮಹಿಳೆಯರಿಗಾಗಿ ಹೊಂದಿಕೊಳ್ಳುವ ಬಗ್ಗೆ ಯೋಚಿಸಿ” ಎಂಬ ಘೋಷಣೆಯೊಂದಿಗೆ ಆಚರಿಸಲಾಗಿದೆ ಎಂದರು.

 ಲಿಂಗ ಸಮಾನತೆಯ ಬಗ್ಗೆ ಮಾತನಾಡಿ, ಇಂದಿನ ದಿನಗಳಲ್ಲಿ ಮಹಿಳೆಯರು ತಮ್ಮ ಸಾಮರ್ಥ್ಯ ಮತ್ತು ಜ್ಞಾನದಿಂದಾಗಿ ಎನ್‌ಸಿಸಿ ಘಟಕ, ಶಿಕ್ಷಣ ಕ್ಷೇತ್ರ, ಅಗ್ನಿಶಾಮಕದಳ, ಯುದ್ಧ ವಿಮಾನದಲ್ಲಿ ಪೈಲೆಟ್‌ಗಳಾಗಿ ಎಲ್ಲಾಕ್ಷೇತ್ರದಲ್ಲಿ ಸಮಾನ ಅವಕಾಶವನ್ನು ಹೊಂದಿದ್ದಾರೆ. ಸಮಾಜದ ಪ್ರಗತಿಗಾಗಿ ಮಹಿಳೆಯರು ಮತ್ತು ಪುರುಷರು ಸಮಾನವಾಗಿ ಕೆಲಸ ಮಾಡಲು ಬೇಕಾದ ಆತ್ಮಸ್ಥೆöÊರ್ಯವನ್ನು ಬೆಳೆಸಲು ಸಲಹೆಯನ್ನು ನೀಡಿದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್‌ರವರು (Dr. Thirumaleshwara Bhat, Principal) ವಿದ್ಯಾರ್ಥಿಗಳಿಗೆ ಇಂತಹ ಉಪನ್ಯಾಸದ

ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

  ವಿದ್ಯಾರ್ಥಿನಿ ನಿಧಿ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸಬಲೀಕರಣ ಕೋಶದ ಸಂಯೋಜಕಿ ಡಾ. ದೀಪಿಕಾ ಬಿ ವಿ ಕಾರ್ಯಕ್ರಮ ಆಯೋಜಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.