• Home  
  • ಗುಜರಾತ್‌ ರಾಜ್ ಕೋಟ್ ಗೇಮ್ ಝೋನ್‌ ಅಗ್ನಿ ಅವಘಡ; ಎಳೆ ಮಕ್ಕಳು ಸೇರಿ 27 ಕ್ಕೂ ಅಧಿಕ ಜನರ ಸಾವು : Gujarath Rajkot Game Zone fire: Morethan 27people died including young children)
- ಅಪರಾಧ

ಗುಜರಾತ್‌ ರಾಜ್ ಕೋಟ್ ಗೇಮ್ ಝೋನ್‌ ಅಗ್ನಿ ಅವಘಡ; ಎಳೆ ಮಕ್ಕಳು ಸೇರಿ 27 ಕ್ಕೂ ಅಧಿಕ ಜನರ ಸಾವು : Gujarath Rajkot Game Zone fire: Morethan 27people died including young children)

Share:  ಗುಜರಾತ್‌ ರಾಜ್ ಕೋಟ್ ಗೇಮ್ ಝೋನ್‌ ಅಗ್ನಿ ಅವಘಡ; ಎಳೆ ಮಕ್ಕಳು ಸೇರಿ 27 ಕ್ಕೂ ಅಧಿಕ ಜನರ ಸಾವು (Gujarath) ಗುಜರಾತ್:‌ ಇಲ್ಲಿಯ ರಾಜ್‌ಕೋಟ್ ನಗರದ ಗೇಮ್ ಝೋನ್‌ವೊಂದರಲ್ಲಿ ಶನಿವಾರ ಸಂಜೆ ಸಂಭವಿಸಿದ ಬೆಂಕಿ ದುರಂತದಲ್ಲಿ 27 ಜನರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಘಟಿಸಿದೆ. ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ. ಅವರ ಗುರುತು ಪತ್ತೆಗಾಗಿ ಮೃತದೇಹ ಮತ್ತು ಬಲಿಪಶುಗಳ ಸಂಬಂಧಿಕರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು  ಗುಜರಾತ್‌ ಮುಖ್ಯಮಂತ್ರಿ […]

 ಗುಜರಾತ್‌ ರಾಜ್ ಕೋಟ್ ಗೇಮ್ ಝೋನ್‌ ಅಗ್ನಿ ಅವಘಡ; ಎಳೆ ಮಕ್ಕಳು ಸೇರಿ 27 ಕ್ಕೂ ಅಧಿಕ ಜನರ ಸಾವು

(Gujarath) ಗುಜರಾತ್:‌ ಇಲ್ಲಿಯ ರಾಜ್‌ಕೋಟ್ ನಗರದ ಗೇಮ್ ಝೋನ್‌ವೊಂದರಲ್ಲಿ ಶನಿವಾರ ಸಂಜೆ ಸಂಭವಿಸಿದ ಬೆಂಕಿ ದುರಂತದಲ್ಲಿ 27 ಜನರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಘಟಿಸಿದೆ.

ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ. ಅವರ ಗುರುತು ಪತ್ತೆಗಾಗಿ ಮೃತದೇಹ ಮತ್ತು ಬಲಿಪಶುಗಳ ಸಂಬಂಧಿಕರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು

 ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಭಾನುವಾರ ಬೆಳಗ್ಗೆ ನಾನಾ-ಮಾವಾ ರಸ್ತೆಯಲ್ಲಿ ಘಟನಾ ಸ್ಥಳಕ್ಕೆ ಮತ್ತು ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿದರು. ಗೇಮಿಂಗ್ ಝೋನ್ ಮಾಲೀಕ ಯುವರಾಜ್‌ ಸಿಂಗ್‌ ಸೋಲಂಕಿ ಮತ್ತು ವ್ಯವಸ್ಥಾಪಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೇಮಿಂಗ್ ಝೋನ್‌ನಲ್ಲಿ ಶನಿವಾರ ಸಂಜೆ ಬೇಸಿಗೆ ರಜೆಯ ವಿಹಾರವನ್ನು ಆನಂದಿಸುತ್ತಿದ್ದ ಜನರಿದ್ದ ಆವರಣದಲ್ಲಿ ಭಾರೀ ಬೆಂಕಿ ಆವರಿಸಿದ್ದು, 27 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ 12 ವರ್ಷದೊಳಗಿನ ನಾಲ್ಕು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಕುರಿತು ತನಿಖೆ ನಡೆಸಿ 72 ಗಂಟೆಗಳಲ್ಲಿ ವರದಿ ಸಲ್ಲಿಸಲು ರಾಜ್ಯ ಸರ್ಕಾರ ರಚಿಸಿದ್ದ ಐವರು ಸದಸ್ಯರ ಎಸ್‌ಐಟಿ ಶನಿವಾರ ತಡರಾತ್ರಿ ರಾಜ್‌ಕೋಟ್ ತಲುಪಿ ಸ್ಥಳೀಯ ಆಡಳಿತದೊಂದಿಗೆ ಸಭೆ ನಡೆಸಿತು. ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಾಂಘವಿ ಕೂಡ ಶನಿವಾರ ತಡರಾತ್ರಿ ರಾಜ್‌ಕೋಟ್‌ಗೆ ಆಗಮಿಸಿ ಸಭೆಯಲ್ಲಿ ಭಾಗವಹಿಸಿದ್ದರು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸುಭಾಷ್ ತ್ರಿವೇದಿ ಅವರು ಶನಿವಾರ ರಾತ್ರಿ ಸಭೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆ ದುರದೃಷ್ಟಕರ ಮತ್ತು ದುಃಖಕರವಾಗಿದೆ. ಇದಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಖಚಿತಪಡಿಸಿಕೊಳ್ಳಲು ತಕ್ಷಣವೇ ವಿಚಾರಣೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

 ನಾವು ಘಟನೆಯ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತೇವೆ ಮತ್ತು ಅವುಗಳನ್ನು ಕೂಲಂಕಷವಾಗಿ ತನಿಖೆ ಮಾಡುತ್ತೇವೆ. ನಾವು ಬದ್ಧತೆ ಮತ್ತು ಸಂಪೂರ್ಣ ಪ್ರಾಮಾಣಿಕತೆ, ಸಮಗ್ರತೆಯಿಂದ ತಮ್ಮ ಪ್ರಾಣ ಕಳೆದುಕೊಂಡ ಮಕ್ಕಳಿಗೆ ನ್ಯಾಯ ಒದಗಿಸಲು ಕೆಲಸ ಮಾಡುತ್ತೇವೆ ಎಂದು ತ್ರಿವೇದಿ ಹೇಳಿದ್ದಾರೆ.

ಘಟನಾ ಸ್ಥಳದಿಂದ 27 ಶವಗಳನ್ನು ಹೊರತೆಗೆದು ನಗರದ ಸಿವಿಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಎಸಿಪಿ) ವಿನಾಯಕ್ ಪಟೇಲ್ ತಿಳಿಸಿದ್ದಾರೆ. ಘಟನೆಯಲ್ಲಿ ಮೂವರು ತೀವ್ರ ಗಾಯಗೊಂಡಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದ ಅವರು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿಲ್ಲ ಎಂದಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.