• Home  
  •  ಮಣಿಪಾಲ : ಹೆರ್ಗ ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಮಾರಾಟ – ಮಾಲು ಸಮೇತ ಯುವಕನ ಬಂಧನ (Manipala-Herga: Arrest of youth with goods)
- ಅಪರಾಧ

 ಮಣಿಪಾಲ : ಹೆರ್ಗ ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಮಾರಾಟ – ಮಾಲು ಸಮೇತ ಯುವಕನ ಬಂಧನ (Manipala-Herga: Arrest of youth with goods)

Share: ಮಣಿಪಾಲ : ಹೆರ್ಗ ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಮಾರಾಟ – ಮಾಲು ಸಮೇತ ಯುವಕನ ಬಂಧನ (Manipala) ಮಣಿಪಾಲ: ಇಲ್ಲಿಯ ಹೆರ್ಗ ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಮಾಲು ಸಮೇತವಾಗಿ ಮಾದಕ ದ್ರವ್ಯ ವಿಭಾಗದ ಅಧಿಕಾರಿಗಳು ಮತ್ತು ಮಣಿಪಾಲ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.   ಮಣಿಪಾಲ ಠಾಣಾ  ಪೊಲೀಸ್‌ ನಿರೀಕ್ಷಕರಾದ ದೇವರಾಜ್‌ ಟಿ.ವಿ ರವರ ನೇತೃತ್ವದಲ್ಲಿ ಉಡುಪಿಯ ಪತ್ರಾಂಕಿತ ಅಧಿಕಾರಿ ಅಸಿಸ್ಟೆಂಟ್‌ ಡ್ರಗ್‌ ಕಂಟ್ರೋಲರ್‌ ಶಂಕರ್‌    ಹಾಗೂ ಮಣಿಪಾಲ ಠಾಣಾಧಿಕಾರಿ ರಾಘವೇಂದ್ರ ಸಿ, […]

ಮಣಿಪಾಲ : ಹೆರ್ಗ ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಮಾರಾಟ – ಮಾಲು ಸಮೇತ ಯುವಕನ ಬಂಧನ

(Manipala) ಮಣಿಪಾಲ: ಇಲ್ಲಿಯ ಹೆರ್ಗ ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಮಾಲು ಸಮೇತವಾಗಿ ಮಾದಕ ದ್ರವ್ಯ ವಿಭಾಗದ ಅಧಿಕಾರಿಗಳು ಮತ್ತು ಮಣಿಪಾಲ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

  ಮಣಿಪಾಲ ಠಾಣಾ  ಪೊಲೀಸ್‌ ನಿರೀಕ್ಷಕರಾದ ದೇವರಾಜ್‌ ಟಿ.ವಿ ರವರ ನೇತೃತ್ವದಲ್ಲಿ ಉಡುಪಿಯ ಪತ್ರಾಂಕಿತ ಅಧಿಕಾರಿ ಅಸಿಸ್ಟೆಂಟ್‌ ಡ್ರಗ್‌ ಕಂಟ್ರೋಲರ್‌ ಶಂಕರ್‌    ಹಾಗೂ ಮಣಿಪಾಲ ಠಾಣಾಧಿಕಾರಿ ರಾಘವೇಂದ್ರ ಸಿ,  ಎಎಸ್‌ಐ ವಿವೇಕಾನಂದ, ಎಎಸ್‌ಐ ಶೈಲೇಶ್‌ ಕುಮಾರ್‌ ಹಾಗೂ ಸಿಬ್ಬಂದಿಗಳಾದ ಸುಕುಮಾರ, ಅರುಣ ಕುಮಾರ್‌, ಚನ್ನೇಶ್‌, ಮಂಜುನಾಥರವರನ್ನೊಳಗೊಂಡ ತಂಡ ಮಣಿಪಾಲ ಸಮೀಪದ ಹೆರ್ಗಾ ಗ್ರಾಮದ ಅಪಾರ್ಟ್ಮೆಂಟ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಪಾರ್ಟ್‌ಮೆಂಟ್‌ ರೂಮ್‌ ಮೇಲೆ ದಾಳಿ ಮಾಡಿ, ರೂಮ್‌ನಲ್ಲಿದ್ದ ಕೇರಳ ತಿರುವನಂತಪುರದ ಸಿದ್ದಾರ್ಥ್‌ (22), ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

  ಆತನಿಂದ 20,000/- ರೂ ಮೌಲ್ಯದ ಸುಮಾರು 388 ಗ್ರಾಂ ಗಾಂಜಾ ಹಾಗೂ 45,000/- ರೂ ಮೌಲ್ಯದ ಮೊಬೈಲ್‌ ಫೋನ್‌ನನ್ನು ಜಪ್ತಿ ಮಾಡಲಾಗಿದೆ.

ಈ ಗಾಂಜಾವನ್ನು ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ  ಈ ವಿದ್ಯಾರ್ಥಿ ಶೇಖರಿಸಿ ಇಟ್ಟಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.