Tag: MANIPALA

ಅಪರಾಧ

 ಮಣಿಪಾಲ : ಹೆರ್ಗ ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಮಾರಾಟ – ಮಾಲು ಸಮೇತ ಯುವಕನ ಬಂಧನ (Manipala-Herga: Arrest of youth with goods)

ಮಣಿಪಾಲ : ಹೆರ್ಗ ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಮಾರಾಟ – ಮಾಲು ಸಮೇತ ಯುವಕನ ಬಂಧನ (Manipala) ಮಣಿಪಾಲ: ಇಲ್ಲಿಯ ಹೆರ್ಗ ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಮಾಲು ಸಮೇತವಾಗಿ ಮಾದಕ ದ್ರವ್ಯ ವಿಭಾಗದ ಅಧಿಕಾರಿಗಳು ಮತ್ತು ಮಣಿಪಾಲ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.   ಮಣಿಪಾಲ ಠಾಣಾ  ಪೊಲೀಸ್‌ ನಿರೀಕ್ಷಕರಾದ ದೇವರಾಜ್‌ ಟಿ.ವಿ ರವರ ನೇತೃತ್ವದಲ್ಲಿ ಉಡುಪಿಯ ಪತ್ರಾಂಕಿತ ಅಧಿಕಾರಿ ಅಸಿಸ್ಟೆಂಟ್‌ ಡ್ರಗ್‌ ಕಂಟ್ರೋಲರ್‌ ಶಂಕರ್‌    ಹಾಗೂ ಮಣಿಪಾಲ ಠಾಣಾಧಿಕಾರಿ ರಾಘವೇಂದ್ರ ಸಿ,  ಎಎಸ್‌ಐ […]

social service ತಂತ್ರಜ್ಞಾನ

ಮಣಿಪಾಲ : ವಿದ್ಯುತ್ ನಡೆದು ಬಂದ ದಾರಿ ಮತ್ತು ವಿದ್ಯುತ್ ಜೀವನ ಪುಸ್ತಕ ಬಿಡುಗಡೆ (Manipala : The path of electricity and the life of electricity book release)

ಮಣಿಪಾಲ : ವಿದ್ಯುತ್ ನಡೆದು ಬಂದ ದಾರಿ ಮತ್ತು ವಿದ್ಯುತ್ ಜೀವನ ಪುಸ್ತಕ ಬಿಡುಗಡೆ (Manipala)ಮಣಿಪಾಲ: ಮಣಿಪಾಲ ಕೆ ಹೆಚ್ ಬಿ ಕಾಲೋನಿಯದಲ್ಲಿರುವ ಮಣಿಪಾಲ್ ಹಿಲ್ಸ್ ರೋಟರಿ ಮಕ್ಕಳ ಗ್ರಂಥಾಲಯದಲ್ಲಿ ವಿದ್ಯುತ್ ನಡೆದು ಬಂದ ದಾರಿ ಮತ್ತು ವಿದ್ಯುತ್ ಜೀವನ ಪುಸ್ತಕದ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮಣಿಪಾಲದ ವಸಂತ ಗೀತ ಪ್ರಕಾಶನದಿಂದ ಪ್ರಕಟಣೆಯಾದ ಈ ಪುಸ್ತಕದ ಲೇಖಕರು ಶ್ರೀ ಗೋಪಿನಾಥ್ ರಾವ್ ಸರ್ವದೇ. ಇವರು ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್ ನ ನಿವೃತ್ತ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್. ಪುಸ್ತಕ […]

ರಾಜಕೀಯ ವಿಡಿಯೋ

ಬಹಳಷ್ಟು ಜನ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರಲಿದ್ದಾರೆ : ಜಗದೀಶ್ ಶೆಟ್ಟರ್

ಬಹಳಷ್ಟು ಜನ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರಲಿದ್ದಾರೆ : ಜಗದೀಶ್ ಶೆಟ್ಟರ್  ಮಣಿಪಾಲ: ರಾಜ್ಯದಲ್ಲಿ ಆಪರೇಷನ್ ಹಸ್ತ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಸ್ಪೋಟಕ ಹೇಳಿಕೆ ನೀಡಿದ್ದು, ಬಹಳಷ್ಟು ಜನ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದು ಹೇಳಿದ್ದಾರೆ.   ಮಣಿಪಾಲಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ ಜಗದೀಶ್ ಶೆಟ್ಟರ್ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು. ತುಂಬಾ ಜನ ಬಿಜೆಪಿ ನಾಯಕರು ನನಗೆ ಫೋನ್ ಮಾಡಿ ತಮ್ಮ ಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ನಾಯಕರೇ ಇಲ್ಲ. ನಮಗೆ ಗೈಡ್ ಮಾಡಲು ಯಾರೂ […]

ಅಪರಾಧ ವಿಡಿಯೋ

ಮಣಿಪಾಲ: ಕೋಳಿ‌ ಅಂಕಕ್ಕೆ ದಾಳಿ ಮಾಡಿದ ಪೊಲೀಸರಿಗೇ ಆವಾಜ್- ತಬ್ಬಿಬ್ಬಾದ ಪೊಲೀಸರು!

ಮಣಿಪಾಲ: ಕೋಳಿ‌ ಅಂಕಕ್ಕೆ ದಾಳಿ ಮಾಡಿದ ಪೊಲೀಸರಿಗೇ ಆವಾಜ್- ತಬ್ಬಿಬ್ಬಾದ ಪೊಲೀಸರು!  ಮಣಿಪಾಲ‌: ಮಣಿಪಾಲ ಬಳಿಯ 80 ಬಡಗುಬೆಟ್ಟುವಿನಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರಿಗೇ ಗುಂಪೊಂದು ಅವಾಜ್ ಹಾಕಿದ ಪ್ರಸಂಗ ನಡೆದಿದೆ.  ಈ ಗುಂಪು ಬೆದರಿಸುವ ರೀತಿಯಲ್ಲಿ ಪೊಲೀಸರಿಗೆ ಆವಾಜ್ ಹಾಕುತ್ತಿದ್ದರೂ ಪೊಲೀಸರು ಮಾತ್ರ ಅಸಹಾಯಕರಾಗಿ ನಿಂತಿದ್ದಾರೆ.  ಕೋಳಿ ಅಂಕ ನಡೆಸುತ್ತಿದ್ದ ತಂಡವು , “ನೀವು ಇಲ್ಲಿಗೆಲ್ಲ ಬರುತ್ತೀರಿ. ಆದರೆ ಪಬ್, ಬಾರ್ ಓಸಿ, ಮಟ್ಕಾ ನಡೆಯುತ್ತಿದ್ದರೂ ಸುಮ್ಮನಿರುತ್ತೀರಿ ಯಾಕೆ? ಯಾಕೆಂದರೆ ನಿಮಗೆ ಅಲ್ಲಿ […]

ಅಪರಾಧ ಕರಾವಳಿ ವಿಡಿಯೋ

ಮಣಿಪಾಲ: ನಡುರಸ್ತೆಯಲ್ಲಿ ಅಪಾಯಕಾರಿಯಾಗಿ ದ್ವಿಚಕ್ರ ವಾಹನ ಚಲಾಯಿಸಿದ ಯುವಕ

ಮಣಿಪಾಲ: ನಡುರಸ್ತೆಯಲ್ಲಿ ಅಪಾಯಕಾರಿಯಾಗಿ ದ್ವಿಚಕ್ರ ವಾಹನ ಚಲಾಯಿಸಿದ ಯುವಕ ಮಣಿಪಾಲ: ಯೌವನದಲ್ಲಿ ಹುಚ್ಚು ಮನಸ್ಸು ಏನೇನೋ ಸಾಹಸಕ್ಕೆ ಪ್ರೇರಣೆ ನೀಡುತ್ತಿದೆ. ಆದರೆ ಸ್ವಲ್ಪ ಎಡವಿದರೂ ಜೀವಕ್ಕೆ ಆಪತ್ತು ನಿಶ್ಚಿತ. ಇಂತಹುದೇ ಅತಿರೇಕದ ಸಾಹಸಕ್ಕೆ ಮುಂದಾಗಿ ಬೈಕ್ ಸ್ಟಂಟ್ ಮಾಡ ಹೊರಟ ಯುವಕನೋರ್ವ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ದ್ವಿಚಕ್ರ ವಾಹನದಲ್ಲಿ ಯುವಕನೋರ್ವ ಹುಚ್ಚಾಟ ನಡೆಸಿದ್ದು, ಸ್ಕೂಟಿಯನ್ನು ಯದ್ವಾತದ್ವಾ ಓಡಿಸಿ ರೀಲ್ಸ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯಲ್ಲಿ ಯುವಕನೋರ್ವ ಸ್ಕೂಟಿಯನ್ನು ಯದ್ವಾತದ್ವಾ […]

ಕರಾವಳಿ ಶಾಲಾ ಕಾಲೇಜು

ಯುವಜನತೆ ಮಾದಕ ವ್ಯಸನ ವಿರುದ್ಧದ ಕಾನೂನನ್ನು ಅರಿಯಬೇಕಿದೆ : ನ್ಯಾ.ಜಾನ್ ಮೈಕೆಲ್ ಕುನ್ಹಾ

ಯುವಜನತೆ ಮಾದಕ ವ್ಯಸನ ವಿರುದ್ಧದ ಕಾನೂನನ್ನು ಅರಿಯಬೇಕಿದೆ : ನ್ಯಾ.ಜಾನ್ ಮೈಕೆಲ್ ಕುನ್ಹಾ  ಉಡುಪಿ, ಜುಲೈ 22 : ಯುವಜನತೆ ಮಾದಕ ವ್ಯಸನ ವಿರುದ್ದದ ಕಾನೂನಿನ ಅರಿವು ಹೊಂದುವುದರ ಜೊತೆಗೆ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮಾದಕ ವಸ್ತುಗಳಿಂದ ದೂರವಿದ್ದು, ಸದೃಢ ಆರೋಗ್ಯ ಹೊಂದಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ಹೇಳಿದರು.  ಅವರು ಇಂದು ನಗರದ ಮಣಿಪಾಲ ಕೆಎಂಸಿಯ ಡಾ.ಟಿ.ಎಂ.ಎ.ಪೈ ಆಡಿಟೋರಿಯಂನಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು […]

ಪ್ರಚಲಿತ

ಸಫಾಯಿ ಕರ್ಮಚಾರಿಗಳಿಗೆ ಸರಕಾರದ ಯೋಜನೆಗಳ ಪ್ರಯೋಜನ ಒದಗಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

          ಉಡುಪಿ : ಸಫಾಯಿ ಕರ್ಮಚಾರಿಗಳಿಗೆ ಸರಕಾರದ ವಿವಿದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಫಲಾನುಭವಿಗಳನ್ನಾಗಿಸಿ ಅವರುಗಳು ಆರ್ಥಿಕವಾಗಿ ಸಬಲರನ್ನಾಗಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ, ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಸಫಾಯಿ ಕರ್ಮಚಾರಿಗಳ ಪುರ್ನವಸತಿ ಸೇರಿದಂತೆ ಅವರುಗಳು ಕಲ್ಯಾಣಾಭಿವೃದ್ದಿಗಾಗಿ ಸರಕಾರ  ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುತ್ತಿದೆ. […]

Uncategorised ಕರಾವಳಿ

ಸ್ವಾತಂತ್ರೋತ್ತರ ಭಾರತದ ರಾಜಕೀಯ ಸನ್ನಿವೇಶ ಭಾವನಾತ್ಮಕ ವಿಷಯಗಳಿಗೆ ಬದಲಾಗಿದೆ : ಪ್ರೊ. ರಾಕೇಶ್ ಬಟ್‌ಬೈಲ್ 

ಮಣಿಪಾಲ: ಸ್ವಾತಂತ್ರೋತ್ತರ ಭಾರತದ ರಾಜಕೀಯ  ಸನ್ನಿವೇಶದಲ್ಲಿ ಸಾರ್ವಜನಿಕ ಭಾಷಣದ  ಸ್ವರೂಪವು ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಂದ ವಿಮುಖವಾಗಿ ಹೆಚ್ಚು ಭಾವನಾತ್ಮಕ ವಿಷಯಗಳಿಗೆ ಬದಲಾಗಿದೆ ಎಂದು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಬರಹಗಾರ – ವಿದ್ವಾಂಸ ಪ್ರೊ. ರಾಕೇಶ್ ಬಟ್‌ಬೈಲ್ ಹೇಳಿದರು.  ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ‘ಭಾರತದಲ್ಲಿ ಸಾರ್ವಜನಿಕ ಭಾಷಣದ ಸ್ವರೂಪ 1947 ೨022’ ವಿಷಯದ ಕುರಿತು ಮಾತನಾಡುತ್ತಾ, ಪ್ರೊ. ಬಟ್‌ಬೈಲ್ ಅವರು ವಿವಿಧ ರಾಜಕೀಯ ಪಕ್ಷಗಳ ನಾಯಕರ ಭಾಣಗಳನ್ನು ವಿಶ್ಲೇಷಿಸಿದರು ಮತ್ತು ಮೊದಲು ಸಾಮಾಜಿಕ-ಆರ್ಥಿಕ ಸಮಸ್ಯೆಗಳು ಹೇಗೆ ಸಾರ್ವಜನಿಕ ಭಾಷಣದ ಪ್ರಮುಖ ಅಂಗವಾಗಿದ್ದವು ಎಂಬುದನ್ನು ಪ್ರದರ್ಶಿಸಿದರು.  ಸ್ವಾತಂತ್ರ್ಯದ ನಂತರ ಮತ್ತು ಸಾಮಾಜಿಕ ಭಾಷಣದ  ಸ್ವರೂಪವು, ವಿಶೇಷವಾಗಿ 1990 ರ ನಂತರ ಹೇಗೆ ಹೆಚ್ಚು ಭಾವನಾತ್ಮಕ ವಿಚಾರಗಳಿಗೆ ತಿರುಗಿತು ಎಂದು ವಿಶ್ಲೇಷಿಸಿದರು.  ರಾಜಕೀಯ ನಾಯಕರ ಮಹತ್ವದ ಭಾಷಣಗಳ ಕುರಿತ ಪುಸ್ತಕ ವನ್ನು ಇತ್ತೀಚೆಗೆ ಸಂಪಾದಿಸಿರುವ ಪ್ರೊ. ಬಟ್‌ಬೈಲ್, ಅನೇಕ ಬಾರಿ ನಾಯಕರು ರಾಜಕೀಯ ಲಾಭಕ್ಕಾಗಿ ಜನರ ಆತಂಕಗಳನ್ನು ಬಳಸಿಕೊಳ್ಳುವುದು ದುರದೃಷ್ಟಕರ ಎಂದು ಹೇಳಿದರು.          ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಪ್ರೊ. ಫಣಿರಾಜ್, ಡಾ.ರೇಸ್ಮಿ ಭಾಸ್ಕರನ್, ಋತುರಾಜ್ ಹಾಗೂ ಹಲವು ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಅಪರಾಧ ಕರಾವಳಿ

ಮಣಿಪಾಲ ಹಕುನ ಮಟಾಟ ರೆಸ್ಟೋರೆಂಟ್ ನಲ್ಲಿ ಅಗ್ನಿ ಅವಘಡ: 40ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟ

ಮಣಿಪಾಲ ಈಶ್ವರನಗರ ಸಮೀಪದ ಹಕುನ ಮಟಾಟ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ‌ ಇಂದು ಮುಂಜಾನೆ ಆಕಸ್ಮಿಕವಾಗಿ ಅಗ್ನಿವಘಡ ಸಂಭವಿಸಿದ್ದು, ಸುಮಾರು 40 ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟ ಸಂಭವಿಸಿದೆ. ರೆಸ್ಟೋರೆಂಟ್ ನ ಕಿಚನ್ ರೂಮ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿದ್ದು, ಅಪಾರ ಪ್ರಮಾಣದ ಉಪಕರಣಗಳು ಬೆಂಕಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

eMedia Kannada  @2025. All Rights Reserved.