• Home  
  • ಹೆಜಮಾಡಿ ಕೋಡಿಯಲ್ಲಿ ಆರೋಗ್ಯ ಶಿಬಿರ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ (MLC Ivan Desouza Inagurated the Health Camp at Hejamady Kody)
- social service

ಹೆಜಮಾಡಿ ಕೋಡಿಯಲ್ಲಿ ಆರೋಗ್ಯ ಶಿಬಿರ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ (MLC Ivan Desouza Inagurated the Health Camp at Hejamady Kody)

Share: ಹೆಜಮಾಡಿ ಕೋಡಿಯಲ್ಲಿ ಆರೋಗ್ಯ ಶಿಬಿರ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ  ಸರಕಾರಿ ಸವಲತ್ತುಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ಸಂಘ ಸಂಸ್ಥೆಗಳ ಭಾಗವಹಿಸುವಿಕೆ ಅಗತ್ಯ: ಐವನ್‌ ಡಿಸೋಜಾ ಐವನ್‌ ಡಿಸೋಜಾ ದಂಪತಿಗಳಿಗೆ ಸನ್ಮಾನ (Hejamady) ಹೆಜಮಾಡಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾಮಾನ್ಯ ಜನರಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ಸಾಮಾಜಿಕ ಕಳಕಳಿಯ ಸಂಘ ಸಂಸ್ಥೆಗಳು ಕಾರ್ಯಸೂಚಿ ಹಮ್ಮಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಪ್ರಥಮ ಬಾರಿಗೆ ಪತ್ನಿಯ […]

ಹೆಜಮಾಡಿ ಕೋಡಿಯಲ್ಲಿ ಆರೋಗ್ಯ ಶಿಬಿರ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ

 ಸರಕಾರಿ ಸವಲತ್ತುಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ಸಂಘ ಸಂಸ್ಥೆಗಳ ಭಾಗವಹಿಸುವಿಕೆ ಅಗತ್ಯ: ಐವನ್‌ ಡಿಸೋಜಾ

ಐವನ್‌ ಡಿಸೋಜಾ ದಂಪತಿಗಳಿಗೆ ಸನ್ಮಾನ

(Hejamady) ಹೆಜಮಾಡಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾಮಾನ್ಯ ಜನರಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ಸಾಮಾಜಿಕ ಕಳಕಳಿಯ ಸಂಘ ಸಂಸ್ಥೆಗಳು ಕಾರ್ಯಸೂಚಿ ಹಮ್ಮಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಪ್ರಥಮ ಬಾರಿಗೆ ಪತ್ನಿಯ ತವರೂರು ಹೆಜಮಾಡಿಗೆ ಆಗಮಿಸಿದ ಸಂದರ್ಭದಲ್ಲಿ ಹೇಳಿದರು.

ಹೆಜಮಾಡಿ ಕೋಡಿಯ ವಿದ್ಯಾಪ್ರಸಾರ ಹಳೇವಿದ್ಯಾರ್ಥಿ ಸಂಘದ ಅಂಗಸಂಸ್ಥೆ ಕೋಡಿ ಕ್ರಿಕೆಟರ್ಸ್‌ ಆಶ್ರಯದಲ್ಲಿ ಮಂಗಳೂರು ಎ. ಜೆ.ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿನ ಮಹಿಳಾ ವಿಭಾಗದ  ಸಹಯೋಗದೊಂದಿಗೆ ಹೆಜಮಾಡಿ ಕೋಡಿ ಸರಕಾರಿ ಪ್ರೌಢಶಾಲೆಯಲ್ಲಿ  ನಡೆದ ಮಹಿಳೆಯರ ಆರೋಗ್ಯ ತಪಾಸಣೆ ಮತ್ತು ಕ್ಯಾನ್ಸರ್ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ತನ್ನ ಹುಟ್ಟೂರು ಮುದರಂಗಡಿ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಈ ಬಾರಿ ಪತ್ನಿಯ ತವರೂರು ಹೆಜಮಾಡಿ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಅನುದಾನ ಒದಗಿಸುವುದಾಗಿ ಅವರು ಭರವಸೆ ನೀಡಿದರು.

ಸನ್ಮಾನ: ವಿಧಾನಪರಿಷತ್ ಸದಸ್ಯರಾಗಿ ಅವಿರೋಧ ಅಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಹೆಜಮಾಡಿಗೆ ಆಗಮಿಸಿದ ಐವನ್ ಡಿಸೋಜರನ್ನು ಪತ್ನಿ ಎ.ಜೆ. ಅಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಕವಿತಾ ಐವನ್ ಡಿಸೋಜಾ ಜತೆಗೆ ಸನ್ಮಾನಿಸಿ ಗೌರವಿಸಲಾಯಿತು.

ಹೆಜಮಾಡಿ ಹಾಗೂ ಅಸುಪಾಸಿನ ಗ್ರಾಮಗಳಲ್ಲಿ ೩೦೦ಕ್ಕೂ ಅಧಿಕ ಹೆರಿಗೆಯನ್ನು ನಾಟಿ ವೈದ್ಯಕೀಯ ಮೂಲಕ ಯಶಸ್ವಿಯಾಗಿ ನಿರ್ವಹಿಸಿ ಮನೆ ಮಾತಾಗಿರುವ ಹೆಜಮಾಡಿಯ ಶಾರದಾ ಪಿ. ಕರ್ಕೇರರವರನ್ನು ಗೌರವಿಸಲಾಯಿತು.

ಮಾಜಿ ಶಾಸಕ ಲಾಲಾಜಿ ಅರ್. ಮೆಂಡನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಬಹುನಿರೀಕ್ಷಿತ ಹೆಜಮಾಡಿ ಮೀನುಗಾರಿಕಾ ಬಂದರು ಯೋಜನೆ ಶೀಘ್ರ ಅನುಷ್ಠಾನಗೊಳ್ಳಲಿದೆ ಎಂದರು.

ಕೋಡಿ ಕ್ರಿಕೆಟರ್ಸ್‌ ಸಂಸ್ಥೆಯ ಅಧ್ಯಕ್ಷ ಸೀತಾರಾಮ ಬಂಗೇರ ಅಧ್ಯಕ್ಷತೆ ವಹಿಸಿದ್ದರು.

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜ್ಮಾಡಿ, ಹೆಜಮಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೋಹನ್ ಸುವರ್ಣ, ಎ.ಜೆ. ಅಸ್ಪತ್ರೆಯ ಡಾ. ನಿಶಿತಾ ಶೆಟ್ಟಿ, ವ್ಯಾಯಾಮ ಶಾಲೆಯ ಸಂಚಾಲಕ ಸುಜಿತ್ ಸುವರ್ಣ, ಕೋಡಿ ಕ್ರಿಕೆಟರ್ಸ್‌ನ ಕಪ್ತಾನ ಸಂತೋಷ್ ಪುತ್ರನ್, ಸಂಸ್ಥೆಯ ಸಂಚಾಲಕ ಸತೀಶ್ ಕೋಟ್ಯಾನ್, ಉದ್ಯಮಿಗಳಾದ ಹೇಮಂತ್‌ ಕುಮಾರ್ ಕಾಂಚನ್ ಮತ್ತು ಹೇಮಾನಂದ ಪುತ್ರನ್ ಮುಖ್ಯ ಅತಿಥಿಗಳಾಗಿದ್ದರು.

ವಿಜಯ ಬಂಗೇರ ಸ್ವಾಗತಿಸಿ ವಂದಿಸಿದರು.

 ಶಿಬಿರದಲ್ಲಿ 170ಕ್ಕೂ ಅಧಿಕ ಮಹಿಳೆಯರು ಪ್ರಯೋಜನ ಪಡೆದುಕೊಂಡರು.

Leave a comment

Your email address will not be published. Required fields are marked *

eMedia Kannada  @2025. All Rights Reserved.