• Home  
  •   ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಚಿಕ್ಕ ಮೇಳದ ತಿರುಗಾಟಕ್ಕೆ ಚಾಲನೆ (Kerekadu Shri Vinayaka kala Foundation‘s Chikka mela Starts)
- ಧಾರ್ಮಿಕ

  ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಚಿಕ್ಕ ಮೇಳದ ತಿರುಗಾಟಕ್ಕೆ ಚಾಲನೆ (Kerekadu Shri Vinayaka kala Foundation‘s Chikka mela Starts)

Share:   ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಚಿಕ್ಕ ಮೇಳದ ತಿರುಗಾಟಕ್ಕೆ ಚಾಲನೆ   ಯಕ್ಷಗಾನ ಸೇವೆಯಿಂದ ಆರಾಧನೆ : ಸುರೇಶ್ ಬಂಗೇರ (Moolki)ಮೂಲ್ಕಿ: ಯಕ್ಷಗಾನ ಕಲೆಯನ್ನು ಸೇವೆಯ ಮೂಲಕ ಆರಾಧನೆ ನಡೆಸುವ ಕಲಾಗಾರಿಕೆಯಾಗಿದ್ದು, ಗೆಜ್ಜೆ ಸೇವೆಯನ್ನು ಮನೆ ಮನೆಗೆ ತಲುಪಿಸುವ ಕೆಲಸವು ಜಾಗೃತ ಸಮಾಜದೊಂದಿಗೆ ಯಕ್ಷಗಾನ ಸಂಘಟನೆಯು ನಡೆಸುತ್ತಿರುವುದನ್ನು ಪೋಷಿಸಬೇಕು ಎಂದು ಸಸಿಹಿತ್ಲು ಶ್ರೀ ಭಗವತಿ ತಿಯಾ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬಂಗೇರ ಹೇಳಿದರು. ಅವರು ಮೂಲ್ಕಿ ಬಳಿಯ ಕೆರೆಕಾಡು ಶ್ರೀ ವಿನಾಯಕ […]

  ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಚಿಕ್ಕ ಮೇಳದ ತಿರುಗಾಟಕ್ಕೆ ಚಾಲನೆ  

ಯಕ್ಷಗಾನ ಸೇವೆಯಿಂದ ಆರಾಧನೆ : ಸುರೇಶ್ ಬಂಗೇರ

(Moolki)ಮೂಲ್ಕಿ: ಯಕ್ಷಗಾನ ಕಲೆಯನ್ನು ಸೇವೆಯ ಮೂಲಕ ಆರಾಧನೆ ನಡೆಸುವ ಕಲಾಗಾರಿಕೆಯಾಗಿದ್ದು, ಗೆಜ್ಜೆ ಸೇವೆಯನ್ನು ಮನೆ ಮನೆಗೆ ತಲುಪಿಸುವ ಕೆಲಸವು ಜಾಗೃತ ಸಮಾಜದೊಂದಿಗೆ ಯಕ್ಷಗಾನ ಸಂಘಟನೆಯು ನಡೆಸುತ್ತಿರುವುದನ್ನು ಪೋಷಿಸಬೇಕು ಎಂದು ಸಸಿಹಿತ್ಲು ಶ್ರೀ ಭಗವತಿ ತಿಯಾ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬಂಗೇರ ಹೇಳಿದರು.

ಅವರು ಮೂಲ್ಕಿ ಬಳಿಯ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಸಂಯೋಜನೆಯಲ್ಲಿ ಸಂಚಾರಿ ಚಿಕ್ಕ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಅಧ್ಯಕ್ಷ ಜಯಂತ ಅಮೀನ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಯಕ್ಷ ಗುರು ಅಜಿತ್ ಕೆರೆಕಾಡು, ಅಭಿಜಿತ್ ಕೆರೆಕಾಡು, ದುರ್ಗಾಪ್ರಸಾದ್, ಪ್ರೇಮಲತಾ, ಅನ್ವಿತ, ಲೋಹಿತ್, ನೀಲೇಶ, ಶಶಾಂಕ್ ಉಪಸ್ಥಿತರಿದ್ದರು.

ಫೌಂಡೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ರೇಷ್ಮಾ ಗಣೇಶ ಬಂಗೇರ ಸ್ವಾಗತಿಸಿದರು. ಅಶೋಕ್ ಕೆ. ವಂದಿಸಿದರು.

ಸಾಂಸ್ಕೃತಿಕ ಕಾರ್ಯದರ್ಶಿಗಳಾದ ವಾಣಿ ಹಾಗೂ ಮೂಕಾಂಬಿಕ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.