• Home  
  • ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಣೂರು ಕೂಸ ತಾಂಡೇಲರ ಮನೆಗೆ ಭೇಟಿ (MP Kota Shrinivasa Poojary visit Koosa Thandela’s home)
- ರಾಜಕೀಯ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಣೂರು ಕೂಸ ತಾಂಡೇಲರ ಮನೆಗೆ ಭೇಟಿ (MP Kota Shrinivasa Poojary visit Koosa Thandela’s home)

Share: ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಣೂರು ಕೂಸ ತಾಂಡೇಲರ ಮನೆಗೆ  ಭೇಟಿ  (Kota) ಕೋಟ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿಯವರು ಕೋಟದ ಮಣೂರು ಪಡುಕರೆ ಕೂಸ ತಾಂಡೇಲರ ಮನೆಗೆ ಭೇಟಿ ನೀಡಿ ಚುನಾವಣೆ ಸಂದರ್ಭದಲ್ಲಿ ಮುಖಂಡರ, ಕಾರ್ಯಕರ್ತರ ಕಾರ್ಯವೈಕರಿಯನ್ನು ಮೆಚ್ಚಿಕೊಂಡರು.  ಸ್ಥಳೀಯ ಮುಖಂಡರಾದ ಪ್ರಸ್ತುತ ದ.ಕ ಮೀನುಗಾರಿಕಾ ಫೆಡರೇಶನ್ ಉಪಾಧ್ಯಕ್ಷ ದೇವಪ್ಪ ಕಾಂಚನ್ ಸಂಸದರನ್ನು ಪುಷ್ಪ ನೀಡಿ ಸ್ವಾಗತಿಸಿಕೊಂಡು ವಿವಿಧ ಸ್ಥಳೀಯ ಮುಖಂಡರಲ್ಲಿ […]

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಣೂರು ಕೂಸ ತಾಂಡೇಲರ ಮನೆಗೆ  ಭೇಟಿ

 (Kota) ಕೋಟ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿಯವರು ಕೋಟದ ಮಣೂರು ಪಡುಕರೆ ಕೂಸ ತಾಂಡೇಲರ ಮನೆಗೆ ಭೇಟಿ ನೀಡಿ ಚುನಾವಣೆ ಸಂದರ್ಭದಲ್ಲಿ ಮುಖಂಡರ, ಕಾರ್ಯಕರ್ತರ ಕಾರ್ಯವೈಕರಿಯನ್ನು ಮೆಚ್ಚಿಕೊಂಡರು.

 ಸ್ಥಳೀಯ ಮುಖಂಡರಾದ ಪ್ರಸ್ತುತ ದ.ಕ ಮೀನುಗಾರಿಕಾ ಫೆಡರೇಶನ್ ಉಪಾಧ್ಯಕ್ಷ ದೇವಪ್ಪ ಕಾಂಚನ್ ಸಂಸದರನ್ನು ಪುಷ್ಪ ನೀಡಿ ಸ್ವಾಗತಿಸಿಕೊಂಡು ವಿವಿಧ ಸ್ಥಳೀಯ ಮುಖಂಡರಲ್ಲಿ ಕುಶಲೋಪರಿ ನಡೆಸಿದರು.

 ಈ ಸಂದರ್ಭದಲ್ಲಿ ಕೋಟ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯರಾದ ಅಜಿತ್ ದೇವಾಡಿಗ, ಚಂದ್ರ ಪೂಜಾರಿ, ಶೇಖರ್ ಗಿಳಿಯಾರ್, ಪ್ರದೀಪ್ ಸಾಲಿಯಾನ್, ಜಯಂತಿ ಪೂಜಾರಿ, ಶಾರದ ಆರ್ ಕಾಂಚನ್, ರತ್ನ ಮರಕಾಲ, ಪ್ರಸಾದ್ ಬಿಲ್ಲವ , ಮುಖಂಡರಾದ ಬೈಲ್ ಚಂದ್ರ, ಶಶಿಧರ ತಿಂಗಳಾಯ, ಅವಿನಾಶ್ ಹೊಳ್ಳ, ಕೂಸ ತಾಂಡೇಲರ ಪುತ್ರರಾದ ದಯಾನಂದ ಕಾಂಚನ್,ಸುರೇಶ್ ಕಾಂಚನ್ ಮತ್ತಿತರರು ಇದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.