• Home  
  • ರವಿರಾಜ್ ಎಚ್ ಪಿ ಇವರಿಗೆ ಸಿಜಿಕೆ ರಂಗ ಪುರಸ್ಕಾರ-2024 (Udupi : CGK Ranga puraskar -2024 For Raviraj HP)
- ಕರಾವಳಿ - ಮನೋರಂಜನೆ

ರವಿರಾಜ್ ಎಚ್ ಪಿ ಇವರಿಗೆ ಸಿಜಿಕೆ ರಂಗ ಪುರಸ್ಕಾರ-2024 (Udupi : CGK Ranga puraskar -2024 For Raviraj HP)

Share: ರವಿರಾಜ್ ಎಚ್ ಪಿ ಇವರಿಗೆ ಸಿಜಿಕೆ ರಂಗ ಪುರಸ್ಕಾರ-2024 (Udupi) ಉಡುಪಿ: ನಮ ತುಳುವೆರ್ ಕಲಾ ಸಂಘಟನೆ (ರಿ) ಮತ್ತು ಕರ್ನಾಟಕ ಬೀದಿ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ ‘ಸಿ ಜಿ ಕೆ ರಂಗಪುರಸ್ಕಾರ’ -2024 ಕ್ಕೆ  ಉಡುಪಿ ಜಿಲ್ಲೆಯಿಂದ ನಟ, ನಿರ್ದೇಶಕ, ಸಂಘಟಕ ರವಿರಾಜ್ ಎಚ್ ಪಿ ಆಯ್ಕೆಯಾಗಿದ್ದಾರೆ. ರವಿರಾಜ್‌ರವರು ಕಳೆದ 30 ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ನಟ ನಿರ್ದೇಶಕ ಸಂಘಟಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ನಟನೆಗೆ ಹಾಗೂ ನಿರ್ದೇಶನಕ್ಕೆ ರಾಜ್ಯ ಮಟ್ಟದ […]

ರವಿರಾಜ್ ಎಚ್ ಪಿ ಇವರಿಗೆ ಸಿಜಿಕೆ ರಂಗ ಪುರಸ್ಕಾರ-2024

(Udupi) ಉಡುಪಿ: ನಮ ತುಳುವೆರ್ ಕಲಾ ಸಂಘಟನೆ (ರಿ) ಮತ್ತು ಕರ್ನಾಟಕ ಬೀದಿ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ ‘ಸಿ ಜಿ ಕೆ ರಂಗಪುರಸ್ಕಾರ’ -2024 ಕ್ಕೆ  ಉಡುಪಿ ಜಿಲ್ಲೆಯಿಂದ ನಟ, ನಿರ್ದೇಶಕ, ಸಂಘಟಕ ರವಿರಾಜ್ ಎಚ್ ಪಿ ಆಯ್ಕೆಯಾಗಿದ್ದಾರೆ.

ರವಿರಾಜ್‌ರವರು ಕಳೆದ 30 ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ನಟ ನಿರ್ದೇಶಕ ಸಂಘಟಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ನಟನೆಗೆ ಹಾಗೂ ನಿರ್ದೇಶನಕ್ಕೆ ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳು ಬಂದಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಇವರ ಪರಿಕಲ್ಪನೆಯಲ್ಲಿ ನಡೆಸಿದ ಹೀಗೊಂದು ರಂಗ ಕಲಿಕೆ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ರವಿರಾಜ್‌ ಹಲವಾರು ಟಿವಿ ಧಾರವಾಹಿ, ಚಲನಚಿತ್ರ ಗಳಲ್ಲಿ ಪೋಷಕ ನಟನಾಗಿ ಪಾತ್ರ ನಿರ್ವಹಿಸಿರುತ್ತಾರೆ.

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇದರ ಸಂಚಾಲಕರಾಗಿ ಉಡುಪಿ ಜಿಲ್ಲೆಯಲ್ಲಿ ಹಲವಾರು ನಾಟಕ, ಸಾಂಸ್ಕೃತಿಕ ಉತ್ಸವಗಳನ್ನು ಕಳೆದ ಐದು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.

ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರವಿರಾಜ್‌ರವರಿಗೆ  ಪ್ರತಿಷ್ಠಿತ ‘ಸಿ ಜಿ ಕೆ ರಂಗಪುರಸ್ಕಾರ’ -2024 ಪ್ರಶಸ್ತಿ ಲಭಿಸಿದೆ ಎಂದು ನಮ ತುಳುವೆರ್ ಕಲಾ ಸಂಘಟನೆ (ರಿ) ಇದರ ಅಧ್ಯಕ್ಷರಾದ ಸುಕುಮಾರ್ ಮೋಹನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.