• Home  
  • ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಧಾನ ಪರಿಷತ್ ಸದಸ್ಯ ಡಿಸೋಜರವರಿಗೆ ಅಭಿನಂಧನಾ ಕಾರ್ಯಕ್ರಮ (Congratulatory Progamm for MLC Ivan D’souza by Surathkal Block Congress)
- ರಾಜಕೀಯ

ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಧಾನ ಪರಿಷತ್ ಸದಸ್ಯ ಡಿಸೋಜರವರಿಗೆ ಅಭಿನಂಧನಾ ಕಾರ್ಯಕ್ರಮ (Congratulatory Progamm for MLC Ivan D’souza by Surathkal Block Congress)

Share: ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಧಾನ ಪರಿಷತ್ ಸದಸ್ಯ ಡಿಸೋಜರವರಿಗೆ ಅಭಿನಂಧನಾ ಕಾರ್ಯಕ್ರಮ (Surathkal) ಸುರತ್ಕಲ್: ಎರಡನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧ ಆಯ್ಕೆಯಾದ  ಐವನ್ ಡಿಸೋಜರವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುರತ್ಕಲ್ ಚರ್ಚ್ ಸಭಾ ಭವನದಲ್ಲಿ ಅಭಿನಂಧನಾ ಕಾರ್ಯಕ್ರಮ ನಡೆಯಿತು.  ಅಭಿನಂದನೆ ಸ್ವೀಕರಿಸಿ ಮಾತನಾಡಿದ ಐವನ್ ಡಿಸೋಜಾ, ತಾಳ್ಮೆ ಮತ್ತು ನಿಷ್ಠೆ ಇದ್ದರೆ ರಾಜಕೀಯ ಸುಲಭ. ಅಧಿಕಾರ ಸಿಕ್ಕಿದರೆ ಮಾತ್ರ ಜನರ ಜೊತೆ […]

ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಧಾನ ಪರಿಷತ್ ಸದಸ್ಯ ಡಿಸೋಜರವರಿಗೆ ಅಭಿನಂಧನಾ ಕಾರ್ಯಕ್ರಮ

(Surathkal) ಸುರತ್ಕಲ್: ಎರಡನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧ ಆಯ್ಕೆಯಾದ  ಐವನ್ ಡಿಸೋಜರವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುರತ್ಕಲ್ ಚರ್ಚ್ ಸಭಾ ಭವನದಲ್ಲಿ ಅಭಿನಂಧನಾ ಕಾರ್ಯಕ್ರಮ ನಡೆಯಿತು.

 ಅಭಿನಂದನೆ ಸ್ವೀಕರಿಸಿ ಮಾತನಾಡಿದ ಐವನ್ ಡಿಸೋಜಾ, ತಾಳ್ಮೆ ಮತ್ತು ನಿಷ್ಠೆ ಇದ್ದರೆ ರಾಜಕೀಯ ಸುಲಭ. ಅಧಿಕಾರ ಸಿಕ್ಕಿದರೆ ಮಾತ್ರ ಜನರ ಜೊತೆ ಇರುವುದಲ್ಲ. ಇನಾಯತ್ ಅಲಿ ಅವರಂತೆ ಸೋತರೂ ಸದಾ ಕಾಲ ಜನರೊಂದಿಗೆ ಇರುವವನೇ ನಿಜವಾದ ರಾಜಕಾರಣಿ. ತನ್ನ ಅವಧಿಯಲ್ಲಿ ಕಾರ್ಯಕರ್ತರ ರಕ್ಷಣೆಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದರು.

 ಅಭಿನಂದಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಜನರ ನಡುವಿನ ಒಡನಾಟ ಹೋರಾಟದ ಫಲವಾಗಿ ಐವನ್ ಡಿಸೋಜ ಅವರು ವಿಧಾನ ಪರಿಷತ್ತಿಗೆ ಅವಿರೋಧ ಆಯ್ಕೆಯಾಗಿದ್ದಾರೆ. ಅವರ ಆಯ್ಕೆ ಜಿಲ್ಲೆಗೆ ಬಲ‌ ನೀಡಿದೆ ಎಂದರು.

 ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡ ಎಂ.ಜಿ. ಹೆಗ್ಡೆ ಮಾತನಾಡಿದರು.

ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ‌ ಚಿತ್ರಾಪುರ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಕೆಪಿಸಿಸಿ ಸದಸ್ಯರಾದ  ಪ್ರಥ್ವಿರಾಜ್, ಸದಾಶಿವ ಶೆಟ್ಟಿ, ಯುವ ಕಾರ್ಯಾಧ್ಯಕ್ಷ ಗಿರೀಶ ಆಳ್ವ, ಮನಪಾ ಸದಸ್ಯ ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಪುರುಷೋತ್ತಮ ಚಿತ್ರಾಪುರ ಸ್ವಾಗತಿಸಿದರು. ಬ್ಲಾಕ್ ಕಾರ್ಯದರ್ಶಿ ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.