• Home  
  • ಕುಂದಾಪುರ :  ಕಡಲ ಅಬ್ಬರಕ್ಕೆ ಪ್ರವಾಸಿ ತಾಣ ಕೋಡಿಯ ಸೀ ವಾಕ್‌ ಅಪಾಯದಲ್ಲಿ (Kundapura : Kodiʼs Sea walk in danger due to the sea boom)
- PROBLEMS - ಕರಾವಳಿ

ಕುಂದಾಪುರ :  ಕಡಲ ಅಬ್ಬರಕ್ಕೆ ಪ್ರವಾಸಿ ತಾಣ ಕೋಡಿಯ ಸೀ ವಾಕ್‌ ಅಪಾಯದಲ್ಲಿ (Kundapura : Kodiʼs Sea walk in danger due to the sea boom)

Share: ಕುಂದಾಪುರ :  ಕಡಲ ಅಬ್ಬರಕ್ಕೆ ಪ್ರವಾಸಿ ತಾಣ ಕೋಡಿಯ ಸೀ ವಾಕ್‌ ಅಪಾಯದಲ್ಲಿ (Kundapura) ಕುಂದಾಪುರ: ಅಲೆಯ ಆರ್ಭಟಕ್ಕೆ ಕುಂದಾಪುರದ ಖ್ಯಾತ ಪ್ರವಾಸಿ ತಾಣ ಸೀ ವಾಕ್ ನ ಪಕ್ಕದ ಗೋಡೆ ಅಪಾಯಕ್ಕೆ ಸಿಲುಕಿದೆ. ಕಳೆದ ಮುಂಗಾರಿನಲ್ಲಿ ಸಮುದ್ರದ ಅಲೆಗಳ ಹೊಡೆತದಿಂದ ಜರ್ಜರಿತಗೊಂಡಿದ್ದ ಸೈಡ್ ವಾಲ್ ನ ಸ್ಥಿತಿ ಈ ಬಾರಿ ಮತ್ತಷ್ಟು ಹದಗೆಟ್ಟಿದೆ. ಕಳೆದ 2 ದಿನಗಳಿಂದ ಏಳುತ್ತಿರುವ ಭಾರಿ ಅಲೆಗಳು ಟೆಟ್ರಾಪೋಡ್  ಮತ್ತು ಬದಿಯ ಕಲ್ಲುಗಳನ್ನು  ಕಡಲಿಗೆ ದೂಡುತ್ತಿದೆ. ಸೀ ವಾಕ್ ನ […]

ಕುಂದಾಪುರ :  ಕಡಲ ಅಬ್ಬರಕ್ಕೆ ಪ್ರವಾಸಿ ತಾಣ ಕೋಡಿಯ ಸೀ ವಾಕ್‌ ಅಪಾಯದಲ್ಲಿ

(Kundapura) ಕುಂದಾಪುರ: ಅಲೆಯ ಆರ್ಭಟಕ್ಕೆ ಕುಂದಾಪುರದ ಖ್ಯಾತ ಪ್ರವಾಸಿ ತಾಣ ಸೀ ವಾಕ್ ನ ಪಕ್ಕದ ಗೋಡೆ ಅಪಾಯಕ್ಕೆ ಸಿಲುಕಿದೆ.

ಕಳೆದ ಮುಂಗಾರಿನಲ್ಲಿ ಸಮುದ್ರದ ಅಲೆಗಳ ಹೊಡೆತದಿಂದ ಜರ್ಜರಿತಗೊಂಡಿದ್ದ ಸೈಡ್ ವಾಲ್ ನ ಸ್ಥಿತಿ ಈ ಬಾರಿ ಮತ್ತಷ್ಟು ಹದಗೆಟ್ಟಿದೆ. ಕಳೆದ 2 ದಿನಗಳಿಂದ ಏಳುತ್ತಿರುವ ಭಾರಿ ಅಲೆಗಳು ಟೆಟ್ರಾಪೋಡ್  ಮತ್ತು ಬದಿಯ ಕಲ್ಲುಗಳನ್ನು  ಕಡಲಿಗೆ ದೂಡುತ್ತಿದೆ. ಸೀ ವಾಕ್ ನ ಅಡಿಯಲ್ಲಿ ನೀರು ಸೋರುವಿಕೆ  ಆರಂಭಗೊಂಡಿದೆ.

    2016 ರಲ್ಲಿ ಗಂಗೊಳ್ಳಿ ಕೋಡಿ ಅಳಿವೆ ಪ್ರದೇಶದಲ್ಲಿ 102 ಕೋಟಿ ವೆಚ್ಚದ ಬ್ರೇಕ್ ವಾಟರ್ ನಿರ್ಮಿಸಲ್ಪಟ್ಟಿದೆ. ಕೋಡಿ ಭಾಗದಿಂದ 900ಮೀಟರ್  ಪಶ್ಚಿಮಕ್ಕೆ ಸಮುದ್ರದಲ್ಲಿ, ಅದೇ ರೀತಿ ಗಂಗೊಳ್ಳಿ ಭಾಗದಿಂದ  780 ಮೀಟರ್ ಉದ್ದ ಬ್ರೇಕ್ ವಾಟರ್ ಕಾಮಗಾರಿ ನಡೆದಿತ್ತು.

   ಕೋಡಿ –  ಗಂಗೊಳ್ಳಿ ಅಳಿವೆ ನಡುವಿನ 100 ಮೀಟರ್ ಅಗಲದಲ್ಲಿ ಕಾಮಗಾರಿ ನಡೆದಿದ್ದು, ಕೋಡಿ ಭಾಗದ ಬ್ರೇಕ್ ವಾಟರನ್ನು  ಸೀ ವಾಕ್ ನ್ನಾಗಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ  ಪರಿವರ್ತಿಸಿದ ಬಳಿಕ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ.

ಸೀ ವಾಕ್ ನ ಉದ್ದಕ್ಕೂ ಕಲ್ಲಿನ ಬೆಂಚು, ಸೋಲಾರ್ ದೀಪ ಅಳವಡಿಸಲಾಗಿದೆ.  ವಾರಾಂತ್ಯದಲ್ಲಿ 5ರಿಂದ 7 ಸಾವಿರ ಇಲ್ಲಿಗೆ ಆಗಮಿಸುತ್ತಾರೆ.

  ಪ್ರವಾಸಿಗೆ  ಸುರಕ್ಷತೆಯ ಹಿತದೃಷ್ಟಿಯಿಂದ ಸೀ ವಾಕ್ ನ ತುದಿಯಲ್ಲಿ 100ಮೀಟರ್ ನ ಅಂತರದಷ್ಟು ಕಾಂಕ್ರಿಟ್ ಗೋಡೆ ನಿರ್ಮಿಸಲಾಗಿದ್ದು, ಇದು ಈಗ ಅಪಾಯಕ್ಕೆ ಸಿಲುಕಿದೆ.

ಬೃಹತ್ ಅಲೆಗಳು  ಪ್ರವಾಸಿಗರನ್ನು ತಬ್ಬಿಬ್ಬಾಗಿಸುತ್ತದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.