ಮಣಿಪಾಲ: “ವೀಣಾ ಸಂಧ್ಯಾ” ಸರಣಿ ಕಾರ್ಯಕ್ರಮಕ್ಕೆ ಚಾಲನೆ
ಕಲಾಸ್ಪಂದನ ಕಲಾ ಶಾಲೆಯು ಮೂವತ್ತನೆ ಯ ವರ್ಷಕ್ಕೆ ಕಾಲಿಡುವ ಪ್ರಯುಕ್ತ ವರ್ಷದುದ್ದಕ್ಕೂ ಆಯೋಜಿಸುವ ಸರಣಿ ಕಾರ್ಯಕ್ರಮ.
(Manipala) ಮಣಿಪಾಲ: ಡಾ. ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ (ರಿ) ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ “ವೀಣಾ ಸಂಧ್ಯಾ” ಪಂಚ ವೀಣಾ ಕಾರ್ಯಕ್ರಮ ಮಣಿಪಾಲ ಮಂಚಿಯ ಗ್ರೀನ್ ವ್ಯಾಲಿ ಪ್ಯಾರಿಡೈಸ್ ರಿಟೈರ್ಮೆಂಟ್ ಹೋಂ ನಲ್ಲಿ ನೆರವೇರಿತು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಎಸ್ ಎನ್ ಕಮಲಾರವರು ಕಾರ್ಯಕ್ರಮ ಉದ್ಘಾಟಿಸಿದರು.
ಕಲಾ ಸ್ಪಂದನ, ಮಣಿಪಾಲದ ನಿರ್ದೇಶಕಿ ವಿದುಷಿ ಪವನ ಬಿ ಆಚಾರ್ ರವರ ಬಳಗದಿಂದ ರಿಟೈರ್ಮೆಂಟ್ ಹೋಂನಲ್ಲಿರುವವರಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿಪಂಚಿ ತಂಡ ವೀಣಾ ವಾದನವನ್ನು ನಡೆಸಿದರು. ಈ ಕಾರ್ಯಕ್ರಮವು ರಿಟೈರ್ಮೆಂಟ್ ಹೊಂನ ನಿವಾಸಿಗಳಿಂದ ಮೆಚ್ಚುಗೆ ಗಳಿಸಿತು.
ಡಾ. ಇಂದಿರಾ ಶಾನುಭೋಗ್, ಡಾ. ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ನ ಸದಸ್ಯರಾದ ಡಾ. ಬಾಲಚಂದ್ರ ಆಚಾರ್ ಹಾಗೂ ಗ್ರೀನ್ ವ್ಯಾಲಿ ಪ್ಯಾರಿಡೈಸ್ ರಿಟೈರ್ಮೆಂಟ್ ಹೋಂ ನ ಟ್ರಸ್ಟಿಗಳಾದ ಡಾ. ತಾರಾ ಶಾನುಭೋಗ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

