ಉಡುಪಿ: ಜನಾರ್ದನ ಅಡಿಗರಿಗೆ ಗೌರವಾಭಿನಂದನೆ
ವಿವೇಕ ಕಟ್ಟಡ ಮತ್ತು ಶಾಲಾ ಕೈ ತೋಟದ ಉದ್ಘಾಟನೆ.
(Udupi) ಉಡುಪಿ: ರಾವ್ ಬಹದ್ದೂರ್ ಗಣಪತಿ ರಾವ್ ಸ್ಮಾರಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಗೇರಿ ಯಲ್ಲಿ ವಿವೇಕ ಕಟ್ಟಡ ಮತ್ತು ಶಾಲಾ ಕೈ ತೋಟ ಉದ್ಘಾಟನೆ ಸಮಾರಂಭ ನೆರವೇರಿತು.
ಕುಂದಾಪುರ ಶಾಸಕ ಗುರುರಾಜ ಗಂಟಿಹೊಳೆ ಕಟ್ಟಡವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕೈ ತೋಟದ ಉದ್ಘಾಟಿಸಿದ ಡಾ. ಎ. ಎಸ್ ಉಡುಪರವರು ಪ್ರಾಕೃತಿಕ ಸಂಪತ್ತಿನ ರಕ್ಷಣೆ ಮತ್ತು ವಿದ್ಯಾರ್ಥಿ ಗಳ ಜವಾಬ್ಧಾರಿಯನ್ನು ಮನದಟ್ಟು ಮಾಡಿದರು.
ಕ್ಷೇತ್ರ ಶಿಕ್ಷಣ ಅಧಿಕಾರಿ ನಾಗೇಶ ನಾಯಕ್ ಅವರು ವಿದ್ಯಾರ್ಥಿಗಳಿಗೆ ನಿರಂತರ ಕಲಿಕಾ ಚಟುವಟಿಕೆಯ ಮಹತ್ವ ವಿವರಿಸಿದರು.
ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಕೊಡುಗೆ ನೀಡಿದ ವಿದ್ಯಾರ್ಥಿ ಜನಾರ್ಧನ ಅಡಿಗರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿಶಾಲಾಕ್ಷಿ ಮತ್ತು ಅಧ್ಯಾಪಕ ವೃಂದದವರು ಕಾರ್ಯಕ್ರಮ ನಿರ್ವಹಿಸಿದರು.

