• Home  
  • ಉಡುಪಿ: ವಿಕಲಚೇತನ ತಂಡದ ಹಸಿರು ಕ್ರಾಂತಿ (Udupi : Green Revolution of the disabled team)
- Mansoon

ಉಡುಪಿ: ವಿಕಲಚೇತನ ತಂಡದ ಹಸಿರು ಕ್ರಾಂತಿ (Udupi : Green Revolution of the disabled team)

Share: ಉಡುಪಿ: ವಿಕಲಚೇತನ ತಂಡದ ಹಸಿರು ಕ್ರಾಂತಿ ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳಲ್ಲಿ ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ. (Udupi) ಉಡುಪಿ : ವಿಕಲಚೇತನರ ಪರವಾಗಿ ಜಿಲ್ಲೆಯಲ್ಲಿ  ಕಾರ್ಯನಿರ್ವಹಿಸುತ್ತಿರುವ  ಡಾ. ಸೋನಿಯಾ ನೇತೃತ್ವದ ಪೀಸ್ ಫೌಂಡೇಶನ್ ನ್ಯಾಶನಲ್ ಎನ್‌ಜಿಓ  ಹಾಗೂ ಉಡುಪಿ ಜಿಲ್ಲಾ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಸಾವಿರ ಗಿಡಗಳನ್ನು ನೆಡುವ ಪರಸರ ಸ್ನೇಹಿ ಕಾರ್ಯಕ್ರಮಕ್ಕೆ ಉಡುಪಿ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ  ದೀಪ‌ ಬೆಳಗಿಸಿ‌ ಚಾಲನೆ ನೀಡಿದರು.  ನಗರದ ಅದಿ ಉಡುಪಿ ಬಳಿಯಿರುವ ವಲಯ […]

ಉಡುಪಿ: ವಿಕಲಚೇತನ ತಂಡದ ಹಸಿರು ಕ್ರಾಂತಿ

ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳಲ್ಲಿ ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ.

(Udupi) ಉಡುಪಿ : ವಿಕಲಚೇತನರ ಪರವಾಗಿ ಜಿಲ್ಲೆಯಲ್ಲಿ  ಕಾರ್ಯನಿರ್ವಹಿಸುತ್ತಿರುವ  ಡಾ. ಸೋನಿಯಾ ನೇತೃತ್ವದ ಪೀಸ್ ಫೌಂಡೇಶನ್ ನ್ಯಾಶನಲ್ ಎನ್‌ಜಿಓ  ಹಾಗೂ ಉಡುಪಿ ಜಿಲ್ಲಾ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಸಾವಿರ ಗಿಡಗಳನ್ನು ನೆಡುವ ಪರಸರ ಸ್ನೇಹಿ ಕಾರ್ಯಕ್ರಮಕ್ಕೆ ಉಡುಪಿ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ  ದೀಪ‌ ಬೆಳಗಿಸಿ‌ ಚಾಲನೆ ನೀಡಿದರು.

 ನಗರದ ಅದಿ ಉಡುಪಿ ಬಳಿಯಿರುವ ವಲಯ ಅರಣ್ಯ ಕಚೇರಿಯಲ್ಲಿ ನಡೆದ ಕಾರ್ಯಕಮದಲ್ಲಿ  ಮಾತನಾಡಿದ ಅವರು, ಪೀಸ್ ಪೌಂಡೇಶನ್ ಜಿಲ್ಲೆಯ ವಿವಿಧ ಶಾಲೆ ಹಾಗೂ ಸಂಘ ಸಂಸ್ಥೆಗಳಲ್ಲಿ ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಪರಿಸರ ಸ್ನೇಹಿ ಕಾರ್ಯಕ್ರಮಕ್ಕೆ ಹಮ್ಮಿಕೊಂಡಿದ್ದು, ಈ  ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ. ಇಂತಹ ಕಾರ್ಯಕ್ರಮಗಳು ಎಲ್ಲರಿಗೂ ಸ್ಪೂರ್ತಿ ತರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ  ಪಾಲ್ಗೊಂಡಿದ್ದ ಹಿರಿಯ ವಕೀಲ ಜಯಪ್ರಕಾಶ್ ಕೆದ್ಲಾಯ ಮಾತನಾಡಿ, ಹಸಿರೇ ನಮ್ಮ ಉಸಿರು, ಇವತ್ತು ಹಸಿರು ಕ್ರಾಂತಿ ಇಡೀ ದೇಶದಲ್ಲೇ ಅಗಬೇಕಾಗಿದೆ. ಅದಷ್ಟು ಶಾಲಾ ಕಾಲೇಜು, ಖಾಲಿ‌ ಜಾಗದಲ್ಲಿ ಮರಗಳನ್ನು‌‌ನೆಟ್ಟು‌ ಬೆಳಸಿದ್ದಲ್ಲಿ ನಮ್ಮ ಜೀವನ‌ ಸಾರ್ಥಕ ಎನಿಸುತ್ತದೆ. ಇವತ್ತು ವೀಕಲಚೇತನರೆಲ್ಲರೂ ಒಗ್ಗೂಡಿ ಸಾವಿರ ಗಿಡಗಳನ್ನು‌ ನೆಡುವ ಮೂಲಕ  ಹಸಿರು ಕ್ರಾಂತಿಗೆ ಮುಂದಾಗಿರುವುದು ಸಂತಸದ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನ ಜಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಯೋಜನಾ‌ ಸಹಾಯಕ ಶಿವಾಜಿ, ಪೀಸ್ ಪೌಂಡೇಶನ್ ಸಂಸ್ಥೆಯ ಜಗದೀಶ್ ಭಟ್, ಉದ್ಯಮಿಗಳಾದ ಸ್ಟಾನ್ಲಿ, ಪತ್ರಕರ್ತರಾದ ಜನಾರ್ದನ್ ಕೊಡವೂರು, ಶಿಜಿತ್, ಕಲಾವಿದ ಸಂದೇಶ್, ಯುವ ಉದ್ಯಮಿ ಕೆ.ಸಂದೀಪ್ ಉಪಸ್ಥಿತರಿದ್ದರು. ಅರಣ್ಯ ಇಲಾಖಾ ಸಿಬ್ಬಂದಿ ಕೇಶವ ಪೂಜಾರಿ ಕಾರ್ಯ ಕ್ರಮ‌ ನಿರ್ವಹಿಸಿದರು.

ಬಳಿಕ‌ ಅದಿ‌ ಉಡುಪಿ ಶಾಲಾ ವಾಠಾರದಲ್ಲಿ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.