• Home  
  • ಕಟಪಾಡಿ: ಹಿಂದೂ ರುದ್ರಭೂಮಿಗೆ ಸುಸಜ್ಜಿತ ಸ್ಟೀಲ್ ಬೆಂಚ್ ಕೊಡುಗೆ (Katapadi: A well equipped steel bench contribution to Hindhu Rudhrabhoomi)
- social service

ಕಟಪಾಡಿ: ಹಿಂದೂ ರುದ್ರಭೂಮಿಗೆ ಸುಸಜ್ಜಿತ ಸ್ಟೀಲ್ ಬೆಂಚ್ ಕೊಡುಗೆ (Katapadi: A well equipped steel bench contribution to Hindhu Rudhrabhoomi)

Share: ಕಟಪಾಡಿ: ಹಿಂದೂ ರುದ್ರಭೂಮಿಗೆ ಸುಸಜ್ಜಿತ ಸ್ಟೀಲ್ ಬೆಂಚ್ ಕೊಡುಗೆ (Katapadi) ಕಟಪಾಡಿ: ಸರಕಾರಿಗುಡ್ಡೆಯಲ್ಲಿರುವ ಕಟಪಾಡಿ ಗ್ರಾ. ಪಂ. ಇದರ ಸಾರ್ವಜನಿಕ ಹಿಂದೂ ರುದ್ರಭೂಮಿ ಮುಕ್ತಿಧಾಮ ಇಲ್ಲಿಗೆ ಮಾನವನ ಅಂತಿಮ ಸ್ನಾನದ ಅವಶ್ಯಕತೆಗಾಗಿ ಬಳಸಲಾಗುವ ಸುಸಜ್ಜಿತ ಸ್ಟೀಲ್ ಬೆಂಚ್ ಅನ್ನು ದಾನಿ ವಸಂತ ಪೂಜಾರಿ, ಲಲಿತಾ ಪೂಜಾರ್ತಿ ದಂಪತಿ ಕಟಪಾಡಿ ಗ್ರಾ.ಪಂ.ಗೆ ಹಸ್ತಾಂತರಿಸಿದರು. ಕಟಪಾಡಿ ಗ್ರಾ.ಪಂ. ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ ಅವರು ಸ್ಮಶಾನದ ಅಭಿವೃದ್ಧಿಗೆ ಸುಮಾರು 40 ಸಾವಿರಕ್ಕೂ ಅಧಿಕ ಮೌಲ್ಯದ ಸ್ಟೀಲ್ ಬೆಂಚ್ ಕೊಡುಗೆ […]

ಕಟಪಾಡಿ: ಹಿಂದೂ ರುದ್ರಭೂಮಿಗೆ ಸುಸಜ್ಜಿತ ಸ್ಟೀಲ್ ಬೆಂಚ್ ಕೊಡುಗೆ

(Katapadi) ಕಟಪಾಡಿ: ಸರಕಾರಿಗುಡ್ಡೆಯಲ್ಲಿರುವ ಕಟಪಾಡಿ ಗ್ರಾ. ಪಂ. ಇದರ ಸಾರ್ವಜನಿಕ ಹಿಂದೂ ರುದ್ರಭೂಮಿ ಮುಕ್ತಿಧಾಮ ಇಲ್ಲಿಗೆ ಮಾನವನ ಅಂತಿಮ ಸ್ನಾನದ ಅವಶ್ಯಕತೆಗಾಗಿ ಬಳಸಲಾಗುವ ಸುಸಜ್ಜಿತ ಸ್ಟೀಲ್ ಬೆಂಚ್ ಅನ್ನು ದಾನಿ ವಸಂತ ಪೂಜಾರಿ, ಲಲಿತಾ ಪೂಜಾರ್ತಿ ದಂಪತಿ ಕಟಪಾಡಿ ಗ್ರಾ.ಪಂ.ಗೆ ಹಸ್ತಾಂತರಿಸಿದರು.

ಕಟಪಾಡಿ ಗ್ರಾ.ಪಂ. ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ ಅವರು ಸ್ಮಶಾನದ ಅಭಿವೃದ್ಧಿಗೆ ಸುಮಾರು 40 ಸಾವಿರಕ್ಕೂ ಅಧಿಕ ಮೌಲ್ಯದ ಸ್ಟೀಲ್ ಬೆಂಚ್ ಕೊಡುಗೆ ನೀಡಿದ ದಾನಿಯನ್ನು  ಗೌರವಿಸಿದರು.

 ಈ ಸಂದರ್ಭ ಕಟಪಾಡಿ ಗ್ರಾ.ಪಂ. ಉಪಾಧ್ಯಕ್ಷೆ ಸುಗುಣಾ ಪೂಜಾರಿ, ಸದಸ್ಯರಾದ ಆಗ್ನೆಸ್ ಡೇಸ, ಶಾಲಿನಿಚಂದ್ರ ಪೂಜಾರಿ, ಸ್ಮಶಾನ ನಿರ್ವಾಹಕ ಕಿಶೋರ್ ಕುಮಾ‌ರ್, ಸಹಾಯಕ ಗುರುವ, ಸಮಾಜ ಸೇವಕ ಚಂದ್ರ ಪೂಜಾರಿ, ಗಣಪತಿ ಶೆಟ್ಟಿ, ನಿತೇಶ್ ದೇವಾಡಿಗ, ಕಟಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಅಶೋಕ್ ರಾವ್, ಕಾರ್ಯದರ್ಶಿ ವಿಮಲಾ, ರವಿ ಪೂಜಾರಿ, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.