• Home  
  • ಸಾಗರ್ ವಿದ್ಯಾ ಮಂದಿರ: 4ಕೋಟಿ ರೂ. ವೆಚ್ಚದ ಬೆಳ್ಳಿಹಬ್ಬ ಸ್ಮಾರಕ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ (Padubidri Sagar Vidhya mandir : 4Crore Rs Foundation Stone laying for silver festival School building)
- ಶಾಲಾ ಕಾಲೇಜು

ಸಾಗರ್ ವಿದ್ಯಾ ಮಂದಿರ: 4ಕೋಟಿ ರೂ. ವೆಚ್ಚದ ಬೆಳ್ಳಿಹಬ್ಬ ಸ್ಮಾರಕ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ (Padubidri Sagar Vidhya mandir : 4Crore Rs Foundation Stone laying for silver festival School building)

Share: ಸಾಗರ್ ವಿದ್ಯಾ ಮಂದಿರ: 4ಕೋಟಿ ರೂ. ವೆಚ್ಚದ ಬೆಳ್ಳಿಹಬ್ಬ ಸ್ಮಾರಕ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ PHOTO CREDIT : RAVI DIGITALS PADUBIDRI  ಪಡುಬಿದ್ರಿ, ಜು. 14: ಮೊಗವೀರ ಸಮಾಜದ ಹಿರಿಯರು ವಿದ್ಯಾಪ್ರಸಾರಕ್ಕಾಗಿ ಹುಟ್ಟುಹಾಕಿದ ಈ ಶಾಲೆ, ಸಾಗರ ವಿದ್ಯಾಮಂದಿರ ಶಾಲೆಯಾಗಿ ಸಮಾಜದ ಮೊತ್ತಮೊದಲ ಆಂಗ್ಲ ಮಾಧ್ಯಮ ಶಾಲಾ ರೂಪು ಪಡೆದು ಬೆಳೆಯುತ್ತಲೇ ಅನುಪಮ ಇತಿಹಾಸವುಳ್ಳ ಸಂಸ್ಥೆಯಾಗಿ ಮಾರ್ಪಟ್ಟಿದೆ. ಈ ಶಾಲೆಯನ್ನು ಮತ್ತಷ್ಟು ಉನ್ನತಿಗೆ ಒಯ್ಯೋಣವೆಂಬುದು ನಮ್ಮ ಬಯಕೆಯಾಗಿದೆ ಎಂದು  ಮೊಗವೀರ ಸಮಾಜದ ಹಿರಿಯರೂ, ಜಿ. […]

ಸಾಗರ್ ವಿದ್ಯಾ ಮಂದಿರ: 4ಕೋಟಿ ರೂ. ವೆಚ್ಚದ ಬೆಳ್ಳಿಹಬ್ಬ ಸ್ಮಾರಕ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ

PHOTO CREDIT : RAVI DIGITALS PADUBIDRI

 ಪಡುಬಿದ್ರಿ, ಜು. 14: ಮೊಗವೀರ ಸಮಾಜದ ಹಿರಿಯರು ವಿದ್ಯಾಪ್ರಸಾರಕ್ಕಾಗಿ ಹುಟ್ಟುಹಾಕಿದ ಈ ಶಾಲೆ, ಸಾಗರ ವಿದ್ಯಾಮಂದಿರ ಶಾಲೆಯಾಗಿ ಸಮಾಜದ ಮೊತ್ತಮೊದಲ ಆಂಗ್ಲ ಮಾಧ್ಯಮ ಶಾಲಾ ರೂಪು ಪಡೆದು ಬೆಳೆಯುತ್ತಲೇ ಅನುಪಮ ಇತಿಹಾಸವುಳ್ಳ ಸಂಸ್ಥೆಯಾಗಿ ಮಾರ್ಪಟ್ಟಿದೆ. ಈ ಶಾಲೆಯನ್ನು ಮತ್ತಷ್ಟು ಉನ್ನತಿಗೆ ಒಯ್ಯೋಣವೆಂಬುದು ನಮ್ಮ ಬಯಕೆಯಾಗಿದೆ ಎಂದು  ಮೊಗವೀರ ಸಮಾಜದ ಹಿರಿಯರೂ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕರೂ ಆಗಿರುವ ನಾಡೋಜಾ ಡಾ| ಜಿ. ಶಂಕರ್ ಹೇಳಿದರು.

ಅವರು ಭಾನುವಾರ ಪಡುಬಿದ್ರಿಯ ಸಾಗರ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲಾ ಬೆಳಿಹಬ್ಬ ಸ್ಮಾರಕ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ವಿದ್ಯೆಗೆ ಬಲು ಮಹತ್ವವಿದೆ. ಜಗದ ಒಳ್ಳೆಯ ವಿಚಾರಗಳು ವಿದ್ಯಾವಂತರೆನಿಸಿದಾಗ ನಮ್ಮತ್ತ ಇನ್ನಷ್ಟು ಹರಿದು ಬರುತ್ತವೆ. ಜಿ. ಶಂಕರ್ ಆಶಯದಂತೆ ಶಾಲಾ ಕಟ್ಟಡದ ನಿರ್ಮಾಣಕ್ಕೆ ನಾನೂ ಸಹಕರಿಸುವೆನು. ವಿದ್ಯೆಯಿಂದ ಸಂಸ್ಕಾರವನ್ನೀವ ಕಾರ್ಯವು ಇಲ್ಲಿ ಮತ್ತಷ್ಟು ಮುಂದುವರಿಯಲಿ ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ, ಪಡುಬಿದ್ರಿ ಬೀಡು ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ್ ಮಾತನಾಡಿದರು.

ಉಚ್ಚಿಲದ ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಗುತ್ತಿಗೆದಾರ ಪವನ್ ಆನಂದ್ ಎರ್ಮಾಳು, ಅರುಣಾ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕ ಅನಂತೇಶ್ ವಿ.  ಪ್ರಭು, ಕೆಪಿಸಿಸಿ ಕೋ ಆರ್ಡಿನೇಟರ್ ನವೀನ್ ಚಂದ್ರ ಜೆ. ಶೆಟ್ಟಿ, ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ವೈ. ಸುಧೀರ್‌  ಕುಮಾರ್, ಶಾಂತಾ ಎಲೆಕ್ಟ್ರಿಕಲ್ಸ್‌ ಆಡಳಿತ ನಿರ್ದೇಶಕ ಶ್ರೀಪತಿ ಭಟ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಅರುಣ್ ಶೆಟ್ಟಿ, ಬೆಳ್ಳಿಹಬ್ಬ ಕಟ್ಟಡ ಸಮಿತಿಯ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ, ಗ್ರಾಮಸಭೆಯ ಅಧ್ಯಕ್ಷರಾದ ಅಶೋಕ ಸಾಲ್ಯಾನ್, ಗಂಗಾಧರ ಕರ್ಕೇರ, ಪವಿತ್ರಾ ಗಿರೀಶ್, ಮಲ್ಲಿಕಾ ದಿನಕರ್, ನಾರಾಯಣ ಕರ್ಕೇರ,  ಹರಿಪ್ರಸಾದ್ ಎಚ್. ಮತ್ತಿತರರು ವೇದಿಕೆಯಲ್ಲಿದ್ದರು.

 ಮೂರನೇ ಬಾರಿಗೆ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಯ ಸಿ. ಕೋಟ್ಯಾನ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

ಕಾಡಿಪಟ್ಣ ನಡಿಪಟ್ಣ ವಿದ್ಯಾಪ್ರಚಾರಕ ಸಂಘದ ಅಧ್ಯಕ್ಷ, ಶಾಲಾ ಸಂಚಾಲಕ ಸುಕುಮಾರ್ ಶ್ರೀಯಾನ್ ಸ್ವಾಗತಿಸಿದರು.

ವಿನುತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪದ್ಮ್ಶಶ್ರೀ ರಾವ್ ವಂದಿಸಿದರು. ವೇ| ಮೂ| ರಾಮಕೃಷ್ಣ ಆಚಾರ್ಯ, ನಂದಕುಮಾರ್ ಆಚಾರ್ಯ ಅವರು ಶಿಲಾನ್ಯಾಸ ಕಾರ್ಯಕ್ರಮದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.