ರೋಟರಿ ಕ್ಲಬ್ ಕಟಪಾಡಿ ಪದಗ್ರಹಣ

ಕಳೆದ ಎರಡು ದಶಕಗಳಿಂದ ಸಮಾಜಮುಖಿ ಸೇವೆ: ರೋ. ಪಿಡಿಪಿ ಅಭಿನಂದನ ಎ ಶೆಟ್ಟಿ
(Katapadi) ಕಟಪಾಡಿ: ಜಾಗತಿಕ ಸೇವಾ ಸಂಸ್ಥೆ ರೋಟರಿ ಸ್ಥಳೀಯವಾಗಿ ವಿಸ್ತರಿಸಲ್ಪಟ್ಟು ಸಮುದಾಯದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತದೆ. ಕಳೆದ ಎರಡು ದಶಕಗಳಿಂದ ಸಮಾಜಮುಖಿಯಾಗಿ ತನ್ನ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಕಟಪಾಡಿ ರೋಟರಿ ತನ್ನ ಪರಂಪರೆಯನ್ನು ಮುಂದುವರಿಸಲಿ ಎಂದು ರೋಟರಿ ಜಿಲ್ಲೆ 3182 ಇದರ ಮಾಜಿ ಜಿಲ್ಲಾ ಗವರ್ನರ್ ಮೇಜರ್ ಡೋನರ್ ರೋ. ಪಿಡಿಪಿ ಅಭಿನಂದನ ಎ ಶೆಟ್ಟಿ ಹೇಳಿದರು.
ಕಟಪಾಡಿ ರೋಟರಿಯ 2024- 25 ನೇ ಸಾಲಿನ ನೂತನ ಅಧ್ಯಕ್ಷ ಸುನಿಲ್ ಡಿ ಬಂಗೇರ ಮತ್ತು ಅವರ ನೂತನ ಪದಾಧಿಕಾರಿಗಳ ತಂಡಕ್ಕೆ ಪದ ಪ್ರಧಾನ ನೆರವೇರಿಸಿ ಅವರು ಮಾತನಾಡಿದರು.
ಸಹಾಯಕ ಗವರ್ನರ್ ಪಿ ಎಚ್ ಎಫ್ ಜಗನ್ನಾಥ ಕೋಟೆ, ವಲಯ ಸೇನಾನಿ ಹೇಮಂತ್ ಯು ಕಾಂತ್ ಅವರು ತಮ್ಮ ಅನಿಸಿಕೆಗಳೊಂದಿಗೆ ನೂತನ ತಂಡಕ್ಕೆ ಶುಭ ಹಾರೈಸಿದರು.
ನೂತನ ಅಧ್ಯಕ್ಷ ಸುನಿಲ್ ಡಿ ಬಂಗೇರ ಮಾತನಾಡಿ, ಕಳೆದ ಎರಡು ದಶಕಗಳಿಂದ ಕಟಪಾಡಿ ರೋಟರಿ ನಡೆಸಿಕೊಂಡು ಬಂದ ಸೇವಾ ಪರಂಪರೆಗೆ ಚ್ಯುತಿ ಬಾರದ ರೀತಿಯಲ್ಲಿ ಎಲ್ಲರ ಸಹಕಾರದೊಂದಿಗೆ ಕ್ಲಬ್ಬನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದರು.
ಈ ಸಂದರ್ಭ ಕ್ಲಬ್ ನ ಪತ್ರಿಕೆ ಸ್ಪಂದನ ಬಿಡುಗಡೆಗೊಳಿಸಲಾಯಿತು.
ಅಖಿಲೇಶ್ ಕೋಟ್ಯಾನ್, ಸತೀಶ್ ಚಂದ್ರ, ಇಕ್ಬಾಲ್, ಸಂಶುದ್ದೀನ್ ಅವರು ನೂತನ ಸದಸ್ಯತ್ವ ಪಡೆದುಕೊಂಡರು.
ಗಣಿತ ಶಾಸ್ತ್ರದಲ್ಲಿ ಪಿ ಎಚ್ ಡಿ ಪಡೆದ ವರ್ಷ ಅರ್ಜುನ್ ಅವರನ್ನು ಸನ್ಮಾನಿಸಲಾಯಿತು.
ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಪೂರ್ವ ವಲಯ ಸೇನಾನಿ ಡಾ. ಕೆಂಪರಾಜ್, ರೊ. ಗಣೇಶ್ ಕಿಣಿ, ರಿತೇಶ್ ಬಿ ಕೋಟ್ಯಾನ್, ಶಕುಂತಲಾ ಎ ಪೂಜಾರಿ ಇವರನ್ನು ಗೌರವಿಸಲಾಯಿತು.
ನಿಕಟ ಪೂರ್ವ ಅಧ್ಯಕ್ಷ ರಿತೇಶ್ ಕೋಟ್ಯಾನ್ ಸ್ವಾಗತಿಸಿದರು. ಶಕುಂತಲಾ ಎ ಪೂಜಾರಿ ವರದಿ ವಾಚಿಸಿದರು. ಸತ್ಯೇಂದ್ರ ಪೈ, ಗಿರಿಧರ ಶೆಟ್ಟಿ, ವಿಲ್ಫ್ರೆಡ್, ಆಶಾ ಅಂಚನ್, ತುಳಸಿ ದೇವಾಡಿಗ, ಡಾ. ಉದಯಕುಮಾರ್ ಶೆಟ್ಟಿ, ಶ್ರೀಕರ ಅಂಚನ್ ಪರಿಚಯಿಸಿದರು.
ಕಟಪಾಡಿ ಶಂಕರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಲಕ್ಷ್ಮಿ ಬಿ. ವಂದಿಸಿದರು.

