ಕಾಪು :ಯುವವಾಹಿನಿ ವತಿಯಿಂದ ಕುಟುಂಬೋತ್ಸವ, ವನಮಹೋತ್ಸವ, ಮತ್ತು ಸಾಧಕರಿಗೆ ಸಮ್ಮಾನ
(Kaup) ಕಾಪು : ಯುವವಾಹಿನಿ ಕಾಪು ಘಟಕದ ಕುಟುಂಬೋತ್ಸವ, ವನಮಹೋತ್ಸವ ಮತ್ತು ಸನ್ಮಾನ ಕಾರ್ಯಕ್ರಮವು ಮಜೂರು ಗ್ರೀನ್ ವುಡ್ ರೆಸಾರ್ಟಿನಲ್ಲಿ ನಡೆಯಿತು.
ಉಪ ವಲಯ ಅರಣ್ಯಾಧಿಕಾರಿ ಕೇಶವ್ ಪೂಜಾರಿ ಸಸಿ ವಿತರಿಸಿ, ವನಮಹೋತ್ಸವದ ಮಹತ್ವವನ್ನು ವಿವರಿಸಿದರು.
ಬಡಾ ಎರ್ಮಾಳು ಕುದ್ರೊಟ್ಟು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮಂಡಳಿ ಅಧ್ಯಕ್ಷ ಸುಕೇಶ್ ಎರ್ಮಾಳು, ಮೂಳೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ವಿ. ಅಂಚನ್ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು.
ಸದಸ್ಯರಿಗೆ ಆಯುರ್ವೇದ ಔಷಧಿಯ ಗುಣಗಳುಳ್ಳ ಪಲಾಶ, ರಾಮಪತ್ರೆ, ಪುತ್ರನ್ಜೀವ, ಬೇಂಗ ಮತ್ತು ಪುನರ್ಪುಳಿ ಗಿಡಗಳನ್ನು ವಿತರಿಸಲಾಯಿತು.
ದೀಪಕ್ ಕುಮಾರ್ ಎರ್ಮಾಳು, ಯುವವಾಹಿನಿ ನಿಕಟ ಪೂರ್ವಾಧ್ಯಕ್ಷ ಸಚಿನ್ ಕುಮಾರ್, ಪೂರ್ವಾಧ್ಯಕ್ಷ ಸುಧಾಕರ್ ಸಾಲ್ಯಾನ್, ಉಪಾಧ್ಯಕ್ಷ ಶಶಿಧರ್ ಸುವರ್ಣ, ಕಾಪು ಬಿಲ್ಲವರ ಸಹಾಯಕ ಸಂಘದ ಶ್ರೀ ನಾರಾಯಣ ಗುರು ಸೇವಾ ಮಹಿಳಾ ಮಂಡಳಿ ಅಧ್ಯಕ್ಷೆ ಸರಿತಾ ಸಾಲ್ಯಾನ್, ಸುನೀಲ್ ಕುಮಾರ್ ಉಪಸ್ಥಿತರಿದ್ದರು.
ಯುವವಾಹಿನಿ ಕಾಪು ಘಟಕದ ಅಧ್ಯಕ್ಷ ಸೂರ್ಯನಾರಾಯಣ್ ಸುವರ್ಣ ಸ್ವಾಗತಿಸಿದರು.
ಉಪಾಧ್ಯಕ್ಷೆ ಭವಾನಿ ಶೇಖರ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಜೂರು ಮತ್ತು ಪುಷ್ಪಾ ದೇವರಾಜ್ ಕಾರ್ಯಕ್ರಮ ನಿರೂಪಿಸಿದರು.

