• Home  
  • ಉಡುಪಿ: ನಾರಾಯಣಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ವಾರ್ಷಿಕ ಮಹಾಸಭೆ (Udupi: Annual General Meeting of Narayana Guru Urban Co-Op Bank)
- ಸಂಘ, ಸಂಸ್ಥೆಗಳು

ಉಡುಪಿ: ನಾರಾಯಣಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ವಾರ್ಷಿಕ ಮಹಾಸಭೆ (Udupi: Annual General Meeting of Narayana Guru Urban Co-Op Bank)

Share: ಉಡುಪಿ: ನಾರಾಯಣಗುರು ಅರ್ಬನ್ ಕೋ–ಆಪರೇಟಿವ್ ಬ್ಯಾಂಕ್‌ನ ವಾರ್ಷಿಕ ಮಹಾಸಭೆ (Udupi) ಉಡುಪಿ : ನಾರಾಯಣಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ, ಉಡುಪಿ, ಇದರ 2023 – 2024 ನೇ ಸಾಲಿನ 22 ನೇ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯು ಉಡುಪಿ ಬನ್ನಂಜೆಯ ಬಿಲ್ಲವರ ಸೇವಾ ಸಂಘದ  ಶಿವಗಿರಿ ಸಭಾಂಗಣದಲ್ಲಿನೆರವೇರಿತು. ಬ್ಯಾಂಕ್ ಅಧ್ಯಕ್ಷರಾದ ಹರಿಶ್ಚಂದ್ರ ಅಮೀನ್‌ರವರುಇವರ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕ ಸಾಮಾನ್ಯ ಸಭೆಯನ್ನು ಬ್ಯಾಂಕಿನ ಮಾರ್ಗದರ್ಶಕರಾದ ರಾಮಚಂದ್ರ ಕಿದಿಯೂರು ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ […]

ಉಡುಪಿ: ನಾರಾಯಣಗುರು ಅರ್ಬನ್ ಕೋ–ಆಪರೇಟಿವ್ ಬ್ಯಾಂಕ್‌ನ ವಾರ್ಷಿಕ ಮಹಾಸಭೆ

(Udupi) ಉಡುಪಿ : ನಾರಾಯಣಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ, ಉಡುಪಿ, ಇದರ 2023 – 2024 ನೇ ಸಾಲಿನ 22 ನೇ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯು ಉಡುಪಿ ಬನ್ನಂಜೆಯ ಬಿಲ್ಲವರ ಸೇವಾ ಸಂಘದ  ಶಿವಗಿರಿ ಸಭಾಂಗಣದಲ್ಲಿನೆರವೇರಿತು.

ಬ್ಯಾಂಕ್ ಅಧ್ಯಕ್ಷರಾದ ಹರಿಶ್ಚಂದ್ರ ಅಮೀನ್‌ರವರುಇವರ ಅಧ್ಯಕ್ಷತೆ ವಹಿಸಿದ್ದರು.

ವಾರ್ಷಿಕ ಸಾಮಾನ್ಯ ಸಭೆಯನ್ನು ಬ್ಯಾಂಕಿನ ಮಾರ್ಗದರ್ಶಕರಾದ ರಾಮಚಂದ್ರ ಕಿದಿಯೂರು ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಮಲ್ಪೆ ರಾಘವೇಂದ್ರರವರು ಜಂಟಿಯಾಗಿ ಉದ್ಘಾಟಿಸಿ ಶುಭ ಹಾರೈಸಿದರು. 

 ಬ್ಯಾಂಕ್‌ ಅಧ್ಯಕ್ಷ ಹರಿಶ್ಚಂದ್ರ ಅಮೀನ್ ಮಾತನಾಡಿ,  ನಮ್ಮ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕಿನ ಮಾನ್ಯತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಅಧುನಿಕ ಸೌಲಭ್ಯಗಳಾದ ಕೋರ್ ಬ್ಯಾಂಕಿಂಗ್, ಆರ್ ಟಿ ಜಿ ಎಸ್,  ನೆಪ್ಟ್ , ಸಿ ಟಿ ಎಸ್ ಚೆಕ್ ಕ್ಲಿಯರಿಂಗ್, ಸೇಫ್ ಲಾಕರ್ ಸೌಲಭ್ಯಗಳನ್ನು ಒಳಗೊಂಡಿದೆ.

ಗ್ರಾಹಕರ ಐದು ಲಕ್ಷದವರೆಗಿನ ಠೇವಣಿಗಳಿಗೆ ಡಿ ಐ ಸಿ ಜಿ ಸಿ. ವಿಮಾ ಸೌಲಭ್ಯವನ್ನು ಹೊಂದಿದೆ. ಸ್ವಸಹಾಯ ಗುಂಪಿನ ಸದಸ್ಯರಿಗೆ ಅತ್ಯಂತ ಕಡಿಮೆ ಬಡ್ಡಿಯ ಸಾಲವನ್ನು ನೀಡುತ್ತಿದ್ದು, ಚಿನ್ನಾಭರಣ ಈಡಿನ ಸಾಲ, ಗೃಹ ನಿರ್ಮಾಣ ಸಾಲ, ಅಡಮಾನ ಸಾಲ, ಭದ್ರತಾ ಸಾಲ , ವೈಯಕ್ತಿಕ ಸಾಲ, ವಾಹನ ಸಾಲ, ವೇತನಾಧಾರಿತ ಸಾಲ ಹಾಗೂ ವ್ಯಾಪಾರ ಅಭಿವೃದ್ಧಿ ಸಾಲಗಳನ್ನು ವಾಣಿಜ್ಯ ಬ್ಯಾಂಕಿನ ಬಡ್ಡಿ ದರಕ್ಕೆ ಸ್ಪರ್ಧಾತ್ಮಕವಾಗಿ ನೀಡಲಾಗುತ್ತದೆ.

 ಗ್ರಾಹಕರ ಠೇವಣಿಗೆ ಅತ್ಯಧಿಕ ಬಡ್ಡಿಯನ್ನು ನೀಡುತ್ತಿದ್ದು, ಹಿರಿಯ ನಾಗರಿಕರಿಗೆ 0.5% ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಗ್ರಾಹಕರ ಹಾಗೂ ಆಡಳಿತ ಮಂಡಳಿಯ ಸಹಕಾರ ಸಿಬ್ಬಂದಿಗಳ ನಗುಮೊಗದ ಸೇವೆ ಸದಸ್ಯರ ಪ್ರೋತ್ಸಾಹದಿಂದ ನಮ್ಮ ಬ್ಯಾಂಕ್ ಉತ್ತಮ ಲಾಭವನ್ನು ಕಾಣುವಂತಾಗಿದೆ ಎಂದರು. 

ಬ್ಯಾಂಕ್‌ ನಿರ್ದೇಶಕರಾದ ಶಿವಾಜಿ ಸುವರ್ಣ ಪ್ರಾಸ್ತಾವಿಕ ವಾಗಿ ಮಾತನಾಡಿದರು.

    ಸದಸ್ಯರಾದ ಗುರದತ್ ಅಮೀನ್ , ನಾರಾಯಣ ಬಿ ಎಸ್, ರಮೇಶ್  ಬಂಗೇರ, ಶೇಖರ್ ಕೋಟ್ಯಾನ್ ಮತ್ತು ದಿವಾಕರ್ ಸನಿಲ್ ಬ್ಯಾಂಕಿನ ಅಭಿವೃದ್ಧಿಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿ ಬ್ಯಾಂಕನ್ನು ಲಾಭದತ್ತ ಮುನ್ನಡೆಸಿದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸಿದರು.

  ನಿರ್ದೇಶಕರಾದ ಕೆ. ಜಯಕುಮಾರ್‌, ಪ್ರಭಾಕರ ಬಂಗೇರ ಬಿ.ಬಿ. ಪೂಜಾರಿ,  ಜಯಕುಮಾರ್ ಪರ್ಕಳ, ಆನಂದ ಜತ್ತನ್ನ, ಶೇಕರ ಬಿ ಪೂಜಾರಿ, ರಮೇಶ್ ಕೆ. ಕೋಟ್ಯಾನ್ , ಅಶೋಕ್ ಕುಮಾರ್, ಸತೀಶ್ ಅರಳೀ ಕೊಪ್ಪ,ಅರಣ್ ಜತ್ತನ್ನ, ವೃತ್ತಿಪರ ನಿರ್ದೇಶಕರಾದ ಬಾಸ್ಕರ ಪೂಜಾರಿ ಹಾಗೂ ಕೃಷ್ಣ ಬಿಲ್ಲವ ಸಭೆಯಲ್ಲಿ ಉಪಸ್ಥಿತರಿದ್ದರು.

ಬ್ಯಾಂಕಿನ ಅಧ್ಯಕ್ಷ ಹರೀಶ್ಚಂದ್ರ ಅಮೀನ್‌ ಸ್ವಾಗತಿಸಿದರು.

ಬ್ಯಾಂಕಿನ ನಿರ್ದೇಶಕರಾದ ಶಕುಂತಲ ಶ್ರೀನಿವಾಸ್ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಶನ್ ಫೌಸ್ಟಿನ್ ಆಲ್ವರವರು ಬ್ಯಾಂಕಿನ 21ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ವರದಿಯನ್ನು ವಾಚಿಸಿದರು.

ಉಪಾಧ್ಯಕ್ಷರಾದ ವಿಜಯ ಗೋಪಾಲ ಬಂಗೇರ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.