• Home  
  • ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ರೋಟರಿ ಉಡುಪಿಯಿಂದ ವನಮಹೋತ್ಸವ (Vanamahothsava by Udupi Rotary at Kalyanpura Milagris College)
- ಶಾಲಾ ಕಾಲೇಜು - ಸಂಘ, ಸಂಸ್ಥೆಗಳು

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ರೋಟರಿ ಉಡುಪಿಯಿಂದ ವನಮಹೋತ್ಸವ (Vanamahothsava by Udupi Rotary at Kalyanpura Milagris College)

Share: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ರೋಟರಿ ಉಡುಪಿಯಿಂದ ವನಮಹೋತ್ಸವ (Kalyanpura) ಕಲ್ಯಾಣಪುರ : ಕಲ್ಯಾಣಪುರ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಸಯನ್ಸ್ ಮತ್ತು ಇಕೊ ಕ್ಲಬ್  ಜಂಟಿಯಾಗಿ ರೋಟರಿ ಕ್ಲಬ್‌ ಉಡುಪಿಯು ನಿರ್ಮಿಸಿದ ಮಿಯಾವಾಕಿ ಕಾಡಿನ ಬಳಿ ರೋಟರಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಗಿಡಗಳನ್ನು ನಡುವುದರ ಮೂಲಕ ವನಮಹೋತ್ಸವ ವನ್ನು ಆಚರಿಸಿದರು. ಪ್ರಾಂಶುಪಾಲೆ ಶ್ರೀಮತಿ ಸವಿತಾ ಕುಮಾರಿಯವರು ಪರಿಸರ ಸಂರಕ್ಷಣೆಯ ಅಗತ್ಯತೆ, ವನಮಹೋತ್ಸವದ ಇತಿಹಾಸ ಮತ್ತು ಉದ್ಧೇಶ ಗಳ ಬಗ್ಗೆ ವಿದ್ಯಾರ್ಥಿಗಳಿಗೆ  ಮಾಹಿತಿ ನೀಡಿದರು. ರೋಟರಿ ಅದ್ಯಕ್ಷ […]

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ರೋಟರಿ ಉಡುಪಿಯಿಂದ ವನಮಹೋತ್ಸವ

(Kalyanpura) ಕಲ್ಯಾಣಪುರ : ಕಲ್ಯಾಣಪುರ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಸಯನ್ಸ್ ಮತ್ತು ಇಕೊ ಕ್ಲಬ್  ಜಂಟಿಯಾಗಿ ರೋಟರಿ ಕ್ಲಬ್‌ ಉಡುಪಿಯು ನಿರ್ಮಿಸಿದ ಮಿಯಾವಾಕಿ ಕಾಡಿನ ಬಳಿ ರೋಟರಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಗಿಡಗಳನ್ನು ನಡುವುದರ ಮೂಲಕ ವನಮಹೋತ್ಸವ ವನ್ನು ಆಚರಿಸಿದರು.

ಪ್ರಾಂಶುಪಾಲೆ ಶ್ರೀಮತಿ ಸವಿತಾ ಕುಮಾರಿಯವರು ಪರಿಸರ ಸಂರಕ್ಷಣೆಯ ಅಗತ್ಯತೆ, ವನಮಹೋತ್ಸವದ ಇತಿಹಾಸ ಮತ್ತು ಉದ್ಧೇಶ ಗಳ ಬಗ್ಗೆ ವಿದ್ಯಾರ್ಥಿಗಳಿಗೆ  ಮಾಹಿತಿ ನೀಡಿದರು.

ರೋಟರಿ ಅದ್ಯಕ್ಷ ರೋ. ಗುರುರಾಜ ಭಟ್‌ರವರು  ಪ್ಲಾಸ್ಟಿಕ್ ಬಳಕೆ, ಅದರ ಅಸಮರ್ಪಕ ವಿಲೆವಾರಿಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ಮತ್ತು ವಿದ್ಯಾರ್ಥಿಗಳು ಈ ಬಗ್ಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.

 ಕಾರ್ಯಕ್ರಮದಲ್ಲಿ ಇಕೋ ಕ್ಲಬ್ ನ ಸಂಚಾಲಕಿ ಲೊಲೆಟಾ ಡಿಸೋಜ, ಸಹ ಸಂಚಾಲಕಿ ರೋಷನಿ ಸೋನ್ಸ್, ಕಾರ್ಯದರ್ಶಿ ರೋ. ವೈಷ್ಣವಿ ಆಚಾರ್ಯ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ರೋ. ರಘುಪತಿ ಉಪಾಧ್ಯ, ರೋ. ರಾಮಚಂದ್ರ ಉಪಾಧ್ಯಾಯ, ರೊ. ಹೇಮಂತಕಾಂತ, ರೋ. ಶುಭಲಕ್ಷ್ಮಿ ಭಟ್ ಮತ್ತು ರೋ. ಸಾಧನಾ ಮುಂಡ್ಕೂರ್ ಬಾಗವಹಿಸಿದ್ದರು.

  ವಿದ್ಯಾರ್ಥಿ ಕುಮಾರಿ ಚಂದನ ಸ್ವಾಗತಿದರು.  ಕಾಲೇಜಿನ  ಶ್ರೀಮತಿ ಸವಿತಾ ಕುಮಾರಿಯವರು ವಿದ್ಯಾರ್ಥಿಗಳಿಗೆ ವನಮಹೋತ್ಸವದ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿ ರೋಟರಿ ಉಡುಪಿಯ ಸಹಕಾರಕ್ಕೆ ಧನ್ಯವಾದ ವಿತ್ತರು.

Leave a comment

Your email address will not be published. Required fields are marked *

eMedia Kannada  @2025. All Rights Reserved.