ಉಡುಪಿ: ಶ್ರೀಕೃಷ್ಣನಿಗಿಂದು ಬಾಲಕೃಷ್ಣನ ಅಲಂಕಾರ; ಮಠಾಧೀಶರಿಂದ ಉತ್ಸವ ಪ್ರಯುಕ್ತ ವಿಶೇಷ ಪೂಜೆ
(Udupi) ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶ್ರೀ ಅದಮಾರು ಮಠದ ಹಿರಿಯ ಶ್ರೀಪಾದರು ಶ್ರೀ ಕೃಷ್ಣನಿಗೆ ಉಷಾ ಕಾಲದ ಪೂಜೆ, ಅಭಿಷೇಕವನ್ನು ಮಾಡಿ ಪಂಚಾಮೃತ ಅಭಿಷೇಕದೊಂದಿಗೆ ಪೂಜೆ ನೆರವೇರಿಸಿದರು.
ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ತೀರ್ಥ ಪೂಜೆ, ಅಭಿಷೇಕ ಪೂಜೆ, ಹಾಗೂ ಶ್ರೀ ಕೃಷ್ಣನಿಗೆ ವಿಶೇಷ ಬಾಲಕೃಷ್ಣನ ಅಲಂಕಾರವನ್ನು ಮಾಡಿ ಅಲಂಕಾರ ಪೂಜೆ ಮಾಡಿದರು.
ನಂತರ ಪುತ್ತಿಗೆ ಹಿರಿಯ ಶ್ರೀಪಾದರು ತುಳಸಿ ಅರ್ಚನೆಯೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪರ್ವಕಾಲದಲ್ಲಿ ಮಹಾ ಪೂಜೆಯನ್ನು ನೆರವೇರಿಸಿದರು.

