• Home  
  • ಕಾಪು ಜೇಸಿಐ ವತಿಯಿಂದ ಮುದ್ದು ಕೃಷ್ಣ ವೇಷ ಸ್ಪರ್ಧೆ (Muddu Krishna Contest by Kaup JCI)
- fastival

ಕಾಪು ಜೇಸಿಐ ವತಿಯಿಂದ ಮುದ್ದು ಕೃಷ್ಣ ವೇಷ ಸ್ಪರ್ಧೆ (Muddu Krishna Contest by Kaup JCI)

Share: ಕಾಪು ಜೇಸಿಐ ವತಿಯಿಂದ ಮುದ್ದು ಕೃಷ್ಣ ವೇಷ ಸ್ಪರ್ಧೆ (Kaup) ಕಾಪು: ಕಾಪು ಜೇಸಿಐ ವತಿಯಿಂದ ದಿ. ಜಗದೀಶ್ ಆಚಾರ್ಯ ಸ್ಮರಣಾರ್ಥ ಜಯಲಕ್ಷ್ಮೀ ಜ್ಯುವೆಲ್ಲರ್ಸ್ ಸಹಭಾಗಿತ್ವದೊಂದಿಗೆ ಕಾಪು‌ ಶ್ರೀ ಲಕ್ಷ್ಮೀ ಜನಾರ್ದನ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಮುದ್ದು ಕೃಷ್ಣ ವೇಷ ಸ್ಪರ್ಧೆಯನ್ನು ವೇ. ಮೂ.‌ ಕೊರಂಗ್ರಪಾಡಿ ಶ್ರೀನಿವಾಸ ತಂತ್ರಿ ಮಡುಂಬು ಅವರು ಮಂಗಳವಾರ ಉದ್ಘಾಟಿಸಿದರು.   ಬಳಿಕ ಮಾತನಾಡಿದ ಅವರು, ಮುದ್ದುಕೃಷ್ಣ ವೇಷ ಸ್ಪರ್ಧೆಯ ಮೂಲಕವಾಗಿ ಅಲಂಕಾರ ಪ್ರಿಯನಾದ ಕೃಷ್ಣನನ್ನು ಬಹು‌ ಅಲಂಕಾರ, ವೇಷಗಳೊಂದಿಗೆ ವೇದಿಕೆಯಲ್ಲಿ ಕಾಣುವ ಸುವರ್ಣಾವಕಾಶ ನಮಗೆ‌ […]

ಕಾಪು ಜೇಸಿಐ ವತಿಯಿಂದ ಮುದ್ದು ಕೃಷ್ಣ ವೇಷ ಸ್ಪರ್ಧೆ

(Kaup) ಕಾಪು: ಕಾಪು ಜೇಸಿಐ ವತಿಯಿಂದ ದಿ. ಜಗದೀಶ್ ಆಚಾರ್ಯ ಸ್ಮರಣಾರ್ಥ ಜಯಲಕ್ಷ್ಮೀ ಜ್ಯುವೆಲ್ಲರ್ಸ್ ಸಹಭಾಗಿತ್ವದೊಂದಿಗೆ ಕಾಪು‌ ಶ್ರೀ ಲಕ್ಷ್ಮೀ ಜನಾರ್ದನ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಮುದ್ದು ಕೃಷ್ಣ ವೇಷ ಸ್ಪರ್ಧೆಯನ್ನು ವೇ. ಮೂ.‌ ಕೊರಂಗ್ರಪಾಡಿ ಶ್ರೀನಿವಾಸ ತಂತ್ರಿ ಮಡುಂಬು ಅವರು ಮಂಗಳವಾರ ಉದ್ಘಾಟಿಸಿದರು. 

 ಬಳಿಕ ಮಾತನಾಡಿದ ಅವರು, ಮುದ್ದುಕೃಷ್ಣ ವೇಷ ಸ್ಪರ್ಧೆಯ ಮೂಲಕವಾಗಿ ಅಲಂಕಾರ ಪ್ರಿಯನಾದ ಕೃಷ್ಣನನ್ನು ಬಹು‌ ಅಲಂಕಾರ, ವೇಷಗಳೊಂದಿಗೆ ವೇದಿಕೆಯಲ್ಲಿ ಕಾಣುವ ಸುವರ್ಣಾವಕಾಶ ನಮಗೆ‌ ಸಿಕ್ಕಿದೆ.‌‌ ಈ  ಮೂಲಕ ಮಕ್ಕಳ ಪ್ರತಿಭೆ ಅನಾವರಣಗೊಳ್ಳುವಂತಾಗಿದೆ ಎಂದರು.

 ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜೇಸಿಐ ವಲಯ ನಿರ್ದೇಶಕ ಭರತ್ ಶೆಟ್ಟಿ ಮಾತನಾಡಿ, ಕಾಪು ಜೇಸಿಐ ನಿರಂತರ ಕಾರ್ಯಕ್ರಮಗಳ ಮೂಲಕ ವಲಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದೆ. ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ವೇದಿಕೆ ಒದಗಿಸುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸುತ್ತಿದೆ ಎಂದರು.

 ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದ ಜಯಲಕ್ಷ್ಮೀ ಜ್ಯುವೆಲ್ಲರ್ಸ್ ನ‌ ಮಾಲಕಿ ಸುರೇಖಾ ಜೆ. ಆಚಾರ್ಯ, ಕಾರ್ಯಕ್ರಮ ನಿರ್ದೇಶಕ ಜಗದೀಶ್ ಬ‌ಂಗೇರ, ಮಹಿಳಾ ಜೇಸಿ ಸಂಯೋಜಕಿ ಶ್ರುತಿ ಶೆಟ್ಟಿ, ಯುವ ಜೇಸಿ ಅಧ್ಯಕ್ಷ ಶಾಶ್ವತ್ ಶೆಟ್ಟಿ ಉಪಸ್ಥಿತರಿದ್ದರು. 

 ಅಧ್ಯಕ್ಷತೆ ವಹಿಸಿದ್ದ ಕಾಪು ಜೇಸಿಐ ಅಧ್ಯಕ್ಷೆ ಸುಖಲಾಕ್ಷಿ ಬಂಗೇರ ಸ್ವಾಗತಿಸಿದರು.

ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು ಪ್ರಸ್ತಾವನೆಗೈದರು. ಕಾರ್ಯದರ್ಶಿ ಸತ್ಯವತಿ ವಂದಿಸಿದರು. 

 ಮೂರು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ನೂರಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು.

ವಿಜೇತರಿಗೆ ಪ್ರಾಯೋಜಕರ ವತಿಯಿಂದ ಬಹುಮಾನ, ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ಹಾಗೂ ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣ ಮಠದ ವತಿಯಿಂದ ಲಡ್ಡು, ಚಕ್ಕುಲಿ ವಿತರಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.