• Home  
  • ಅದಮಾರು ಪಿಪಿಸಿ : ಉಡುಪಿ ತಾಲೂಕು ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟ (Adamaru PPC : Uwupi Thaluk level Volley ball Tournment)
- ಕ್ರೀಡೆ - ಶಾಲಾ ಕಾಲೇಜು

ಅದಮಾರು ಪಿಪಿಸಿ : ಉಡುಪಿ ತಾಲೂಕು ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟ (Adamaru PPC : Uwupi Thaluk level Volley ball Tournment)

Share: ಅದಮಾರು ಪಿಪಿಸಿ : ಉಡುಪಿ ತಾಲೂಕು ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟ (Adamaru) ಅದಮಾರು: ಇಲ್ಲಿನ ಅದಮಾರು ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಶ್ರಯದಲ್ಲಿ ಉಡುಪಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕರ ವಾಲಿಬಾಲ್ ಪಂದ್ಯಾಟ ನಡೆಯಿತು.  ಕರ್ನಾಟಕ ಬ್ಯಾಂಕಿನ ಪಡುಬಿದ್ರಿ ಶಾಖೆಯ ಪ್ರಬಂಧಕ ಪ್ರದೀಪ್ ಕುಮಾರ್ ಶೆಟ್ಟಿ ಪಂದ್ಯಾಟವನ್ನು ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ದೃಢತೆಗೆ ಅತ್ಯಂತ ಅವಶ್ಯಕ. ವಾಲಿಬಾಲ್ ಪಂದ್ಯಾಟ ಎಲ್ಲರೂ ಸ್ಪೂರ್ತಿಯಿಂದ ಆಡುವ […]

ಅದಮಾರು ಪಿಪಿಸಿ : ಉಡುಪಿ ತಾಲೂಕು ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟ

(Adamaru) ಅದಮಾರು: ಇಲ್ಲಿನ ಅದಮಾರು ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಶ್ರಯದಲ್ಲಿ ಉಡುಪಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕರ ವಾಲಿಬಾಲ್ ಪಂದ್ಯಾಟ ನಡೆಯಿತು.

 ಕರ್ನಾಟಕ ಬ್ಯಾಂಕಿನ ಪಡುಬಿದ್ರಿ ಶಾಖೆಯ ಪ್ರಬಂಧಕ ಪ್ರದೀಪ್ ಕುಮಾರ್ ಶೆಟ್ಟಿ ಪಂದ್ಯಾಟವನ್ನು ಉದ್ಘಾಟಿಸಿದರು.

ಈ ಸಂದರ್ಭ ಅವರು ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ದೃಢತೆಗೆ ಅತ್ಯಂತ ಅವಶ್ಯಕ. ವಾಲಿಬಾಲ್ ಪಂದ್ಯಾಟ ಎಲ್ಲರೂ ಸ್ಪೂರ್ತಿಯಿಂದ ಆಡುವ ಒಂದು ಅತ್ಯುತ್ತಮ ಕ್ರೀಡೆಯಾಗಿದೆ. ಬಹುಮಾನಕ್ಕಿಂತಲೂ ಕ್ರೀಡೆಯಲ್ಲಿ ಭಾಗವಿಸುವುದು ಅತ್ಯಂತ ಮುಖ್ಯವಾಗಿದೆ ಎಂದರು.

  ದೈಹಿಕ ಶಿಕ್ಷಣ ವಲಯ ಪರಿವೀಕ್ಷಣಾಧಿಕಾರಿ ರವೀಂದ್ರ ನಾಯಕರ ಮಾತನಾಡಿ, ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ವಾಲಿಬಾಲ್ ಪಂದ್ಯಾಟವನ್ನು ಅತ್ಯಂತ ಯೋಗ್ಯ ರೀತಿಯಲ್ಲಿ ಆಯೋಜಿಸುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ ಎಂದರು.

 ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಪ್ರತಿನಿಧಿ ಪ್ರೊಫೆಸರ್ ಪ್ರೊ. ನಿತ್ಯಾನಂದ, ಉಡುಪಿ ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎಲ್ಲಮ್ಮ, ಯುವ ಸಬಲೀಕರಣ ಸಮನ್ವಯಾಧಿಕಾರಿ ಶ್ರೀರಿತೇಶ್ ಕುಮಾರ್ ಶೆಟ್ಟಿ, ಆದರ್ಶ ಸಂಘಗಳ ಒಕ್ಕೂಟ, ಅದಮಾರು ಇದರ ಅಧ್ಯಕ್ಷ ಹಾಗೂ ಟ್ರೋಫಿಗಳ ಪ್ರಾಯೋಜಕರಾದ ಸಂತೋಷ್ ಜೆ. ಶೆಟ್ಟಿ ಬರ್ಪಾಣಿ,  ಪೂರ್ಣಪ್ರಜ್ಞ ಪ. ಪೂ ಕಾಲೇಜಿನ ಪ್ರಾಂಶುಪಾಲರಾದ ಸಂಜೀವ ನಾಯ್ಕ,  ಕನ್ನಡ ಮಾಧ್ಯಮ ಪ್ರೌಢಶಾಲೆಯ ಶ್ರೀಕಾಂತ್ ರಾವ್, ದೈಹಿಕ ಶಿಕ್ಷಣ ಶಿಕ್ಷಕರಾದ  ಸುಜಿತ್ ಶೆಟ್ಟಿ, ಸಂದೀಪ್ ಕುಮಾರ್, ಶ್ರೀಮತಿ ಶೃತಿ ಉಪಸ್ಥಿತರಿದ್ದರು.

 ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ಏ ವಿ ಸ್ವಾಗತಿಸಿದರು. ಉಪ ಮುಖ್ಯೋಪಾಧ್ಯಾಯನಿ ಶ್ರೀಮತಿ ನಿಶ್ಮಿತಾ ಶೆಟ್ಟಿ, ಧನ್ಯವಾದವಿತ್ತರು. ಅಧ್ಯಾಪಕಿ ಕುಮಾರಿ ಯಶೋಧ ಕಾರ್ಯಕ್ರಮ ನಿರೂಪಿಸಿದರು.

 ಈ ಕ್ರೀಡಾಕೂಟದಲ್ಲಿ ಶಿರ್ವ ಹಿಂದೂ ಪದವಿಪೂರ್ವ ಕಾಲೇಜು ಶಿವಿಜೇತ ತಂಡವಾದರೆ ಸೈಂಟ್‌ಲಾರೆನ್ಸ್ ಶಂಕರಪುರ ರನ್ನರ್ಸ್ ಅಪ್  ಬಹುಮಾನ ಪಡೆದುಕೊಂಡರು.

Leave a comment

Your email address will not be published. Required fields are marked *

eMedia Kannada  @2025. All Rights Reserved.