ಪಡುಬಿದ್ರಿ : ಬಾಲಗಣಪತಿ ಮೃಣ್ಮಯಿ ಮೂರ್ತಿಯ ಜಲಸ್ಥಂಭನ
PHOTO CREDIT : RAVI DIGITALS PADUBIDRI.
(Padubidri) ಪಡುಬಿದ್ರಿ : ಕಾಪು ತಾಲೂಕಿನ ಪಡುಬಿದ್ರಿಯಲ್ಲಿ ಹಿಂದಿನ ಕಾಲದಲ್ಲಿ ಮಕ್ಕಳಿಂದಲೇ ನಿರ್ಮಿತವಾದ ಕ್ಷೇತ್ರವೆಂಬ ಪ್ರತೀತಿಯಿರುವ ಬಾಲ ಗಣಪತಿ ಮೃಣ್ಮಯಿ ಮೂರ್ತಿಯನ್ನು ಜಲಸ್ತಂಭನ ಶನಿವಾರ ಪಡುಬಿದ್ರಿ ಕಡಲಲ್ಲಿ ಜಲಸ್ಥಂಭನ ಗೊಳಿಸಲಾಯಿತು.
ವಿಶೇಷವಾಗಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲ್ಪಟ್ಟ ಮೂರ್ತಿಯನ್ನು ದಸರಾ ದಿನದಂದು ಸಮುದ್ರದಲ್ಲಿ ಜಲಸ್ಥಂಭನ ಗೊಳಿಸಲಾಗುವುದು.
ಪಡುಬಿದ್ರಿ ಬಾಲಗಣಪತಿ ದೇವಸ್ಥಾನದಲ್ಲಿ ಗಣಪತಿ ಮೂರ್ತಿಯನ್ನು ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ ದಿನದಿಂದ ನವರಾತ್ರಿಯಾದ್ಯಂತ ಪ್ರತಿದಿನ ಸಾಯಂಕಾಲ ಭಕ್ತರಿಂದ ಹರಕೆಯ ರೂಪವಾಗಿ ರಂಗಪೂಜೆ ನಡೆಯುತ್ತದೆ.
ವಿಜಯದಶಮಿಯಂದು ಬೆಳಗ್ಗಿನಿಂದ ಪೂಜಾ ವಿಧಿವಿಧಾನಗಳು ನಡೆದು ಸಂಜೆ ಪಲ್ಲಕ್ಕಿಯ ಮೂಲಕ ಗಣಪತಿಯ ಮೂರ್ತಿಯು ಶ್ರೀ ಕ್ಷೇತ್ರದಿಂದ ಪೇಟೆಗೆ ಸಾಗಿ, ಅಲ್ಲಿಂದ ಹಿಂತಿರುಗಿ ಕೆಳಗಿನ ಪೇಟೆಯ ರಸ್ತೆಯ ಮೂಲಕ ಬೀಚ್ ರಸ್ತೆಗೆ ಸಾಗಿ ಗುಡ್ಡೆಚ್ಚಿಗೆ ತಲುಪಿ, ಅಲ್ಲಿ ಕಟ್ಟೆ ಪೂಜೆ, ತಪ್ಪಂಗಾಯಿ ಸೇವೆಯ ಬಳಿಕ ಮುಂದೆ ಸಾಗಿ ಸಮುದ್ರದಲ್ಲಿ ಗಣಪತಿಯ ಮೂರ್ತಿಯನ್ನು ಜಲಸ್ತಂಭನ ಮಾಡಲಾಯಿತು.
ಮೆರವಣಿಗೆಯಲ್ಲಿ ಕುಣಿತ ಭಜನಾ ತಂಡ, ವಿವಿಧ ವೇಷಗಳು, ಹುಲಿವೇಷ ಕುಣಿತ ತಂಡ ಸಹಿತ ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.

