• Home  
  • ಭವಿಷ್ಯದ ಮಕ್ಕಳ ಪೀಳಿಗೆಯನ್ನು ರೂಪಿಸುವುದು ಪೋಷಕರ ಜವಾಬ್ದಾರಿ :  ಡಾ. ಬಾಲಕೃಷ್ಣ ಎಸ್ ಮದ್ದೋಡಿ (Shaping the future generation of childrens is the responsibility of parents : Dr. Balakrishna S Maddodi)
- ಶಾಲಾ ಕಾಲೇಜು

ಭವಿಷ್ಯದ ಮಕ್ಕಳ ಪೀಳಿಗೆಯನ್ನು ರೂಪಿಸುವುದು ಪೋಷಕರ ಜವಾಬ್ದಾರಿ :  ಡಾ. ಬಾಲಕೃಷ್ಣ ಎಸ್ ಮದ್ದೋಡಿ (Shaping the future generation of childrens is the responsibility of parents : Dr. Balakrishna S Maddodi)

Share: ಭವಿಷ್ಯದ ಮಕ್ಕಳ ಪೀಳಿಗೆಯನ್ನು ರೂಪಿಸುವುದು ಪೋಷಕರ ಜವಾಬ್ದಾರಿ :  ಡಾ. ಬಾಲಕೃಷ್ಣ ಎಸ್ ಮದ್ದೋಡಿ (Kaup) ಕಾಪು: ಭವಿಷ್ಯದ ಮಕ್ಕಳ ಪೀಳಿಗೆಯನ್ನು ರೂಪಿಸುವುದು ಪೋಷಕರ ಜವಾಬ್ದಾರಿ ಎಂದುಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ, ಎಂಐಟಿ, ಮಾಹೆ ಮಣಿಪಾಲದ ಸಹ ಪ್ರಾಧ್ಯಾಪಕಡಾ. ಬಾಲಕೃಷ್ಣ ಎಸ್ ಮದ್ದೋಡಿ ಹೇಳಿದರು. ಅವರು ಕಾಪು ಸರಕಾರಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸರ್ಕಾರಿ ಪದವಿ ಕಾಲೇಜಿನ ವತಿಯಿಂದ ಸಂಯೋಜಿತವಾಗಿರುವ  ಪೋಷಕರು ಮತ್ತು ಶಿಕ್ಷಕರ ಸಂಘದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಸಿ ಮಾತನಾಡಿದರು.  ಶಿಕ್ಷಕರು ತರಗತಿಯಲ್ಲಿ ಬೌದ್ಧಿಕ […]

ಭವಿಷ್ಯದ ಮಕ್ಕಳ ಪೀಳಿಗೆಯನ್ನು ರೂಪಿಸುವುದು ಪೋಷಕರ ಜವಾಬ್ದಾರಿ :  ಡಾ. ಬಾಲಕೃಷ್ಣ ಎಸ್ ಮದ್ದೋಡಿ

(Kaup) ಕಾಪು: ಭವಿಷ್ಯದ ಮಕ್ಕಳ ಪೀಳಿಗೆಯನ್ನು ರೂಪಿಸುವುದು ಪೋಷಕರ ಜವಾಬ್ದಾರಿ ಎಂದುಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ, ಎಂಐಟಿ, ಮಾಹೆ ಮಣಿಪಾಲದ ಸಹ ಪ್ರಾಧ್ಯಾಪಕಡಾ. ಬಾಲಕೃಷ್ಣ ಎಸ್ ಮದ್ದೋಡಿ ಹೇಳಿದರು.

ಅವರು ಕಾಪು ಸರಕಾರಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸರ್ಕಾರಿ ಪದವಿ ಕಾಲೇಜಿನ ವತಿಯಿಂದ ಸಂಯೋಜಿತವಾಗಿರುವ  ಪೋಷಕರು ಮತ್ತು ಶಿಕ್ಷಕರ ಸಂಘದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಸಿ ಮಾತನಾಡಿದರು.

 ಶಿಕ್ಷಕರು ತರಗತಿಯಲ್ಲಿ ಬೌದ್ಧಿಕ ಕುತೂಹಲ ಮತ್ತು ವೃತ್ತಿಪರ ಕೌಶಲಗಳನ್ನು ಪೋಷಿಸುತ್ತಾರೆ. ಆದರೆ ಪೋಷಕರು ಮಕ್ಕಳನ್ನು ದಕ್ಷ ವ್ಯಕ್ತಿಗಳನಾಗಿ ಬೆಳೆಸಲು ತುಂಬುವ ಕಾರ್ಯವನ್ನು ನಿರ್ವಹಿಸುತ್ತಾರೆ. ಪೋಷಕರು ತಮ್ಮ ಮಗುವಿನ ಪ್ರಾಥಮಿಕ ವಾಸ್ತುಶಿಲ್ಪಿಗಳು. ಭಾವನಾತ್ಮಕ ಅಡಿಪಾಯ, ನೈತಿಕ ದಿಕ್ಸೂಚಿ, ಸಾಮಾಜಿಕ ಕೌಶಲ್ಯಗಳು, ಕೌಟುಂಬಿಕ ಬಂಧಗಳು ಮತ್ತು ಪ್ರೀತಿ-ವಾತ್ಸಲ್ಯವನ್ನು ಅಳವಡಿಸಿಕೊಳ್ಳ ಬೇಕೆಂದು ಬಾಲಕೃಷ್ಣ ಎಸ್ ಮದ್ದೋಡಿ ಹೇಳಿದರು.

 ಕಾಪು ಸರಕಾರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಗೋಪಾಲಕೃಷ್ಣ ಎಂ. ಗಾಂವಕರ ಸಮಾರೋಪ ನುಡಿಗಳನ್ನಾಡಿದರು. ಪ್ರೊ. ಸಂಧ್ಯಾ ಕಾರ್ಯಕ್ರಮ   ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.