ಬಿಜೆಪಿ ಕಾಪು ಕ್ಷೇತ್ರ ಯುವ ಮೋರ್ಚಾ ಮಾಜಿ ಅಧ್ಯಕ್ಷ ವೈ. ದಿನೇಶ್ ಶೆಟ್ಟಿ ನಿಧನ
(Padubidri) ಪಡುಬಿದ್ರಿ: ತೆಂಕ ಎರ್ಮಾಳು ವಿಜಯ ವಿಹಾರ ನಿವಾಸಿ ವೈ. ದಿನೇಶ್ ಶೆಟ್ಟಿ(46) ಹೃದಯಾಘಾತದಿಂದ ಬುಧವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಅವಿವಾಹಿತರಾಗಿದ್ದ ಅವರಿಗೆ ಐವರು ಸಹೋದರರು, ಓರ್ವ ಸಹೋದರಿ ಇದ್ದಾರೆ.
ಬಿಜೆಪಿ ಕಾಪು ಕ್ಷೇತ್ರ ಯುವ ಮೋರ್ಚಾ ಅಧ್ಯಕ್ಷರಾಗಿ, ಪಡುಬಿದ್ರಿ ಲಯನ್ಸ್ ಕ್ಲಬ್ನಲ್ಲಿ ೩ ವರ್ಷ ಕಾರ್ಯದರ್ಶಿಯಾಗಿ, ಜೆಸಿಐ ಪಡುಬಿದ್ರಿ, ರೋಟರಿ ಕ್ಲಬ್ ಪಡುಬಿದ್ರಿ ಸಹಿತ ವಿವಿಧ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಅರ್.ಮೆಂಡನ್, ಪ್ರಮುಖರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಶಶಿಕಾಂತ್ ಪಡುಬಿದ್ರಿ ಸಹಿತ ಗಣ್ಯರು ಮೃತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

