• Home  
  • ಮಣಿಪಾಲ: ಬೇಕರಿ, ಅಂಗಡಿಯ ಶಟರ್ ಒಡೆದು ಕಳ್ಳತನ,  ಮೂವರ ಬಂಧನ (Manipala : Bakery, Shop shutter broken and stolen, three arrested)
- ಅಪರಾಧ

ಮಣಿಪಾಲ: ಬೇಕರಿ, ಅಂಗಡಿಯ ಶಟರ್ ಒಡೆದು ಕಳ್ಳತನ,  ಮೂವರ ಬಂಧನ (Manipala : Bakery, Shop shutter broken and stolen, three arrested)

Share:  ಮಣಿಪಾಲ: ಬೇಕರಿ, ಅಂಗಡಿಯ ಶಟರ್ ಒಡೆದು ಕಳ್ಳತನ,  ಮೂವರ ಬಂಧನ (Manipala) ಮಣಿಪಾಲ : ಶಿವಳ್ಳಿ ಗ್ರಾಮದ ಬೇಕ್‌ ಲೇನ್‌ ಬೇಕರಿ ಹಾಗೂ ಈಶ್ವರನಗರದ ಆದಿಶಕ್ತಿ ಜನರಲ್‌ ಸ್ಟೋರ್ಸ್‌ನ ಶೆಟರ್‌ ಒಡೆದು ನಗದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಬಂಧಿತ ಆರೋಪಿಗಳನ್ನು ಕೊಪ್ಪಳ ಜಿಲ್ಲೆಯ ಗಜೇಂದ್ರಗಡದ ನಿವಾಸಿ ಮಂಜುನಾಥ್‌ ಚಿದಾನಂದಪ್ಪ ನರತೆಲಿ(24), ಉಡುಪಿ ಜಿಲ್ಲೆಯ ಹಟ್ಟಿಯಂಗಡಿಯ ನಿವಾಸಿಗಳಾದ ಪ್ರಸಾದ್‌(22), ಕಿಶನ್‌(20) ಗುರುತಿಸಲಾಗಿದೆ.  ಈ ಮೂವರು ಆರೋಪಿಗಳು ಅ. […]

 ಮಣಿಪಾಲ: ಬೇಕರಿ, ಅಂಗಡಿಯ ಶಟರ್ ಒಡೆದು ಕಳ್ಳತನ,  ಮೂವರ ಬಂಧನ

(Manipala) ಮಣಿಪಾಲ : ಶಿವಳ್ಳಿ ಗ್ರಾಮದ ಬೇಕ್‌ ಲೇನ್‌ ಬೇಕರಿ ಹಾಗೂ ಈಶ್ವರನಗರದ ಆದಿಶಕ್ತಿ ಜನರಲ್‌ ಸ್ಟೋರ್ಸ್‌ನ ಶೆಟರ್‌ ಒಡೆದು ನಗದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ಬಂಧಿತ ಆರೋಪಿಗಳನ್ನು ಕೊಪ್ಪಳ ಜಿಲ್ಲೆಯ ಗಜೇಂದ್ರಗಡದ ನಿವಾಸಿ ಮಂಜುನಾಥ್‌ ಚಿದಾನಂದಪ್ಪ ನರತೆಲಿ(24), ಉಡುಪಿ ಜಿಲ್ಲೆಯ ಹಟ್ಟಿಯಂಗಡಿಯ ನಿವಾಸಿಗಳಾದ ಪ್ರಸಾದ್‌(22), ಕಿಶನ್‌(20) ಗುರುತಿಸಲಾಗಿದೆ.

 ಈ ಮೂವರು ಆರೋಪಿಗಳು ಅ. 31ರಂದು ರಾತ್ರಿ ಬೇಕ್‌ ಲೇನ್‌ ಬೇಕರಿ ಹಾಗೂ ಈಶ್ವರನಗರದ ಆದಿಶಕ್ತಿ ಜನರಲ್‌ ಸ್ಟೋರ್ಸ್‌ನ ಶೆಟರ್‌ ಒಡೆದು 60 ಸಾವಿರ ರೂ. ನಗದು ಕಳ್ಳತನ ಮಾಡಿ ಪರಾರಿಯಾಗಿದ್ದರು. ಕಾರ್ಯಾಚರಣೆಗೆ ಇಳಿದ ಪೊಲೀಸರು ಮಣಿಪಾಲದ ಶಿಂಬ್ರಾ ಬ್ರಿಡ್ಜ್‌ ಬಳಿ ಬುಧವಾರ ಆರೋಪಿಗಳನ್ನು ಬಂಧಿಸಿದ್ದಾರೆ.

  ಬಂಧಿತರಿಂದ ಕೃತ್ಯಕ್ಕೆ ಬಳಸಿದ ಸುಮಾರು 5,00,000/- ರೂ ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.