ಮೂಲ್ಕಿ: ಶ್ರೀ ವೆಂಕಟರಮಣ ದೇವರ ಪಲ್ಲಕ್ಕಿ ಸವಾರಿ; ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಶ್ರೀ ದೇವರ ಕಟ್ಟೆ ಪೂಜೆ
(Mulki) ಮುಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಶುದ್ಧ ತ್ರಯೋದಶಿ ವೈಕುಂಠ ಚತುರ್ದಶಿಯಂದು ಶ್ರೀ ದೇವರ ವನಭೋಜನ ಉತ್ಸವ ನೆರವೇರಿತು.
ವನಭೋಜನ ಉತ್ಸವ ಪ್ರಯುಕ್ತ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಶ್ರೀ ದೇವರ ಕಟ್ಟೆ ಪೂಜೆ ವಿಜೃಂಭಣೆಯಿಂದ ನೆರವೇರಿತು.
ಈ ಸಂದರ್ಭ ಜ್ಯೋತಿಷಿ ವಿಶ್ವನಾಥ ಭಟ್, ಉಷಾ ವಿಶ್ವನಾಥ ಭಟ್, ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ಸಂಚಾಲಕ ಪುನೀತ್ ಕೃಷ್ಣ ಉಪಸ್ಥಿತರಿದ್ದರು.

