• Home  
  •  ಕಾಪು ತಹಶಿಲ್ದಾರ್ ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ (Celebration of Kanaka dasa Jayanthi at Kaup thahashildar Office)
- ಜೀವನಶೈಲಿ

 ಕಾಪು ತಹಶಿಲ್ದಾರ್ ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ (Celebration of Kanaka dasa Jayanthi at Kaup thahashildar Office)

Share: ಕಾಪು ತಹಶಿಲ್ದಾರ್ ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ  ಕನಕದಾಸರ ಸಂದೇಶ ಸಾರ್ವಕಾಲಿಕ ಮಹತ್ವ ಹೊಂದಿದೆ ; ತಹಶಿಲ್ದಾರ್ ಪ್ರತಿಭಾ ಆರ್ (Kaup) ಕಾಪು : ಕಾಪು ತಹಶಿಲ್ದಾರ್ ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ ನೆರವೇರಿತು. ಈ ಸಂದರ್ಭ ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್‌ ಅವರು ಮಾತನಾಡಿ, ಕಾವ್ಯ ಹಾಗೂ ಕೀರ್ತನೆಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಕಂದಾಚಾರಗಳನ್ನು ಹೋಗಲಾಡಿಸಲು ಶ್ರಮಿಸಿದ ಕನಕದಾಸರು ವಿಶ್ವಮಾನವರಾದರು. ನಿಮ್ಮ ಕುಲದ ನೆಲೆಯನೇನಾದರೂ ಕಂಡಿರಾ ಎಂದು ಪ್ರಶ್ನಿಸಿ ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಜಾತಿ […]

ಕಾಪು ತಹಶಿಲ್ದಾರ್ ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ

 ಕನಕದಾಸರ ಸಂದೇಶ ಸಾರ್ವಕಾಲಿಕ ಮಹತ್ವ ಹೊಂದಿದೆ ; ತಹಶಿಲ್ದಾರ್ ಪ್ರತಿಭಾ ಆರ್

(Kaup) ಕಾಪು : ಕಾಪು ತಹಶಿಲ್ದಾರ್ ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ ನೆರವೇರಿತು.

ಈ ಸಂದರ್ಭ ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್‌ ಅವರು ಮಾತನಾಡಿ, ಕಾವ್ಯ ಹಾಗೂ ಕೀರ್ತನೆಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಕಂದಾಚಾರಗಳನ್ನು ಹೋಗಲಾಡಿಸಲು ಶ್ರಮಿಸಿದ ಕನಕದಾಸರು ವಿಶ್ವಮಾನವರಾದರು. ನಿಮ್ಮ ಕುಲದ ನೆಲೆಯನೇನಾದರೂ ಕಂಡಿರಾ ಎಂದು ಪ್ರಶ್ನಿಸಿ ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಜಾತಿ ಪದ್ದತಿಗೆ ಸವಾಲು ಹಾಕಿದ್ದ ಮಹಾನ್ ವ್ಯಕ್ತಿ ಶ್ರೀ ಕನಕದಾಸರು.

 ದಾಸಶ್ರೇಷ್ಠರಾದ ಕನಕದಾಸರ ಬದುಕೇ ಮಾನವ ಕುಲಕ್ಕೆ ಒಂದು ಸಂದೇಶ. ಜಾತ್ಯತೀತ ಮೌಲ್ಯಗಳನ್ನು ಪ್ರತಿಪಾದಿಸಿದ ಕನಕದಾಸರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು. ಕನಕದಾಸರ ಕೃತಿಗಳಾದ ರಾಮಧಾನ್ಯ ಚರಿತ್ರೆ, ಮೋಹನ ತರಂಗಿಣಿ, ನಳ ಚರಿತ್ರೆ ಹರಿಭಕ್ತಸಾರ ಇವುಗಳನ್ನು ಇಂದಿನ ಆಧುನಿಕ ಜೀವನಶೈಲಿಯ ಹೊಸ ಆಯಾಮಗಳಲ್ಲಿ ಅಧ್ಯಯನ ಮಾಡಬೇಕು ಎಂದು ತಹಶಿಲ್ದಾರ್ ಕರೆ ನೀಡಿದರು.

 ಸಮಾರಂಭದಲ್ಲಿ ತಹಶಿಲ್ದಾರ್ ಕಚೇರಿಯ ಸಿಬ್ಬಂದಿಗಳು ಭಾಗವಹಿಸಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.