• Home  
  •   ಕಾಪು ಹೊಸಮಾರಿಗುಡಿ: ಫೆಬ್ರವರಿ 14 ರಂದು ಹರಿದ್ವಾರದಿಂದ ಸನ್ನಿಧಾನಕ್ಕೆ ಗಂಗಾಜಲ ಆಗಮನ (Kaup Hosamarigudi: Ganga water arrives at the shrine from Haridwar on February 14th)
- ಧಾರ್ಮಿಕ - ವಿಡಿಯೋ

  ಕಾಪು ಹೊಸಮಾರಿಗುಡಿ: ಫೆಬ್ರವರಿ 14 ರಂದು ಹರಿದ್ವಾರದಿಂದ ಸನ್ನಿಧಾನಕ್ಕೆ ಗಂಗಾಜಲ ಆಗಮನ (Kaup Hosamarigudi: Ganga water arrives at the shrine from Haridwar on February 14th)

Share: ಕಾಪು ಹೊಸಮಾರಿಗುಡಿ: ಫೆಬ್ರವರಿ 14 ರಂದು ಹರಿದ್ವಾರದಿಂದ ಸನ್ನಿಧಾನಕ್ಕೆ ಗಂಗಾಜಲ ಆಗಮನ (Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರಥಮ ಹಂತದ ಜೀರ್ಣೋದ್ಧಾರ ಕಾಮಗಾರಿಗಳು ಸಂಪೂರ್ಣಗೊಂಡಿದ್ದು, ಫೆಬ್ರವರಿ 25 ರಿಂದ ಮಾರ್ಚ್ 5 ರ ವರೆಗೆ ಕಾಪುವಿನ ಪ್ರತಿಷ್ಠಾ ಬ್ರಹ್ಮಕಲಶೋತ್ಸವ  ವಿಜೃಂಭಣೆಯಿಂದ ನಡೆಯಲಿದೆ.  ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಹರಿದ್ವಾರದಲ್ಲಿ ಫೆಬ್ರವರಿ 12ರ ಕುಂಭ ಸಂಕ್ರಮಣದ ಹುಣ್ಣಿಮೆಯ ಪರ್ವಕಾಲದಲ್ಲಿ ನವಕುಂಭಗಳಲ್ಲಿ ಗಂಗಾಜಲವನ್ನು ತುಂಬಿಸಿ, ಧಾರ್ಮಿಕ ವಿಧಿಗಳಿಂದ ಪೂಜಿಸಿ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ […]

ಕಾಪು ಹೊಸಮಾರಿಗುಡಿ: ಫೆಬ್ರವರಿ 14 ರಂದು ಹರಿದ್ವಾರದಿಂದ ಸನ್ನಿಧಾನಕ್ಕೆ ಗಂಗಾಜಲ ಆಗಮನ

(Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರಥಮ ಹಂತದ ಜೀರ್ಣೋದ್ಧಾರ ಕಾಮಗಾರಿಗಳು ಸಂಪೂರ್ಣಗೊಂಡಿದ್ದು, ಫೆಬ್ರವರಿ 25 ರಿಂದ ಮಾರ್ಚ್ 5 ರ ವರೆಗೆ ಕಾಪುವಿನ ಪ್ರತಿಷ್ಠಾ ಬ್ರಹ್ಮಕಲಶೋತ್ಸವ  ವಿಜೃಂಭಣೆಯಿಂದ ನಡೆಯಲಿದೆ.

 ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಹರಿದ್ವಾರದಲ್ಲಿ ಫೆಬ್ರವರಿ 12ರ ಕುಂಭ ಸಂಕ್ರಮಣದ ಹುಣ್ಣಿಮೆಯ ಪರ್ವಕಾಲದಲ್ಲಿ ನವಕುಂಭಗಳಲ್ಲಿ ಗಂಗಾಜಲವನ್ನು ತುಂಬಿಸಿ, ಧಾರ್ಮಿಕ ವಿಧಿಗಳಿಂದ ಪೂಜಿಸಿ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಮ್ಮನವರ ಸನ್ನಿಧಾನಕ್ಕೆ ಫೆಬ್ರವರಿ 14ರ ಶುಕ್ರವಾರದಂದು ಬೆಳಿಗ್ಗೆ 9:30 ಗೆ ಆಗಮಿಸಲಿದೆ ಎಂದು ಗಂಗಾಜಲ ಸ್ವಾಗತ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪುರವರು ಮಂಗಳವಾರ ಕಾಪುವಿನ ಜೀರ್ಣೋದ್ಧಾರ ಸಮಿತಿಯ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

 ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿಯವರು ಮತ್ತು ಸಮಿತಿಯ ಅಧ್ಯಕ್ಷರಾದ ಎಂ.ಆ‌ರ್. ಜಿ ಸಂಸ್ಥೆಯ ಮುಖ್ಯಸ್ಥ ಡಾ.ಕೆ. ಪ್ರಕಾಶ್ ಶೆಟ್ಟಿಯವರ ನೇತೃತ್ವದಲ್ಲಿ ಆಗಮಿಸಲಿದೆ.  

 ಫೆಬ್ರವರಿ 14ರಂದು ಕಾಪುವಿಗೆ ಗಂಗಾಜಲ ಆಗಮಿಸುವ ಸಂದರ್ಭ ಭಕ್ತಾದಿಗಳು ಮಂಗಳೂರು ವಿಮಾನ ನಿಲ್ದಾಣದಿಂದ ವಾಹನದ ಮೂಲಕ ಆಗಮಿಸಿ,  ಶೋಭಾಯಾತ್ರೆಯ ಮೂಲಕ ಕಾಪು ಸಾವಿರ ಸೀಮೆಯ ಒಡೆಯ ಶ್ರೀ ಲಕ್ಷ್ಮಿ ಜನಾರ್ಧನ ದೇವರ ಸನ್ನಿಧಾನದಲ್ಲಿ ಮುಂದಿನ 9 ದಿನ ವಿಶೇಷ ಪೂಜೆ ಸಲ್ಲಿಸಿ ತದನಂತರ ಅಮ್ಮನ ಸನ್ನಿಧಾನಕ್ಕೆ ತರಲಾಗುವುದು.

 ಹರಿದ್ವಾರದಲ್ಲಿ ಗಂಗಾಜಲ ತರುವ ಸಂಧರ್ಭ ಡಾ. ಕೆ. ಪ್ರಕಾಶ್ ಶೆಟ್ಟಿ ದಂಪತಿಗಳು, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ ದಂಪತಿಗಳು, ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ದಂಪತಿಗಳು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಉದಯ ಸುಂದರ್ ಶೆಟ್ಟಿ ದಂಪತಿಗಳು, ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಕಾಪು ಶಾಸಕರಾದ ಗುರ್ಮ ಸುರೇಶ್ ಶೆಟ್ಟಿಯವರು ಸೇರಿ ಒಟ್ಟು ಒಂಬತ್ತು ಜನರ ತಂಡ ಈ ಸಂಧರ್ಭದಲ್ಲಿ ಭಾಗವಹಿಸಲಿದ್ದಾರೆ ಎಂದು ಡಾ. ದೇವಿಪ್ರಸಾದ್‌ ಶೆಟ್ಟಿ ತಿಳಿಸಿದರು.

 ಪತ್ರಿಕಾಗೋಷ್ಠಿಯಲ್ಲಿ ಶ್ರೀ ಹೊಸಮಾರಿಗುಡಿ ದೇವಸ್ಥಾನ ಕಾಪು ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಯೋಗೀಶ್ ವಿ. ಶೆಟ್ಟಿ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ,  ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಾಧವ ಆರ್.ಪಾಲನ್, ಶೇಖರ ಪೂಜಾರಿ, ಗೀತಾಂಜಲಿ ಸವರ್ಣ, ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆಕಲ್ಯ  ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.