ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಸುಗ್ಗಿ ಮಾರಿಪೂಜೆಯ ದರ್ಶನ ಸೇವೆ
(Kaup) ಕಾಪು : ಇತ್ತೀಚೆಗೆ ಸಮಗ್ರ ಜೀರ್ಣೋದ್ಧಾರಗೊಂಡು ಕಣ್ಮನ ಸೆಳೆಯುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಬುಧವಾರ ಸಂಜೆ ಸುಗ್ಗಿ ಮಾರಿಪೂಜೆ ಪ್ರಯುಕ್ತ ದರ್ಶನ ಸೇವೆ ಸಂಪನ್ನಗೊಂಡಿತು.
ಮಾರಿಗುಡಿಯ ಪ್ರಧಾನ ಅರ್ಚಕ ವೇ.ಮೂ.ಕಲ್ಯ ಶ್ರೀನಿವಾಸ ತಂತ್ರಿಯವರು ಪೂಜಾ ವಿಧಿ ವಿಧಾನ ನೆರವೇರಿಸಿದರು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಸದಸ್ಯರು, ಅಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.
