ಉಚ್ಚಿಲ ಶ್ರೀ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ಒಡ್ಯಾಣ ಪನ್ಯಾತತ್ರ ಗೆಜ್ಜೆ ಕತ್ತಿ ಸಮರ್ಪಣಾ ಮೆರವಣಿಗೆ
(Uchila) ಉಚ್ಚಿಲ: ಇತಿಹಾಸ ಪ್ರಸಿದ್ಧ ಉಚ್ಚಿಲ ಶ್ರೀ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಶ್ರೀ ಬಬ್ಬು ಸ್ವಾಮಿ ದೇವಸ್ಥಾನ ಉಚ್ಚಿಲ ಇವರಿಂದ ಒಡ್ಯಾಣ ಕೊಡುಗೆ ಹಾಗೂ ಶ್ರೀ ಮಾಲ್ದಿದೇವಿ ಮಹಿಳಾ ಸಮಿತಿ ಉಚ್ಚಿಲ ಇದರ ವತಿಯಿಂದ ಪನ್ಯಾತತ್ರ ಹಾಗೂ ಗೆಜ್ಜೆ ಕತ್ತಿ ಸಮರ್ಪಣಾ ಮೆರವಣಿಗೆ ಸೋಮವಾರ ಸಂಜೆ ನೆರವೇರಿತು.
ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಅರ್ಚಕ ಗೋವಿಂದ ಭಟ್ ರವರು ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಮಹಿಳಾ ತಂಡಗಳಿಂದ ಕುಣಿತ ಭಜನೆ, ಚಂಡೆ, ಕೊಂಬು, ವಾದ್ಯ ತಂಡ ಹಾಗೂ ನೂರಾರು ಭಕ್ತಾದಿಗಳು ಭಾಗವಹಿಸಿದರು.
ಮೆರವಣಿಗೆಯು ಉಚ್ಚಿಲ ಮಹಾಲಿಂಗೇಶ್ವರ ದೇಗುಲದಿಂದ ಶ್ರೀ ಬಬ್ಬು ಸ್ವಾಮಿ ದೈವಸ್ಥಾನದವರೆಗೆ ನೆರವೇರಿತು.
ಈ ಸಂದರ್ಭ ಬಬ್ಬು ಸ್ವಾಮಿ ದೈವಸ್ಥಾನದ ಗುರಿಕಾರರು, ಆಡಳಿತ ಮಂಡಳಿ, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ನೂರಾರು ಭಕ್ತಾಧಗಳು ಉಪಸ್ಥಿತರಿದ್ದರು.

