• Home  
  • ಶಿಮಂತೂರು : ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸಿ – ಪಿ ವಿ ಶೆಟ್ಟಿ (Shimanthur: Encourage education for students from rural areas – PV Shetty)
- CONGARTULATIONS - ಶಾಲಾ ಕಾಲೇಜು

ಶಿಮಂತೂರು : ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸಿ – ಪಿ ವಿ ಶೆಟ್ಟಿ (Shimanthur: Encourage education for students from rural areas – PV Shetty)

Share: ಶಿಮಂತೂರು : ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸಿ – ಪಿ ವಿ ಶೆಟ್ಟಿ (Mulki) ಮುಲ್ಕಿ: ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಬಡತನದಲ್ಲಿ ಶಿಕ್ಷಣ ಪಡೆಯುತ್ತಿದ್ದು, ಪ್ರೋತ್ಸಾಹಿಸಿ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಮಾಜಿ ಕಾರ್ಯದರ್ಶಿ ಪಿವಿ ಶೆಟ್ಟಿ ಹೇಳಿದರು. ಅವರು 2025ನೇ ಮಾರ್ಚ್ ತಿಂಗಳಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಕಾಮರ್ಸ್ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಒಂಬತ್ತನೇ ರ್ಯಾಂಕ್ ಗಳಿಸಿ ಸಾಧನೆ ಮಾಡಿದ ಗ್ರಾಮೀಣ ಭಾಗದ ವಿದ್ಯಾರ್ಥಿನಿ ಶಿಮಂತೂರು ಮಜಲಗುತ್ತು ಹರ್ಷಿತಾ ಆರ್ ಶೆಟ್ಟಿಯವರನ್ನು […]

(Mulki) ಮುಲ್ಕಿ: ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಬಡತನದಲ್ಲಿ ಶಿಕ್ಷಣ ಪಡೆಯುತ್ತಿದ್ದು, ಪ್ರೋತ್ಸಾಹಿಸಿ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಮಾಜಿ ಕಾರ್ಯದರ್ಶಿ ಪಿವಿ ಶೆಟ್ಟಿ ಹೇಳಿದರು.

ಅವರು 2025ನೇ ಮಾರ್ಚ್ ತಿಂಗಳಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಕಾಮರ್ಸ್ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಒಂಬತ್ತನೇ ರ್ಯಾಂಕ್ ಗಳಿಸಿ ಸಾಧನೆ ಮಾಡಿದ ಗ್ರಾಮೀಣ ಭಾಗದ ವಿದ್ಯಾರ್ಥಿನಿ ಶಿಮಂತೂರು ಮಜಲಗುತ್ತು ಹರ್ಷಿತಾ ಆರ್ ಶೆಟ್ಟಿಯವರನ್ನು ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು.

ಈ ಸಂದರ್ಭ ಪಿವಿ ಶೆಟ್ಟಿಯವರು ಹರ್ಷಿತಾ ಆರ್ ಶೆಟ್ಟಿಯವರ ಮುಂದಿನ ಶಿಕ್ಷಣದ ಖರ್ಚು ವೆಚ್ಚ ತಾವೇ ಭರಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಹರ್ಷಿತ ಆರ್ ಶೆಟ್ಟಿ, ಅವರ ತಂದೆ   ರಾಜೇಶ್ ಶೆಟ್ಟಿ, ತಾಯಿ ವಿಜಯಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.