• Home  
  • ಮಳೆಗಾಲದ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ಸೂಕ್ತ ವ್ಯವಸ್ಥೆಗೆ ಕಾಯಕಲ್ಪ : ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್‌ (Renovation of proper system to ensure smooth flow of monsoon water: Kaup Tahsildar Dr. Pratibha R)
- ಜಿಲ್ಲಾಡಳಿತ - ತಾಲೂಕು ಆಡಳಿತ

ಮಳೆಗಾಲದ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ಸೂಕ್ತ ವ್ಯವಸ್ಥೆಗೆ ಕಾಯಕಲ್ಪ : ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್‌ (Renovation of proper system to ensure smooth flow of monsoon water: Kaup Tahsildar Dr. Pratibha R)

Share: ಮಳೆಗಾಲದ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ಸೂಕ್ತ ವ್ಯವಸ್ಥೆಗೆ ಕಾಯಕಲ್ಪ : ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್‌ (Kaup) ಕಾಪು : ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್‌ ರವರು ಶುಕ್ರವಾರ ಕಾಪು ರಾಷ್ಟ್ರೀಯ ಹೆದ್ದಾರಿ  66ರ ಉದ್ದಕ್ಕೂ ಸಂಚರಿಸಿ ಮಳೆಗಾಲದ ಪೂರ್ವಸಿದ್ಧತೆಗಾಗಿ ಕಟಪಾಡಿಯಿಂದ ಹೆಜಮಾಡಿಯವರೆಗೆ ಪರಿಶೀಲನೆ ನಡೆಸಿ ನಡೆಸಿದರು.  ಕಟಪಾಡಿ, ಪೊಸಾರು, ಪಡುಬಿದ್ರಿ, ಹೆಜಮಾಡಿ, ಪಡುಬಿದ್ರಿ ಬಂಟರ ಭವನದ ಎದುರು, ಮಸೀದಿ ನರ್ಸರಿ ಹತ್ತಿರ ಇತ್ಯಾದಿ ಜಾಗಗಳಿಗೆ ಭೇಟಿ ನೀಡ, ಅಲ್ಲಿ ನೀರು ಸರಾಗವಾಗಿ […]

(Kaup) ಕಾಪು : ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್‌ ರವರು ಶುಕ್ರವಾರ ಕಾಪು ರಾಷ್ಟ್ರೀಯ ಹೆದ್ದಾರಿ  66ರ ಉದ್ದಕ್ಕೂ ಸಂಚರಿಸಿ ಮಳೆಗಾಲದ ಪೂರ್ವಸಿದ್ಧತೆಗಾಗಿ ಕಟಪಾಡಿಯಿಂದ ಹೆಜಮಾಡಿಯವರೆಗೆ ಪರಿಶೀಲನೆ ನಡೆಸಿ ನಡೆಸಿದರು.

 ಕಟಪಾಡಿ, ಪೊಸಾರು, ಪಡುಬಿದ್ರಿ, ಹೆಜಮಾಡಿ, ಪಡುಬಿದ್ರಿ ಬಂಟರ ಭವನದ ಎದುರು, ಮಸೀದಿ ನರ್ಸರಿ ಹತ್ತಿರ ಇತ್ಯಾದಿ ಜಾಗಗಳಿಗೆ ಭೇಟಿ ನೀಡ, ಅಲ್ಲಿ ನೀರು ಸರಾಗವಾಗಿ ಹರಿದುಹೋಗದೆ ಇರಲು ಕಾರಣಗಳನ್ನು ಪಟ್ಟಿ ಮಾಡಿ ಮಾನ್ಯ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲಿದ್ದಾರೆ..

  ಕಟಪಾಡಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾ ಶೆಟ್ಟಿ, ತಹಶಿಲ್ದಾರ್ ರವರಿಗೆ ಸಾಥ್ ನೀಡಿ‌, ಹೆದ್ದಾರಿ ಸಮಸ್ಯೆಯ ಬಗ್ಗೆ ವಿವರ ನೀಡಿದರು. ಸ್ಥಳೀಯರು ಕೂಡಾ  ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತಿರುವುದರ ಬಗ್ಗೆ ಅಳಲು ತೋಡಿಕೊಂಡರು.

ಗ್ರಾಮಾಡಳಿತಾಧಿಕಾರಿ ಡೇನಿಯಲ್‌ರವರು ಕಳೆದ ಬಾರಿಯ ನೆರೆ ಬಗ್ಗೆ ನೆನಪಿಸಿ, ಮತ್ತೆ ಮರುಕಳಿಸದಂತೆ ವ್ಯವಸ್ಥೆ ಆಗಬೇಕು ಎಂದರು.

  ಉದ್ಯಾವರ  ಬ್ರಿಡ್ಜ್  ಕೆಳಗಡೆಯಿಂದ ಹೋಗುವ ಒಳಚರಂಡಿ ಇದ್ದು, ಅದರಲ್ಲಿ ಸರಾಗವಾಗಿ ನೀರು ಹರಿದು ಹೋಗುವುದಿಲ್ಲ. ನೀರು ಹರಿದು ಹೋಗಲು ಒಳಚರಂಡಿ ವ್ಯವಸ್ಥೆ ಇದ್ದು ಚರಂಡಿಯ ಇಕ್ಕೆಲಗಳಲ್ಲಿ ಇರುವ ಹುಲ್ಲು ಮತ್ತು ಒಳಚರಂಡಿಯಲ್ಲಿ ಮಣ್ಣು ತುಂಬಿದೆ.  ಒಳಚರಂಡಿಯನ್ನು ಸ್ವಚ್ಛಗೊಳಿಸಿದಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತದೆ.

 ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟಪಾಡಿ ಜಂಕ್ಷನ್ ನಿಂದ ಸುಮಾರು 2 ಕಿಮೀ ಒಳಚರಂಡಿ ನಿರ್ಮಿಸಿದ್ದು, ಸರ್ವಿಸ್ ರಸ್ತೆ ಮುಕ್ತಾಯವಾಗುವಲ್ಲಿ ಒಳಚರಂಡಿ ಕಾಮಗಾರಿಯನ್ನು ನಿಲ್ಲಿಸಿದ್ದಾರೆ. ನೀರು ಮುಂದಕ್ಕೆ ಹರಿದು ಹೋಗಲು ವ್ಯವಸ್ಥೆ ಇಟ್ಟಿಲ್ಲ.   ಆದ್ದರಿಂದ ಮಳೆಗಾಲದ ನೀರು ಒಂದೇ ಕಡೆ ಶೇಖರಣೆಯಾಗುತ್ತಿದ್ದು, ಅಲ್ಲಿರುವ ವಾಸ್ತವ್ಯದ ಮನೆಗಳಿಗೆ ನೆರೆಹಾನಿಯಾಗುತ್ತದೆ. ಪರಿಹಾರವಾಗಿ ಕಟಪಾಡಿ ಜಂಕ್ಷನ್ ನಿಂದ ಸುಮಾರು 2 ಕಿಮೀ ದೂರ ನಿರ್ಮಿಸಿದ ಒಳಚರಂಡಿ ಕಾಮಗಾರಿ ನಿಲುಗಡೆಯಾದ ಸ್ಥಳದಿಂದ ಕಲ್ಲಾಪು ಸೇತುವೆ ವರೆಗೆ ಒಳಚರಂಡಿ ನಿರ್ಮಿಸಿ ಸಂಪರ್ಕ ನೀಡಿದಲ್ಲಿ ನೀರು ಸರಾಗವಾಗಿ ಹರಿದು ಹೋಗುವುದರಿಂದ ಈ ಪರಿಸರದ ಮನೆಗಳನ್ನು ನೆರೆಹಾನಿಯಿಂದ ಶಾಶ್ವತ ಪರಿಹಾರ ಒದಗಿಸಬಹುದು.

 ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯ ಮಳೆ ನೀರು  ಸರಾಗವಾಗಿ ನೀರು ಹರಿದು ಹೋಗದೆ, ರಸ್ತೆಯ ಮೇಲೆ ಹರಿಯುತ್ತಿದೆ. ಈ ಕಾರಣ ಕೆಲವು ಮನೆಗಳಿಗೆ ನೀರು ನುಗ್ಗುತ್ತದೆ. ನಾಲ್ಕಾರು ಮನೆಗಳು ಪ್ರತಿ ವರ್ಷವೂ ಕೃತಕ ನೆರೆಗೆ ಒಳಗಾಗುತ್ತದೆ.

   ಪಡುಬಿದ್ರಿ ಬಂಟರ ಭವನದ ಎದುರು ಹೈವೇ ಚರಂಡಿ ಇಲ್ಲ. ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಹೈವೇ ಚರಂಡಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕನ್ನಂಗಾರು ಗರಡಿಯಿಂದ ಅರಫ ಹೋಟೆಲಿನ ವರೆಗೆ ಸರ್ವಿಸ್ ರಸ್ತೆ ಇಲ್ಲ.  ಪಡುಬಿದ್ರಿ ಮಹಾಗಣಪತಿ ದೇವಸ್ಥಾನದಿಂದ ಬಂಟರ ಭವನದ ಕಡೆ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ನೀರು ಹರಿಯಲು ರಚಿಸಿರುವ ಅಂಡರ್ ಪಾಸ್ ಕಾಲುವೆಯ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಪಕ್ಕದಲ್ಲಿನ ಕಿರಿದಾದ ಚರಂಡಿ ವ್ಯವಸ್ಥೆಯೇ ಈ ಸಮಸ್ಯೆಗೆ ಕಾರಣ ವಾಗಿದೆ.

 ಈಗಾಗಲೇ ಇರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಗಳನ್ನು ಅಗಲಗೊಳಿಸುವುದು ಮತ್ತು  ಚರಂಡಿ ನಿರ್ಮಿಸುವುದು. ವೈಜ್ಞಾನಿಕವಾಗಿ ನಿರ್ಮಾಣ ಮಾಡುವುದು ಮತ್ತು ಎನ್ ಹೆಚ್ ಪಕ್ಕದ ಚರಂಡಿಯನ್ನು ಅಗಲೀಕರಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸ ಬೇಕಿದೆ.

 ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವು ಮನೆಗೆ ಮಳೆ ನೀರು ನುಗ್ಗಿ ಸಮಸ್ಯೆ ಉಂಟಾಗುತ್ತದೆ.  ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇದ್ದು ಚರಂಡಿಯನ್ನು ಸ್ವಚ್ಛಗೊಳಿಸಿ ತಡೆಗೋಡೆ ನಿರ್ಮಿಸದರೆ, ಕೃತಕ ನೆರೆಗೆ ತಡೆ ಒಡ್ಡಬಹುದು.

 ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಶಿವನಗರದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದ ನೀರು ಶಾಲೆಯ ಎದುರುಗಡೆ ನಿಂತು ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಶಿವನಗರ ಮಹಾಲಿಂಗೇಶ್ವರ ದೇವಸ್ಥಾನದ ಕಮಾನಿನ ಪಕ್ಕದಲ್ಲಿರುವ ಮನೆಗಳಿಗೆ ನೀರು ನುಗುವ ಸಾಧ್ಯತೆ ಇರುತ್ತದೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿದರೆ ಇದು ಸರಿಯಾಗುತ್ತದೆ.

 ಪ್ರತಿ ಮಳೆಗಾಲದಲ್ಲಿ ಈ ಅವೈಜ್ಞಾನಿಕ ಕಾಮಗಾರಿಯಿಂದ ಕಾಪುವಿನಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತದೆ. ಕಳೆದ ವರ್ಷ ಇದೇ ರೀತಿಯ ಅವಾಂತರ ಉಂಟಾಗಿ ತಹಶಿಲ್ದಾರ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು.

 ತಹಶಿಲ್ದಾರ್ ಡಾ.ಪ್ರತಿಭಾ ಆರ್ ಹೇಳಿಕೆ: ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಪ್ರತಿ ವರ್ಷ ಕಾಪುವಿನಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಕಂದಾಯ ಇಲಾಖೆ ನೆರೆ ರಕ್ಷಣಾ ಕಾರ್ಯದಲ್ಲಿ ತೊಡಗಬೇಕಾಗುತ್ತದೆ. ಸಾರ್ವಜನಿಕ ರಕ್ಷಣೆ ನಮ್ಮ ಮೊದಲ ಆದ್ಯತೆ. ಅವೈಜ್ಞಾನಿಕ ಕಾಮಗಾರಿಯ ಕುರಿತು ಮಾನ್ಯ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೂ ತರಲಾಗಿದೆ.ಎಂದು ತಹಶಿಲ್ದಾರ್ ಪ್ರತಿಭಾ ಹೇಳಿದ್ದಾರೆ.

ತಹಶಿಲ್ದಾರ್ ಪ್ರತಿಭಾ ರವರ ಜೊತೆ ತಾಲ್ಲೂಕು ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವಾ, ಕಂದಾಯ ಅಧಿಕಾರಿ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿಗಳಾದ ಡೇನಿಯಲ್ ಡಿಸೋಜ, ಜಗದೀಶ್, ಶ್ರೀಕಾಂತ್, ಗ್ರಾಮ ಲೆಕ್ಕಿಗರಾದ ಚಂದ್ರಕಲಾ, ಸತೀಶ್, ಕಟಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರಭಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.