ಮಲ್ಪೆ : ಕೋಳಿ ಅಂಕಕ್ಕೆ ದಾಳಿ– ನಗದು, ಸೊತ್ತು ವಶ
(Malpe) ಮಲ್ಪೆ: ಕಿದಿಯೂರು ಗ್ರಾಮದ ಕಪ್ಪೆಟ್ಟು ಬ್ರಹ್ಮ ಬೈದರ್ಕಳ ಗರಡಿಯ ಬಳಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯಂತೆ ಮಲ್ಪೆ ಪೊಲೀಸರು ದಾಳಿ ನಡೆಸಿದಾಗ ಶರತ್, ಸಂದೇಶ, ಜಯಕರ, ರಮೇಶ, ಅರುಣ ಕುಮಾರ್ ಸೇರಿದಂತೆ ಕೆಲವು ಮಂದಿ ಓಡಿ ಪರಾರಿಯಾಗಿದ್ದಾರೆ.
ಸ್ಥಳದಲ್ಲಿದ್ದ 2,200ರೂ. ನಗದು, 10ಸಾವಿರ ರೂ. ಮೌಲ್ಯದ 10 ಹುಂಜ ಕೋಳಿ, ಕೋಳಿಯ ಕಾಲಿಗೆ ಕಟ್ಟಿದ ಎರಡು ಹರಿತವಾದ ಬಾಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

