ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿನಿಯರು ಮಂಗಳೂರು ವಲಯ ವಾಲಿಬಾಲ್ ಪಂದ್ಯಾವಳಿಯಲ್ಲಿ ರನ್ನರ್ ಅಫ್
(Mangaluru) ಮಂಗಳೂರು: ಮಂಗಳೂರಿನ ಎಜೆ ಇಂಜಿನಿಯರಿಂಗ್‌ಕಾಲೇಜಿನಲ್ಲಿ ನಡೆದ ಮಹಿಳೆಯರ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ಮಂಗಳೂರು ವಿಭಾಗದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾವಳಿ ೨೦೨೫-೨೬ ರಲ್ಲಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿನಿಯರ ತಂಡವು ದ್ವಿತೀಯ ಸ್ಥಾನದೊಂದಿಗೆ ರನ್ನರ್ ಅಪ್ ಟ್ರೋಪಿಯನ್ನು ಪಡೆದಿದೆ.
ವಿದ್ಯಾರ್ಥಿನಿಯರಾದ ಗಣಕಯಂತ್ರ ವಿಭಾಗದ ಮೊದಲನೇ ವರ್ಷದ ಅನನ್ಯ ಬಿ, ಪ್ರಕೃತಿ, ದೀಕ್ಷಾಎನ್ ನಾಯಕ್ ಮತ್ತು ಲಕ್ಷ್ಮೀ, ಎರಡನೇ ವರ್ಷದ ಶ್ರೀ ನಿಧಿ ಹೆಗ್ಡೆ, ಮೂರನೇ ವರ್ಷದ ಶ್ರೇಯಾ ಮತ್ತು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಶಿನ್ ಲರ್ನಿಂಗ್ ವಿಭಾಗದ ಮೂರನೇ ವರ್ಷದ ದೀಕ್ಷಾ ಪ್ರಭು, ವೈಷ್ಣವಿ ಆರ್ ನಾಯಕ್ ಮತ್ತುಎರಡನೇ ವರ್ಷದ ಅನನ್ಯಾ ಭಟ್ ಇವರುಗಳು ೨ ಮೇ ೨೦೨೫ ರಂದು ಹುಬ್ಬಳ್ಳಿಯ ಜೈನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

