• Home  
  • ಹೆದ್ದಾರಿ ಪಕ್ಕದ ಕಲ್ಲಿಗೆ ಡಿಕ್ಕಿಯಾದ ಬೈಕ್ ಬೆಂಕಿಗಾಹುತಿ ; ಸವಾರ ಗಂಭೀರ(Bike catches fire after hitting a rock on the side of the highway; rider in serious condition)
- ಅಪಘಾತ

ಹೆದ್ದಾರಿ ಪಕ್ಕದ ಕಲ್ಲಿಗೆ ಡಿಕ್ಕಿಯಾದ ಬೈಕ್ ಬೆಂಕಿಗಾಹುತಿ ; ಸವಾರ ಗಂಭೀರ(Bike catches fire after hitting a rock on the side of the highway; rider in serious condition)

Share: ಹೆದ್ದಾರಿ ಪಕ್ಕದ ಕಲ್ಲಿಗೆ ಡಿಕ್ಕಿಯಾದ ಬೈಕ್ ಬೆಂಕಿಗಾಹುತಿ ; ಸವಾರ ಗಂಭೀರ ಪಡುಬಿದ್ರಿ : ರಾ.ಹೆ.66 ರ ಎರ್ಮಾಳು ಗರೋಡಿ ಸಮೀಪ ಬೈಕೊಂದು ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಕಲ್ಲಿಗೆ ಡಿಕ್ಕಿಯಾಗಿ ಬೆಂಕಿ ಹತ್ತಿಕೊಂಡು ಸಂಪೂರ್ಣ ಬೆಂಕಿಗಾಹುತಿಯಾಗಿ, ಬೈಕಿನಿಂದ ಎಸೆಯಲ್ಪಟ್ಟ ಯುವಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಗಾಯಗೊಂಡ ಯುವಕ ಎರ್ಮಾಳು ಗುಜ್ಜಿ ನಿವಾಸಿ ಅಜೀಜ್ ಎಂಬವರ ಪುತ್ರ ಸೈಫಾನ್ ಎಂದು ಗುರುತಿಸಲಾಗಿದೆ. ಪಡುಬಿದ್ರಿ ಕಡೆಯಿಂದ ಎರ್ಮಾಳಿನ ತನ್ನ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಸ್ಥಳೀಯರು ಬೆಂಕಿ […]

ಹೆದ್ದಾರಿ ಪಕ್ಕದ ಕಲ್ಲಿಗೆ ಡಿಕ್ಕಿಯಾದ ಬೈಕ್ ಬೆಂಕಿಗಾಹುತಿ ; ಸವಾರ ಗಂಭೀರ

ಪಡುಬಿದ್ರಿ : ರಾ.ಹೆ.66 ರ ಎರ್ಮಾಳು ಗರೋಡಿ ಸಮೀಪ ಬೈಕೊಂದು ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಕಲ್ಲಿಗೆ ಡಿಕ್ಕಿಯಾಗಿ ಬೆಂಕಿ ಹತ್ತಿಕೊಂಡು ಸಂಪೂರ್ಣ ಬೆಂಕಿಗಾಹುತಿಯಾಗಿ, ಬೈಕಿನಿಂದ ಎಸೆಯಲ್ಪಟ್ಟ ಯುವಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಗಾಯಗೊಂಡ ಯುವಕ ಎರ್ಮಾಳು ಗುಜ್ಜಿ ನಿವಾಸಿ ಅಜೀಜ್ ಎಂಬವರ ಪುತ್ರ ಸೈಫಾನ್ ಎಂದು ಗುರುತಿಸಲಾಗಿದೆ. ಪಡುಬಿದ್ರಿ ಕಡೆಯಿಂದ ಎರ್ಮಾಳಿನ ತನ್ನ ಮನೆಗೆ ಬರುತ್ತಿದ್ದ ಎನ್ನಲಾಗಿದೆ.

ಸ್ಥಳೀಯರು ಬೆಂಕಿ ನಂದಿಸಿದರೂ ಪ್ರಯೋಜನವಾಗಲಿಲ್ಲ. ಗಾಯಳುವನ್ನು ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.