ಕಾರ್ಕಳ : ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬಾವಿ ಸ್ವಚ್ಛಗೊಳಿಸಲು ಬಾವಿಗಿಳಿದ ವೃದ್ಧರ ರಕ್ಷಣೆ
(Karkala) ಕಾರ್ಕಳ: ಸಾಣೂರು ಗೇರು ಬೀಜ ಕಂಪನಿಯ ಬಳಿಯ ನಿವಾಸವೊಂದರ 35ಅಡಿ ಆಳದ ಹಾಗು 20 ಅಡಿ ಅಗಲದ ಬಾವಿಗೆ ವ್ಯಕ್ತಿ ಯೊಬ್ಬರು ಬಾವಿ ಸ್ವಚ್ಛಗೊಳಿಸಲು ಇಳಿದ್ದಿದ್ದು, ಮೇಲಕ್ಕೆ ಬರಲಾಗದೆ ಒದ್ದಾಡುತ್ತಿದ್ದ ಅವರನ್ನು ಕಾರ್ಕಳ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿ ಮೇಲಕ್ಕೆ ಎತ್ತಿ ಪ್ರಾಣ ರಕ್ಷಣೆ ಮಾಡಿದ ಘಟನೆ ಘಟಿಸಿದೆ.
ಬಾವಗೆ ಇಳಿದು ಸ್ವಚ್ಛತಾ ಕಾರ್ಯದಲ್ಲಿ ಇಳಿದವರು ಹರೀಶ್ ಆಚಾರ್ಯ (55).
ಈ ಕಾರ್ಯಚರಣೆಯಲ್ಲಿ ಅಧಿಕಾರಿಯವರಾದ ಆಲ್ಬರ್ಟ್ ಮೋನಿಸ್, ಸಿಬ್ಬಂದಿಯವರಾದ ಅಚ್ಚುತ ಕರ್ಕೇರ, ಹರಿಪ್ರಸಾದ್ ಶೆಟ್ಟಿಗಾರ್, ಜಯ ಮೂಲ್ಯ, ಮುಝಮಿಲ್, ಗಣೇಶ ಆಚಾರ್ಯ ಮತ್ತು ಭೀಮಪ್ಪ ಭಾಗವಹಿಸಿದ್ದರು.

