• Home  
  • ಹೆಜಮಾಡಿ : ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ ದಾರಗ ಆಲಡೆ ಸಂಕೋಚ, ಬಾಲಾಲಯ ಪ್ರತಿಷ್ಠೆ (Hejamadi: Sri Brahmalingeshwara Abbaga Daraga Alade Sankocha, Balalaya Pratistha)
- ಧಾರ್ಮಿಕ

ಹೆಜಮಾಡಿ : ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ ದಾರಗ ಆಲಡೆ ಸಂಕೋಚ, ಬಾಲಾಲಯ ಪ್ರತಿಷ್ಠೆ (Hejamadi: Sri Brahmalingeshwara Abbaga Daraga Alade Sankocha, Balalaya Pratistha)

Share:  ಹೆಜಮಾಡಿ: ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ ದಾರಗ ಆಲಡೆ ಸಂಕೋಚ, ಬಾಲಾಲಯ ಪ್ರತಿಷ್ಠೆ  (Hejamdi) ಹೆಜಮಾಡಿ: ಸುಮಾರು ೫ ಕೋಟಿ ರೂ. ವೆಚ್ಚದಲ್ಲಿ ಪುನರ್‌ನಿರ್ಮಾಣಗೊಳ್ಳಲಿರುವ ಹೆಜಮಾಡಿ ಬಸ್ತಿಪಡ್ಪು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ ದಾರಗ ಆಲಡೆಯ ಶ್ರೀ ದೇವರ ಮತ್ತು ಪರಿವಾರ ಶಕ್ತಿಗಳ ಸಂಕೋಚ ಹಾಗೂ ಬಾಲಾಲಯ ದೇವತಾ ಶಕ್ತಿಗಳ ಪ್ರತಿಷ್ಠಾ ಕಾರ್ಯಕ್ರಮವು ಶುಕ್ರವಾರ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ಮತ್ತು ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ಭಟ್ ನೇತೃತ್ವದಲ್ಲಿ ನಾನಾ ಧಾರ್ಮಿಕ ವಿಧಿಗಳೊಂದಿಗೆ ನೆರವೇರಿತು. […]

 (Hejamdi) ಹೆಜಮಾಡಿ: ಸುಮಾರು ೫ ಕೋಟಿ ರೂ. ವೆಚ್ಚದಲ್ಲಿ ಪುನರ್‌ನಿರ್ಮಾಣಗೊಳ್ಳಲಿರುವ ಹೆಜಮಾಡಿ ಬಸ್ತಿಪಡ್ಪು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ ದಾರಗ ಆಲಡೆಯ ಶ್ರೀ ದೇವರ ಮತ್ತು ಪರಿವಾರ ಶಕ್ತಿಗಳ ಸಂಕೋಚ ಹಾಗೂ ಬಾಲಾಲಯ ದೇವತಾ ಶಕ್ತಿಗಳ ಪ್ರತಿಷ್ಠಾ ಕಾರ್ಯಕ್ರಮವು ಶುಕ್ರವಾರ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ಮತ್ತು ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ಭಟ್ ನೇತೃತ್ವದಲ್ಲಿ ನಾನಾ ಧಾರ್ಮಿಕ ವಿಧಿಗಳೊಂದಿಗೆ ನೆರವೇರಿತು.

ಗುರುವಾರ ರಾತ್ರಿಯಿಂದ ನಾನಾ ಧಾರ್ಮಿಕ ವಿಧಿಗಳನ್ನು ನಡೆಸಿದ ಬಳಿಕ ಶುಕ್ರವಾರ ಮುಂಜಾನೆಯಿಂದಲೇ ಸಂಕೋಚ ಸಹಿತ ದೇವತಾ ಶಕ್ತಿಗಳ ಬಾಲಾಲಯ ಪ್ರತಿಷ್ಠಾ ವಿಧಿಗಳನ್ನು ಭಕ್ತರ ಸಮ್ಮುಖದಲ್ಲಿ ನಡೆಸಲಾಯಿತು.

ಆರಂಭದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ, ಅಬ್ಬಗ ದಾರಗ, ಶ್ರೀ ಕುಮಾರ, ರಕ್ತೇಶ್ವರೀ, ಕ್ಷೇತ್ರಪಾಲ, ನಂದಿಗೋಣ, ಸಾರಮಾನ್ಯ ದೈವ ಶಕ್ತಿಗಳನ್ನು ಸಂಕೋಚಗೊಳಿಸಿ ಬಾಲಾಲಯ ಪ್ರತಿಷ್ಠೆ ನಡೆಯಿತು. ಶ್ರೀ ನಾಗದೇವರನ್ನು ಸಂಕೋಚಗೊಳಿಸಿ ಜಳಕದ ಕೆರೆಯಲ್ಲಿ ಪ್ರತಿಷ್ಠಾಪಿಸಲಾಯಿತು.

ಬ್ರಹ್ಮಕಲಶ ಪರ್ಯಂತ ನಿರಂತರ ಭಜನೆ, ಪ್ರವಚನ, ಜಪತಪ ನಿರಂತರ ನಡೆಯುವಂತೆ ವಾದಿರಾಜ ಉಪಾಧ್ಯಾಯ ಹೇಳಿದರು.

ಶ್ರೀ ಆಲಡೆಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಟೇಲರಮನೆ ಪುಷ್ಪರಾಜ್ ಶೆಟ್ಟಿ, ಆಲಡೆಯ ಆಡಳಿತ ಮೊಕ್ತೇಸರ ಸುರೇಶ್ ಶೆಟ್ಟಿ, ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜ್ಮಾಡಿ, ಮೂಲ್ಕಿ ಬಿಲ್ಲವರ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ರವಿ ಶೆಟ್ಟಿ, ಸುಧಾಕರ ಕರ್ಕೇರ, ಎಚ್.ರವಿ ಕುಂದರ್, ಹೇಮನಂದ ಪುತ್ರನ್, ಸತೀಶ್ ಕೋಟ್ಯಾನ್‌, ಸುಪ್ರ, ಅರುಣ್ ಶೆಟ್ಟಿ, ಸುರೇಖಾ ಶೆಟ್ಟಿ, ಮಾಧವ ಸನಿಲ್, ಪ್ರಬೋದ್‌ಚಂದ್ರ ಹೆಜ್ಮಾಡಿ, ಸುರೇಖಾ ಶೆಟ್ಟಿ ಐಕಳ, ಗಣೇಶ್ ಕೋಟ್ಯಾನ್ ಪಡುಬಿದ್ರಿ, ಶರಣ್‌ಕುಮಾರ್ ಮಟ್ಟು, ದೊಂಬ ಪೂಜಾರಿ, ಶಿಲ್ಪಿ ಸುಬ್ರಹ್ಮಣ್ಯ ಕಾರ್ಕಳ, ಡಾ. ಶ್ರೀವತ್ಸ ಉಪಾಧ್ಯಾಯ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.