• Home  
  • ಸ್ಪೊರ್ಟಿಫೈ – 25  – ಐಸಿವೈಎಮ್ ಉಡುಪಿ ವಲಯಕ್ಕೆ ಚಾಂಪಿಯನ್ಸ್ ಪಟ್ಟ (Sportify – 25 – ICYM Udupi Zone crowned champions)
- ಕ್ರೀಡೆ

ಸ್ಪೊರ್ಟಿಫೈ – 25  – ಐಸಿವೈಎಮ್ ಉಡುಪಿ ವಲಯಕ್ಕೆ ಚಾಂಪಿಯನ್ಸ್ ಪಟ್ಟ (Sportify – 25 – ICYM Udupi Zone crowned champions)

Share: ಸ್ಪೊರ್ಟಿಫೈ – 25  – ಐಸಿವೈಎಮ್ ಉಡುಪಿ ವಲಯಕ್ಕೆ ಚಾಂಪಿಯನ್ಸ್ ಪಟ್ಟ (Udupi) ಉಡುಪಿ : ಐಸಿವೈಎಮ್ ಉಡುಪಿ ಧರ್ಮಪ್ರಾಂತ್ಯ ಮತ್ತು ಉಡುಪಿ ವಲಯದ ಸಹಯೋಗದಲ್ಲಿ ಉಡುಪಿಯ ಮಹಾತ್ಮ ಗಾಂಧಿ  ಕ್ರೀಡಾಂಗಣದಲ್ಲಿ ಸ್ಪೊರ್ಟಿಫೈ’25 ಕ್ರೀಡಾಕೂಟವು ವಿಜೃಂಭಣೆಯಿಂದ ಜರಗಿತು.  ಉಡುಪಿ ವಲಯದ ಪ್ರಧಾನ ಧರ್ಮ ಗುರು ವo. ಫಾ. ಚಾರ್ಲ್ಸ್ ಮಿನೇಜಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.  ಉಡುಪಿ ವಲಯವು ವಿವಿಧ ಗುಂಪು ಕ್ರೀಡಾ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿ ‘ಚಾಂಪಿಯನ್ಸ್’ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಈ ಸ್ಪರ್ಧೆಯು ಉಡುಪಿ ಧರ್ಮಪ್ರಾಂತ್ಯದ […]

(Udupi) ಉಡುಪಿ : ಐಸಿವೈಎಮ್ ಉಡುಪಿ ಧರ್ಮಪ್ರಾಂತ್ಯ ಮತ್ತು ಉಡುಪಿ ವಲಯದ ಸಹಯೋಗದಲ್ಲಿ ಉಡುಪಿಯ ಮಹಾತ್ಮ ಗಾಂಧಿ  ಕ್ರೀಡಾಂಗಣದಲ್ಲಿ ಸ್ಪೊರ್ಟಿಫೈ’25 ಕ್ರೀಡಾಕೂಟವು ವಿಜೃಂಭಣೆಯಿಂದ ಜರಗಿತು.

 ಉಡುಪಿ ವಲಯದ ಪ್ರಧಾನ ಧರ್ಮ ಗುರು ವo. ಫಾ. ಚಾರ್ಲ್ಸ್ ಮಿನೇಜಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

 ಉಡುಪಿ ವಲಯವು ವಿವಿಧ ಗುಂಪು ಕ್ರೀಡಾ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿ ‘ಚಾಂಪಿಯನ್ಸ್’ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಈ ಸ್ಪರ್ಧೆಯು ಉಡುಪಿ ಧರ್ಮಪ್ರಾಂತ್ಯದ 5 ವಲಯಗಳ ನಡುವೆ ನಡೆದಿತ್ತು.

ಉಡುಪಿ ವಲಯ ಗೆಲುವು ಸಾಧಿಸಿದ ಸ್ಪರ್ಧೆಯ ವಿವರ

1. ಮಹಿಳಾ ವಿಭಾಗ: ತ್ರೋಬಾಲ್ ಪ್ರಥಮ, 4×100 ರಿಲೆ ತ್ರತೀಯ

2. ಪುರುಷರ ವಿಭಾಗ: ವಾಲಿಬಾಲ್ ದ್ವಿತೀಯ,4×100 ರಿಲೆ ದ್ವಿತೀಯ

3. ಬ್ಯಾಡ್ಮಿಂಟನ್ -ಮಿಕ್ಸಡ್ ಡಬಲ್ : ಪ್ರಥಮ ಮತ್ತು ದ್ವಿತೀಯ

  ಕ್ರೀಡಾಕೂಟದಲ್ಲಿ ಜಯಗಳಿಸಿದ ಐಸಿವೈಎಮ್ ಉಡುಪಿ ವಲಯದ ಕ್ರೀಡಾಪಟುಗಳಿಗೆ ಐಸಿವೈಎಮ್ ಉಡುಪಿ ವಲಯದ ನಿರ್ದೇಶಕರಾದ ವಂ. ರೊನ್ಸನ್ ಡಿಸೋಜಾ, ಅಧ್ಯಕ್ಷ ರೊವಿನ್ ಪಿರೇರಾ, ಕಾರ್ಯದರ್ಶಿ ಶಾರನ್ ಕ್ರಾಸ್ತಾ ಹಾಗೂ ಸಮಿತಿ ಸದಸ್ಯರು ಅಭಿನಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.