• Home  
  • ಕುಂದಾಪುರ ; ಪಂಚಗಂಗಾವಳಿ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ, ಓರ್ವ ವಶ (Kundapur; Illegal sand mining in Panchgangavali stream, one arrested)
- ಅಪರಾಧ

ಕುಂದಾಪುರ ; ಪಂಚಗಂಗಾವಳಿ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ, ಓರ್ವ ವಶ (Kundapur; Illegal sand mining in Panchgangavali stream, one arrested)

Share: ಕುಂದಾಪುರ ; ಪಂಚಗಂಗಾವಳಿ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ, ಓರ್ವ ವಶ (Kundapura) ಕುಂದಾಪುರ: ಕುಂದಾಪುರ ವಡೇರಹೋಬಳಿ ಗ್ರಾಮದ ನಾನಾ ಸಾಹೇಬ್ ರಸ್ತೆಯ ರಿಂಗ್ ರೋಡ್ ಸಮೀಪದ ಪಂಚಗಂಗಾವಳಿ ಹೊಳೆಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಮರಳುಗಾರಿಕೆ ಅಡ್ಡೆಗೆ ಪೊಲೀಸರ ತಂಡ ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.  ಆರೋಪಿ ಉದಯ ಮೆಂಡನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇನ್ನೋರ್ವ ಆರೋಪಿ ಸುನಿಲ್ ಪರಾರಿಯಾಗಿದ್ದಾನೆ.  ಇವರು ಯಾವುದೇ ಪರವಾನಿಗೆ ಇಲ್ಲದೇ ಹೊಳೆಯಿಂದ ಮರಳನ್ನು ಕಳವು ಮಾಡಿ ಸಾಗಾಟ ಮಾಡಲು ಸಂಗ್ರಹಿಸಿರುವುದು ಕಂಡು ಬಂದಿದೆ. […]

(Kundapura) ಕುಂದಾಪುರ: ಕುಂದಾಪುರ ವಡೇರಹೋಬಳಿ ಗ್ರಾಮದ ನಾನಾ ಸಾಹೇಬ್ ರಸ್ತೆಯ ರಿಂಗ್ ರೋಡ್ ಸಮೀಪದ ಪಂಚಗಂಗಾವಳಿ ಹೊಳೆಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಮರಳುಗಾರಿಕೆ ಅಡ್ಡೆಗೆ ಪೊಲೀಸರ ತಂಡ ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.

 ಆರೋಪಿ ಉದಯ ಮೆಂಡನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇನ್ನೋರ್ವ ಆರೋಪಿ ಸುನಿಲ್ ಪರಾರಿಯಾಗಿದ್ದಾನೆ.

 ಇವರು ಯಾವುದೇ ಪರವಾನಿಗೆ ಇಲ್ಲದೇ ಹೊಳೆಯಿಂದ ಮರಳನ್ನು ಕಳವು ಮಾಡಿ ಸಾಗಾಟ ಮಾಡಲು ಸಂಗ್ರಹಿಸಿರುವುದು ಕಂಡು ಬಂದಿದೆ.

ಮರಳುಗಾರಿಕೆಗೆ ಬಳಸಿದ ಫೈಬ‌ರ್ ದೋಣಿ, ಒಂದೂವರೆ ಯೂನಿಟ್ ಮರಳು, 407 ಟಿಪ್ಪರ್ ವಾಹನ, ಇನ್ನಿತರ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.