• Home  
  • ಬಂಟಕಲ್:‌ ಕ್ಲೌಡ್‌ಮೊನಿಟರಿಂಗ್, ಪಬ್ಲಿಕ್‌ಕ್ಲೌಡ್‌ ಅಪ್ಲಿಕೇಶನ್ ಪ್ರೋಗ್ರಾಮಿಂಗ್‌ ಇಂಟರ್ಫೇಸ್‌ ಕುರಿತು ಕಾರ್ಯಾಗಾರ (Workshop on Cloud Monitoring, Applications and Public cloud APIs. At SMVITM)
- ಶಾಲಾ ಕಾಲೇಜು

ಬಂಟಕಲ್:‌ ಕ್ಲೌಡ್‌ಮೊನಿಟರಿಂಗ್, ಪಬ್ಲಿಕ್‌ಕ್ಲೌಡ್‌ ಅಪ್ಲಿಕೇಶನ್ ಪ್ರೋಗ್ರಾಮಿಂಗ್‌ ಇಂಟರ್ಫೇಸ್‌ ಕುರಿತು ಕಾರ್ಯಾಗಾರ (Workshop on Cloud Monitoring, Applications and Public cloud APIs. At SMVITM)

Share: ಬಂಟಕಲ್ :‌ ಕ್ಲೌಡ್‌ಮೊನಿಟರಿಂಗ್, ಪಬ್ಲಿಕ್‌ ಕ್ಲೌಡ್‌ ಅಪ್ಲಿಕೇಶನ್ ಪ್ರೋಗ್ರಾಮಿಂಗ್‌ ಇಂಟರ್ಫೇಸ್‌ ಕುರಿತು ಕಾರ್ಯಾಗಾರ (Bantakal) ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಗಣಕಯಂತ್ರ ವಿಭಾಗವು ಐಎಸ್‌ಟಿಇ ವಿದ್ಯಾರ್ಥಿ ಘಟಕ ಮತ್ತು ಐಇಇಇ ವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕ್ಲೌಡ್‌ ಮೊನಿಟರಿಂಗ್, ಪಬ್ಲಿಕ್‌ ಕ್ಲೌಡ್‌ ಅಪ್ಲಿಕೇಶನ್ ಪ್ರೋಗ್ರಾಮಿಂಗ್‌ ಇಂಟರ್ಫೇಸ್‌ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.  ಈ ಕಾರ್ಯಾಗಾರದಲ್ಲಿ ಕ್ಲೌಡ್‌ಕಂಪ್ಯೂಟಿಂಗ್ ಮೂಲಭೂತ ಅಂಶಗಳು ಮತ್ತು ಗೂಗಲ್‌ಕ್ಲೌಡ್‌ನ ವಾಸ್ತು ಶಿಲ್ಪ, ಕಂಪ್ಯೂಟಿಂಗ್‌ ಎಂಜಿನ್‌ ಕ್ಲೌಡ್ ಸ್ಟೋರೇಜ್ ಮತ್ತು […]

(Bantakal) ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಗಣಕಯಂತ್ರ ವಿಭಾಗವು ಐಎಸ್‌ಟಿಇ ವಿದ್ಯಾರ್ಥಿ ಘಟಕ ಮತ್ತು ಐಇಇಇ ವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕ್ಲೌಡ್‌ ಮೊನಿಟರಿಂಗ್, ಪಬ್ಲಿಕ್‌ ಕ್ಲೌಡ್‌ ಅಪ್ಲಿಕೇಶನ್ ಪ್ರೋಗ್ರಾಮಿಂಗ್‌ ಇಂಟರ್ಫೇಸ್‌ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

 ಈ ಕಾರ್ಯಾಗಾರದಲ್ಲಿ ಕ್ಲೌಡ್‌ಕಂಪ್ಯೂಟಿಂಗ್ ಮೂಲಭೂತ ಅಂಶಗಳು ಮತ್ತು ಗೂಗಲ್‌ಕ್ಲೌಡ್‌ನ ವಾಸ್ತು ಶಿಲ್ಪ, ಕಂಪ್ಯೂಟಿಂಗ್‌ ಎಂಜಿನ್‌ ಕ್ಲೌಡ್ ಸ್ಟೋರೇಜ್ ಮತ್ತು ಅಪ್ಲಿಕೇಶನ್‌ ಇಂಜಿನ್ ಸೇರಿದಂತೆ ಪ್ರಮುಖ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.

ಗೂಗಲ್‌ ಕ್ಲೌಡ್‌ಪ್ಲಾಟ್ ಫಾರ್ಮ್‌ಗಳನ್ನು ಹೇಗೆ ನಿರ್ವಹಿಸುವುದು ಮತ್ತು ಕಾರ್ಯ ನಿರ್ವಹಿಸುವಲ್ಲಿ ಹೇಗೆ ಸಹಾಯ ಮಾಡುವುದು ಎಂಬುದರ ಬಗ್ಗೆ ಮಾಹಿತಿ ನೀಡಿದರು.

 ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನೀವಿಯಸ್ ಸೊಲ್ಯೂಷನ್ ಲಿಮಿಟೆಡ್, ಉಡುಪಿ ಇದರ ಕ್ಲೌಡ್ ಅಸೋಸಿಯೇಟ್ – ಗ್ರಾಹಕ ಎಂಜಿನಿಯರಿಂಗ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯ ಹಳೆ ವಿದ್ಯಾರ್ಥಿ  ಗೌತಮ್ ಶೇಟ್‌ ಮತ್ತು ವೈಭವ್ ಸಾಲಿಯಾನ್‌ರವರು  ಭಾಗವಹಿಸಿದ್ದರು.

 ಈ ಕಾರ್ಯಕ್ರಮದಲ್ಲಿ ಗಣಕ ಯಂತ್ರ ವಿಭಾಗದ ಮುಖ್ಯಸ್ಥರಾದ ಸೌಮ್ಯ ಜೆ ಭಟ್, ಪ್ರಾಧ್ಯಾಪಕರಾದ  ರಾಘವೇಂದ್ರ ಈಶ್ವರ ಹೆಗ್ಡೆ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.