• Home  
  •  ಕಾಪು: ಕೋವಿಡ್ ಪಾಸಿಟಿವ್ ವ್ಯಕ್ತಿ ಸಾವು: ತಹಶಿಲ್ದಾರ್ ಪ್ರತಿಭಾ ಮೃತರ ಮನೆಗೆ ಭೇಟಿ (Kaup: Covid positive person dies: Tahsildar Pratibha visits the deceased’s house)
- ಕಾಪು ತಾಲೂಕು ಆಡಳಿತ - ನಿಧನ

 ಕಾಪು: ಕೋವಿಡ್ ಪಾಸಿಟಿವ್ ವ್ಯಕ್ತಿ ಸಾವು: ತಹಶಿಲ್ದಾರ್ ಪ್ರತಿಭಾ ಮೃತರ ಮನೆಗೆ ಭೇಟಿ (Kaup: Covid positive person dies: Tahsildar Pratibha visits the deceased’s house)

Share:  ಕಾಪು : ಕೋವಿಡ್ ಪಾಸಿಟಿವ್ ವ್ಯಕ್ತಿ ಸಾವು: ತಹಶಿಲ್ದಾರ್ ಪ್ರತಿಭಾ ಮೃತರ ಮನೆಗೆ ಭೇಟಿ (Kaup) ಕಾಪು :  ಕಾಪು ತಾಲ್ಲೂಕಿನ ಬೆಳ್ಳೆ ಗ್ರಾಮದ  ವರ್ಷದ ಪೀಟರ್ ಮಥಾಯಸ್ (65)ಎಂಬುವವರು ಮಣಿಪಾಲ ಕೆಂಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಕಾಪು ಹಶಿಲ್ದಾರ್ ಡಾ. ಪ್ರತಿಭಾ ಆರ್ ಇಂದು ಅವರ ಮನೆಗೆ ಭೇಟಿ ನೀಡಿ ಮನೆಯವರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು.   ಮನೆಯವರಾರಿಗೂ ಕೋವಿಡ್ ಲಕ್ಷಣಗಳು ಕಂಡು ಬಂದಿಲ್ಲ. ಮೃತದೇಹ ಇನ್ನೂ ಆಸ್ಪತ್ತೆಯಲ್ಲಿಯೇ ಇದ್ದು, ಬುಧವಾರ […]

(Kaup) ಕಾಪು :  ಕಾಪು ತಾಲ್ಲೂಕಿನ ಬೆಳ್ಳೆ ಗ್ರಾಮದ  ವರ್ಷದ ಪೀಟರ್ ಮಥಾಯಸ್ (65)ಎಂಬುವವರು ಮಣಿಪಾಲ ಕೆಂಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಕಾಪು ಹಶಿಲ್ದಾರ್ ಡಾ. ಪ್ರತಿಭಾ ಆರ್ ಇಂದು ಅವರ ಮನೆಗೆ ಭೇಟಿ ನೀಡಿ ಮನೆಯವರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು.

  ಮನೆಯವರಾರಿಗೂ ಕೋವಿಡ್ ಲಕ್ಷಣಗಳು ಕಂಡು ಬಂದಿಲ್ಲ. ಮೃತದೇಹ ಇನ್ನೂ ಆಸ್ಪತ್ತೆಯಲ್ಲಿಯೇ ಇದ್ದು, ಬುಧವಾರ ಕೋವಿಡ್ SOP ಅನುಸರಿಸಿ ಅಂತ್ಯ ಸಂಸ್ಕಾರ ಕೈಗೊಳ್ಳಲು ತಹಶಿಲ್ದಾರ್ ಸೂಚಿಸಿದ್ದಾರೆ.

 ಪೀಟರ್ ಮಥಾಯಸ್ ರವರು ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕಳೆದ ಮೇ ೨೯ರಂದು ಹೈಪರ್ ಟೆನ್ಷನ್ ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಕೋವಿಡ್ ಟೆಸ್ಟ್ ಮಾಡಿದಾಗ ಕೋರೋನ ದೃಢಪಟ್ಟಿರುತ್ತದೆ. ಸೋಮವಾರ ಅವರು ಮೃತ ಪಟ್ಟಿದ್ದಾರೆ.

 ತಹಶಿಲ್ದಾರ್ ಮತ್ತು ವೈದ್ಯರ ತಂಡ, ಆಶಾ ಕಾರ್ಯಕರ್ತೆಯರು ಮನೆಗೆ ಭೇಟಿ ನೀಡಿ ಊರಿನ ಜನರಿಗೆ ಕೊರೊನ ಮುನ್ನೆಚ್ಚರಿಗಳ ಬಗ್ಗೆ ಅರಿವು ಮೂಡಿಸಿದರು.

  ತಾಲ್ಲೂಕು ವೈದ್ಯಾಧಿಕಾರಿ ಡಾ. ವಾಸುದೇವ್, ಶಿರ್ವ ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ, ಡಾ. ವೈಷ್ಣವಿ, ಆಶಾ ಕಾರ್ಯಕರ್ತೆ ಯಶೋದ, ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ಪ್ರದೀಪ್ ಹಾಜರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.