• Home  
  • ಮೂಳೂರು: ಪಾದಾಚಾರಿಗೆ ಲಾರಿ ಡಿಕ್ಕಿ, ಸ್ಥಳದಲ್ಲಿಯೇ ಸಾವು (Mulur : Pedestrian hit by lorry, dies on the spot)
- ಅಪಘಾತ

ಮೂಳೂರು: ಪಾದಾಚಾರಿಗೆ ಲಾರಿ ಡಿಕ್ಕಿ, ಸ್ಥಳದಲ್ಲಿಯೇ ಸಾವು (Mulur : Pedestrian hit by lorry, dies on the spot)

Share: ಮೂಳೂರು: ಪಾದಾಚಾರಿಗೆ ಲಾರಿ ಡಿಕ್ಕಿ, ಸ್ಥಳದಲ್ಲಿಯೇ ಸಾವು (Muluru) ಮೂಳೂರು: ಮೂಳೂರು ರಾಹೆ 66 ರಲ್ಲಿರಸ್ತೆ ದಾಟಲು ನಿಂತಿದ್ದ ಯುವಕನೋರ್ವರಿಗೆ   ಮಂಗಳೂರಿನಿಂದ ಉಡುಪಿ ಕಡೆಗೆ ಚಲಿಸುತ್ತಿದ್ದ  ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟ ಘಟನೆ ಮೂಳೂರಿನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.   ಮೂಳೂರು ಫಿಶರೀಸ್ ರಸ್ತೆ ಬಳಿಯ ನಿವಾಸಿ ಧನಂಜಯ‌ ಎ. ಸುವರ್ಣ (43) ಮೃತ ವ್ಯಕ್ತಿ.  ರಾಷ್ಟ್ರೀಯ ಹೆದ್ದಾರಿ 66 ರ ಮೂಳೂರು ಬಾರ್ ನ‌ ಮುಂಭಾಗದಲ್ಲಿ ರಸ್ತೆ ದಾಟಲೆಂದು ಡಿವೈಡರ್ […]

(Muluru) ಮೂಳೂರು: ಮೂಳೂರು ರಾಹೆ 66 ರಲ್ಲಿರಸ್ತೆ ದಾಟಲು ನಿಂತಿದ್ದ ಯುವಕನೋರ್ವರಿಗೆ   ಮಂಗಳೂರಿನಿಂದ ಉಡುಪಿ ಕಡೆಗೆ ಚಲಿಸುತ್ತಿದ್ದ  ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟ ಘಟನೆ ಮೂಳೂರಿನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

  ಮೂಳೂರು ಫಿಶರೀಸ್ ರಸ್ತೆ ಬಳಿಯ ನಿವಾಸಿ ಧನಂಜಯ‌ ಎ. ಸುವರ್ಣ (43) ಮೃತ ವ್ಯಕ್ತಿ.

 ರಾಷ್ಟ್ರೀಯ ಹೆದ್ದಾರಿ 66 ರ ಮೂಳೂರು ಬಾರ್ ನ‌ ಮುಂಭಾಗದಲ್ಲಿ ರಸ್ತೆ ದಾಟಲೆಂದು ಡಿವೈಡರ್ ಮೇಲೆ ನಿಂತಿದ್ದ ವ್ಯಕ್ತಿಗೆ ಮಂಗಳೂರಿನಿಂದ ಉಡುಪಿ‌ ಕಡೆಗೆ ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದ ಪರಿಣಾಮ‌ ಈ ಅಪಘಾತ ಸಂಭವಿಸಿದೆ.

 ಲಾರಿ ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಬಿದ್ದ ಅವರ ಮೇಲೆ ಲಾರಿಯ ಚಕ್ರ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

 ಅಪಘಾತದ ಬಳಿಕ ಚಾಲಕ ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿದ್ದು, ಲಾರಿಯ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

 ಕಾಪು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ.

 ಮೂಳೂರಿನ ಎಸ್‌ಡಿಪಿಐ ಆ್ಯಂಬುಲೆನ್ಸ್ ಸಹಾಯದಿಂದ ಜಲಾಲುದ್ದೀನ್ ಜಲ್ಲು, ನವಾಝ್, ಮಹ್ರೂಫ್, ವಿಕ್ಕಿ ರಿಕ್ಷಾ, ಅಚ್ಚು ಆತ್ರಾಡಿ ಹಾಗೂ ಇಮ್ತಿಯಾಝ್ ಮೂಳೂರು ಸೇರಿ ಮೃತ ಶರೀರವನ್ನು ಆಸ್ಪತ್ರೆಗೆ ಸಾಗಿಸಿದರು.

 ಜಾತಿ-ಧರ್ಮಗಳ ನಡುವೆ ಕೋಮುವಾದದ ವಿಷಬೀಜ ಬಿತ್ತಿ ದ್ವೇಷ ಹರಡುತ್ತಿರುವ ಸನ್ನಿವೇಶದಲ್ಲಿ, ತುರ್ತು ಸ್ಪಂಧಿಸಿದ ಉಚ್ಚಿಲದ ಯುವಕರು ಮಾನವೀಯ ಸೇವೆಯಲ್ಲಿ ನಿರತರಾಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.