• Home  
  • ಕ್ಯಾನ್ಸರ್ ರೋಗಿ ಮೃತ್ಯು – ಮೃತ ವ್ಯಕ್ತಿಗೆ ಕೋವಿಡ್ ಪಾಸಿಟಿವ್, ಮನೆಗೆ ತಹಶೀಲ್ದಾರ್ ಭೇಟಿ (Cancer patient dies – deceased tested positive for Covid, Tahsildar visits home)
- health - ಕಾಪು ತಾಲೂಕು ಆಡಳಿತ

ಕ್ಯಾನ್ಸರ್ ರೋಗಿ ಮೃತ್ಯು – ಮೃತ ವ್ಯಕ್ತಿಗೆ ಕೋವಿಡ್ ಪಾಸಿಟಿವ್, ಮನೆಗೆ ತಹಶೀಲ್ದಾರ್ ಭೇಟಿ (Cancer patient dies – deceased tested positive for Covid, Tahsildar visits home)

Share: ಕ್ಯಾನ್ಸರ್ ರೋಗಿ ಮೃತ್ಯು – ಮೃತ ವ್ಯಕ್ತಿಗೆ ಕೋವಿಡ್ ಪಾಸಿಟಿವ್, ಮನೆಗೆ ತಹಶೀಲ್ದಾರ್ ಭೇಟಿ (Kaup) ಕಾಪು: ಕಾಪು ತಾಲೂಕಿನ ಬೆಳ್ಳೆ ಗ್ರಾಮದ 65 ವರ್ಷದ ವ್ಯಕ್ತಿಯೊಬ್ಬರು ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಕಾಪು ತಹಶೀಲ್ದಾರ್ ಪ್ರತಿಭಾ ಆರ್ ಇಂದು ಅವರ ಮನೆಗೆ ಭೇಟಿ ನೀಡಿ ಮನೆಯವರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದ್ದಾರೆ.  ಈ ವ್ಯಕ್ತಿ ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಮೇ 29 ರಂದು ಚಿಕಿತ್ಸೆಗಾಗಿ ಕೆಎಂಸಿಗೆ ದಾಖಲಾಗಿದ್ದರು. ಅಲ್ಲಿ […]

(Kaup) ಕಾಪು: ಕಾಪು ತಾಲೂಕಿನ ಬೆಳ್ಳೆ ಗ್ರಾಮದ 65 ವರ್ಷದ ವ್ಯಕ್ತಿಯೊಬ್ಬರು ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಕಾಪು ತಹಶೀಲ್ದಾರ್ ಪ್ರತಿಭಾ ಆರ್ ಇಂದು ಅವರ ಮನೆಗೆ ಭೇಟಿ ನೀಡಿ ಮನೆಯವರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದ್ದಾರೆ.

 ಈ ವ್ಯಕ್ತಿ ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಮೇ 29 ರಂದು ಚಿಕಿತ್ಸೆಗಾಗಿ ಕೆಎಂಸಿಗೆ ದಾಖಲಾಗಿದ್ದರು. ಅಲ್ಲಿ ಕೋವಿಡ್ ಟೆಸ್ಟ್ ಮಾಡಿದಾಗ ಕೋರೋನಾ ದೃಢಪಟ್ಟಿತ್ತು.ಇವರು ಸೋಮವಾರ ಅಪರಾಹ್ನ ಮೃತಪಟ್ಟಿದ್ದಾರೆ.

ಆದರೆ ಈ ಬಗ್ಗೆ ಮಾಹಿತಿ ನೀಡಿರುವ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು,ಇದು ಕೋವಿಡ್ ನಿಂದಾದ ಸಾವು ಅಲ್ಲ. ಅವರು ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಹೀಗಾಗಿ ಇದನ್ನು ಜಿಲ್ಲಾಡಳಿತ ಕೋವಿಡ್ ಸಾವು ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.