• Home  
  • ಸುಖ್ ಸಾಗರ್ ಸಂಸ್ಥೆಯ ಮಾಲಕ ಸುರೇಶ್ ಪೂಜಾರಿ ನಿಧನ (Sukh Sagar founder Suresh Poojary passes away)
- ನಿಧನ

ಸುಖ್ ಸಾಗರ್ ಸಂಸ್ಥೆಯ ಮಾಲಕ ಸುರೇಶ್ ಪೂಜಾರಿ ನಿಧನ (Sukh Sagar founder Suresh Poojary passes away)

Share:  ಸುಖ್ ಸಾಗರ್ ಸಂಸ್ಥೆಯ ಮಾಲಕ ಸುರೇಶ್ ಪೂಜಾರಿ ನಿಧನ (Mumbai) ಮುಂಬಯಿ, ಜು 6: ಮುಂಬಯಿ, ಬೆಂಗಳೂರಿನ ಸುಖ್ ಸಾಗರ್ ಹೋಟೆಲ್‌ನ ಜನಕ, ಸುರೇಶ್ ಎಸ್. ಪೂಜಾರಿ ಪಡುಕೋಣೆ  (87)ಯವರು ವಯೋ ಸಹಜ ಅನಾರೋಗ್ಯದಿಂದ ಬುಧವಾರ  ರಾತ್ರಿ  ಚೌಪಾಟಿಯ ಸ್ವ ಗೃಹದಲ್ಲಿ ನಿಧನರಾದರು. ಸುಖ್ ಸಾಗರ್ ಸಂಸ್ಥೆಯಲ್ಲಿ ಗುಣಮಟ್ಟದ ಹಾಗೂ ತಾಜ ಹಣ್ಣಿನ ಜ್ಯೂಸನ್ನು ಮಹಾನಗರಕ್ಕೆ ಪರಿಚಯಿಸಿದ ಹೋಟೆಲ್ ಸಾಮ್ರಾಜ್ಯದ ಅಧಿಪತಿ, ಕುಂದಾಪುರ ಪರಿಸರದ ಹಲವಾರು ಉದ್ಯಮಿಗಳಿಗೆ ಸಹಾಯ ಸಹಕಾರ ನೀಡಿದ, ಸಂಘ ಸಂಸ್ಥೆಯ ಕೊಡುಗೈ ದಾನಿ, […]

(Mumbai) ಮುಂಬಯಿ, ಜು 6: ಮುಂಬಯಿ, ಬೆಂಗಳೂರಿನ ಸುಖ್ ಸಾಗರ್ ಹೋಟೆಲ್‌ನ ಜನಕ, ಸುರೇಶ್ ಎಸ್. ಪೂಜಾರಿ ಪಡುಕೋಣೆ  (87)ಯವರು ವಯೋ ಸಹಜ ಅನಾರೋಗ್ಯದಿಂದ ಬುಧವಾರ  ರಾತ್ರಿ  ಚೌಪಾಟಿಯ ಸ್ವ ಗೃಹದಲ್ಲಿ ನಿಧನರಾದರು.
 ಸುಖ್ ಸಾಗರ್ ಸಂಸ್ಥೆಯಲ್ಲಿ ಗುಣಮಟ್ಟದ ಹಾಗೂ ತಾಜ ಹಣ್ಣಿನ ಜ್ಯೂಸನ್ನು ಮಹಾನಗರಕ್ಕೆ ಪರಿಚಯಿಸಿದ ಹೋಟೆಲ್ ಸಾಮ್ರಾಜ್ಯದ ಅಧಿಪತಿ, ಕುಂದಾಪುರ ಪರಿಸರದ ಹಲವಾರು ಉದ್ಯಮಿಗಳಿಗೆ ಸಹಾಯ ಸಹಕಾರ ನೀಡಿದ, ಸಂಘ ಸಂಸ್ಥೆಯ ಕೊಡುಗೈ ದಾನಿ, ಭಾರತ್ ಬ್ಯಾಂಕಿನ ಮಾಜಿ ನಿರ್ದೇಶಕ, ಬಿಲ್ಲವ ಜಾಗೃತಿ ಬಳಗದ ಮಾಜಿ ಅಧ್ಯಕ್ಷ, ಬಿಲ್ಲವರ ಅಸೋಸಿಯೇಷನ್ ಇದರ ಮಾಜಿ ಕಾರ್ಯಾಕಾರಿ ಸಮಿತಿ ಸದಸ್ಯ, ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಇದರ ಗೌರವಾಧ್ಯಕ್ಷ  ಸುರೇಶ್ ಎಸ್. ಪೂಜಾರಿಯವರು ತಮ್ಮನ್ನು ತೊಡಗಿಸಿಕೊಂಡಿದ್ದರು.

  ಬಿಲ್ಲವ ಸೇವಾ ಸಂಘ ಕುಂದಾಪುರದ ಅಭಿವೃದ್ಧಿಯಲ್ಲಿ ಮಹತ್ತರ ದೇಣಿಗೆಯನ್ನು ನೀಡಿದ ಸುರೇಶ್ ಪೂಜಾರಿಯವರು, ಶ್ರೀ ನಾರಾಯಣಗುರು ಏಜ್ಯುಕೇಶನಲ್ ಕಲ್ಚರಲ್ ಟ್ರಸ್ಟ್ (ರಿ) ಕುಂದಾಪುರದ ಅಧ್ಯಕ್ಷರಾಗಿ ವಿದ್ಯಾರ್ಜನೆಗೆ  ಒತ್ತು ನೀಡಿ, ಅರ್ಥಿಕವಾಗಿ ಹಿಂದುಳಿದವರು ವಿದ್ಯೆಯಿಂದ ವಂಚಿತರಾಗ ಬಾರದೆಂದು ವಿದ್ಯಾರ್ಥಿ ವೇತನ ಹಾಗೂ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಪರಿಚಯಿಸಿದರು.

 ಮಹಿಳೆಯರು ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸ ಬೇಕೆಂದು ಮಹಿಳಾ ವಿಭಾಗವನ್ನು ಪ್ರಾರಂಭಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಹಾಗೂ  ಕುಂದಾಪುರ ಪರಿಸರದ ಪ್ರತಿಯೊಂದು ಸಮಾಜ ಬಾಂಧವರೊಂದಿಗೆ ಅನ್ಯೋನ್ಯತೆಯಿಂದ ಇದ್ದು,  ಸಂಘಟಣೆ ಅಭಿವೃದ್ಧಿಯಲ್ಲಿ ಅಪಾರ ಕೆಲಸ ಮಾಡಿರುತ್ತಾರೆ.

ಮೃತ ಸುರೇಶ್‌ ಪೂಜಾರಿಯವರು ಸಹೋದರಿ, ಪತ್ನಿ, ಮೂವರು ಪುತ್ರರನ್ನು ಮತ್ತು ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.