• Home  
  • ವಿದ್ವಾನ್ ನಾಗೇಶ್  ಬಪ್ಪನಾಡುರವರಿಗೆ ಶ್ರೀ ಚಂದ್ರಶೇಖರ ಸ್ವಾಮೀಜಿಯವರಿಂದ ಆತ್ಮೀಯ ಗೌರವ  (Deepest respect from Sri Chandrashekhar Swamiji to Vidwan Nagesh Bappanadu)
- ಸನ್ಮಾನ, ಅಭಿನಂದನೆ

ವಿದ್ವಾನ್ ನಾಗೇಶ್  ಬಪ್ಪನಾಡುರವರಿಗೆ ಶ್ರೀ ಚಂದ್ರಶೇಖರ ಸ್ವಾಮೀಜಿಯವರಿಂದ ಆತ್ಮೀಯ ಗೌರವ  (Deepest respect from Sri Chandrashekhar Swamiji to Vidwan Nagesh Bappanadu)

Share: ವಿದ್ವಾನ್ ನಾಗೇಶ್  ಬಪ್ಪನಾಡುರವರಿಗೆ ಶ್ರೀ ಚಂದ್ರಶೇಖರ ಸ್ವಾಮೀಜಿಯವರಿಂದ ಆತ್ಮೀಯ ಗೌರವ    ಶ್ರದ್ಧೆ, ನಿಷ್ಠೆ, ಗುರು ಹಿರಿಯರಲ್ಲಿ ಭಕ್ತಿಯಿಂದ ವಿದ್ವಾನ್ ನಾಗೇಶ್ ಬಪ್ಪನಾಡು ರವರ ಅವಿರತ ಸಾಧನೆ ಅಭಿನಂದನೀಯ – ಶ್ರೀ ಚಂದ್ರಶೇಖರ ಸ್ವಾಮೀಜಿ (Mulki) ಮುಲ್ಕಿ: ಆಕಾಶವಾಣಿಯ ಅತ್ಯುನ್ನತ ಶ್ರೇಣಿಯ ಗೌರವಕ್ಕೆ ಪಾತ್ರರಾದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿದ್ವಾನ್ ನಾಗೇಶ್  ಬಪ್ಪನಾಡು ರವರನ್ನು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು, ಅಂತರಾಷ್ಟ್ರೀಯ ವಾಸ್ತು ತಜ್ಞ ಶ್ರೀ  ಚಂದ್ರಶೇಖರ ಸ್ವಾಮೀಜಿಯವರು ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ಸಭಾಭವನದಲ್ಲಿ […]

 ಶ್ರದ್ಧೆ, ನಿಷ್ಠೆ, ಗುರು ಹಿರಿಯರಲ್ಲಿ ಭಕ್ತಿಯಿಂದ ವಿದ್ವಾನ್ ನಾಗೇಶ್ ಬಪ್ಪನಾಡು ರವರ ಅವಿರತ ಸಾಧನೆ ಅಭಿನಂದನೀಯ – ಶ್ರೀ ಚಂದ್ರಶೇಖರ ಸ್ವಾಮೀಜಿ

(Mulki) ಮುಲ್ಕಿ: ಆಕಾಶವಾಣಿಯ ಅತ್ಯುನ್ನತ ಶ್ರೇಣಿಯ ಗೌರವಕ್ಕೆ ಪಾತ್ರರಾದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿದ್ವಾನ್ ನಾಗೇಶ್  ಬಪ್ಪನಾಡು ರವರನ್ನು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು, ಅಂತರಾಷ್ಟ್ರೀಯ ವಾಸ್ತು ತಜ್ಞ ಶ್ರೀ  ಚಂದ್ರಶೇಖರ ಸ್ವಾಮೀಜಿಯವರು ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ವತಿಯಿಂದ ಗೌರವಿಸಿದರು.

ಈ ಸಂದರ್ಭದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ ಶ್ರದ್ಧೆ, ನಿಷ್ಠೆ, ಗುರು ಹಿರಿಯರಲ್ಲಿ ಭಕ್ತಿ ಇದ್ದರೆ, ಜೀವನದಲ್ಲಿ  ಸಾಧಕರಾಗಲು ಸಾಧ್ಯ ಎಂಬುದಕ್ಕೆ ವಿದ್ವಾನ್ ನಾಗೇಶ್ ಬಪ್ಪನಾಡು ರವರ ಅವಿರತ ಸಾಧನೆ ಸಾಕ್ಷಿ. ಸಾಧನೆ ನಿರಂತರವಾಗಿ ನಡೆದು ಮತ್ತಷ್ಟು ಉನ್ನತ ಸ್ಥಾನಕ್ಕೆ ಏರಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭ ಮಾತೃಶ್ರೀ ಶಾರದಮ್ಮ ಗೋವಿಂದ ಭಟ್, ಜ್ಯೋತಿಷಿ ಉಷಾ ವಿಶ್ವನಾಥ ಭಟ್, ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕರಾದ ರಜನಿ ಸಿ ಭಟ್, ರಾಹುಲ್ ಚಂದ್ರಶೇಖರ್, ಸಂಚಾಲಕರಾದ ಪುನೀತ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.