ಸುಗಮ್ಯ ಮಹಿಳಾ ಒಕ್ಕೂಟ, ಸ್ತ್ರೀ ಸಂಘಟನ್ ಉಡ್ಪಿ ಧರ್ಮಪ್ರಾಂತ್ಯದ ನೂತನ ಅಧ್ಯಕ್ಷರಾಗಿ ಸಿಲ್ವಿಯಾ ಸುವಾರಿಸ್ ಆಯ್ಕೆ
(Udupi) ಉಡುಪಿ: ಉಡುಪಿ ಜಿಲ್ಲಾ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ ಮತ್ತು ಉಡುಪಿ ಕೆಥೊಲಿಕ್ ಸ್ತ್ರೀ ಸಂಘಟನ್ ಧರ್ಮಪ್ರಾಂತ್ಯದ 2025-27 ಸಾಲಿನ ಕೇಂದ್ರಿಯ ಸಮಿತಿಯ ಚುನಾವಣೆಯು ಸಂಪದ ಸಂಸ್ಥೆ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ ಉಡುಪಿ ಜಿಲ್ಲೆಯ ನಿರ್ದೇಶಕರಾದ ಪೂಜ್ಯ ಧರ್ಮಗುರು ವಂ. ರೆಜಿನಾಲ್ಡ್ ಪಿಂಟೋರವರ ಮಾರ್ಗದರ್ಶನದಲ್ಲಿ ಉಡುಪಿ ಶೋಕಮಾತ ಚರ್ಚ್ ನ ಸಭಾಂಗಣದಲ್ಲಿ ನೆರವೇರಿತು.
ನೂತನ ಅಧ್ಯಕ್ಷರಾಗಿ ಶ್ರೀಮತಿ ಸಿಲ್ವಿಯಾ ಸುವಾರಿಸ್ ಉಡುಪಿ ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.
ಇತರ ಪದಾಧಿಕಾರಿಗಳು: ಕಾರ್ಯದರ್ಶಿಯಾಗಿ ಶ್ರೀಮತಿ ಒಲಿವಿಯಾ ಲುವಿಸ್ ಬ್ರಹ್ಮಾವರ, ಖೋಶಾಧಿಕಾರಿಯಾಗಿ ಶ್ರೀಮತಿ ಹಿಲ್ಡಾ ಫೆರ್ನಾಂಡಿಸ್ ನಕ್ರೆ, ಉಪಾಧ್ಯಕ್ಷರು ಜ್ಯೋತಿ ಬಾರೆಟ್ಟೊ ಕೆಮ್ಮಣ್ಣು, ಜೊತೆ ಕಾರ್ಯದರ್ಶಿಯಾಗಿ ಲವೀನಾ ಸಿಕ್ವೇರಾ ಪಾಂಬೂರು ಆಯ್ಕೆ ಆದರು.
ಮೊತಿಯಾಂ ಪತ್ರದ ಸಂಚಾಲಕರಾಗಿ ಶ್ರೀಮತಿ ಪ್ರೀತಿ ಫೆರ್ನಾಂಡಿಸ್ ಗಂಗೊಳ್ಳಿ ಆಯ್ಕೆಯಾಗಿದ್ದಾರೆ.

