• Home  
  • ಮೂಲ್ಕಿ : ಯುವವಾಹಿನಿಯ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ (Mulki: Yuva Vahini’s inauguration and talent award)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ಮೂಲ್ಕಿ : ಯುವವಾಹಿನಿಯ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ (Mulki: Yuva Vahini’s inauguration and talent award)

Share: ಮೂಲ್ಕಿ : ಯುವವಾಹಿನಿಯ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾಜಕ್ಕೆ ಯುವವಾಹಿನಿಯ ಕೊಡುಗೆ ಅಪಾರ : ಲೀಲಾಕ್ಷ ಕರ್ಕೇರ (Moolki) ಮೂಲ್ಕಿ: ಸಮಾಜಮುಖಿ ಚಿಂತನೆಯೊಂದಿಗೆ ಉತ್ತಮ ನಾಯಕತ್ವದ ಗುಣವನ್ನು ಬೆಳೆಸುವಲ್ಲಿ ಯುವವಾಹಿನಿಯು ಸಮಾಜದಲ್ಲಿ ಮುಂಚೂಣಿಯಲ್ಲಿದೆ. ಅಧ್ಯಕ್ಷ ಸ್ಥಾನವನ್ನು ಒಂದೇ ವರ್ಷಕ್ಕೆ ಮೀಸಲಿಟ್ಟು ಸಮಾಜದಲ್ಲಿ ನಾರಾಯಣಗುರುಗಳ ತತ್ವಾದರ್ಶವನ್ನು ಪಸರಿಸುತ್ತಿರುವ ಸಂಸ್ಥೆಯನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಮಂಗಳೂರಿನ ಖಾಸಗಿ ಛಾನೆಲ್‌ನ ಆಡಳಿತ ನಿರ್ದೇಶಕ ಲೀಲಾಕ್ಷ ಕರ್ಕೇರ ಹೇಳಿದರು. ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮೂಲ್ಕಿಯ ಯುವವಾಹಿನಿಯ […]

(Moolki) ಮೂಲ್ಕಿ: ಸಮಾಜಮುಖಿ ಚಿಂತನೆಯೊಂದಿಗೆ ಉತ್ತಮ ನಾಯಕತ್ವದ ಗುಣವನ್ನು ಬೆಳೆಸುವಲ್ಲಿ ಯುವವಾಹಿನಿಯು ಸಮಾಜದಲ್ಲಿ ಮುಂಚೂಣಿಯಲ್ಲಿದೆ. ಅಧ್ಯಕ್ಷ ಸ್ಥಾನವನ್ನು ಒಂದೇ ವರ್ಷಕ್ಕೆ ಮೀಸಲಿಟ್ಟು ಸಮಾಜದಲ್ಲಿ ನಾರಾಯಣಗುರುಗಳ ತತ್ವಾದರ್ಶವನ್ನು ಪಸರಿಸುತ್ತಿರುವ ಸಂಸ್ಥೆಯನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಮಂಗಳೂರಿನ ಖಾಸಗಿ ಛಾನೆಲ್‌ನ ಆಡಳಿತ ನಿರ್ದೇಶಕ ಲೀಲಾಕ್ಷ ಕರ್ಕೇರ ಹೇಳಿದರು.

ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮೂಲ್ಕಿಯ ಯುವವಾಹಿನಿಯ ನೂತನ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಮೂಲ್ಕಿ ಯುವವಾಹಿನಿಯ ಅಧ್ಯಕ್ಷ ರಿತೇಶ್ ಮೂಲ್ಕಿ ಅಧ್ಯಕ್ಷತೆಯನ್ನು ವಹಿಸಿ, ನೂತನ ಅಧ್ಯಕ್ಷ ವಿನಯಕುಮಾರ್ ಮಟ್ಟು ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮೂಲ್ಕಿ ನಾರಾಯಣಗುರು ಶಿಕ್ಷಣ ಸಂಸ್ಥೆಯ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋಧಿಸಿದರು.

ತುಳು ಭಾಷಾ ಸಂಶೋಧಕ ಮಹಿ ಮೂಲ್ಕಿ, ಮೂಲ್ಕಿ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಸಂಚಾಲಕ ಹರೀಂದ್ರ ಸುವರ್ಣ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಸಂಘಟನಾ ಕಾರ್ಯದರ್ಶಿ ಲೋಹಿತ್ ರೆಂಜಾಳ ಸುಳ್ಯ, ನೂತನ ಕಾರ್ಯದರ್ಶಿ ಪ್ರೇರಣಾ, ಕೋಶಾಧಿಕಾರಿ ಜ್ಯೋತಿ ರಾಮಚಂದ್ರ ಉಪಸ್ಥಿತರಿದ್ದರು. 

ಮೂಲ್ಕಿ ಯುವವಾಹಿನಿಯ ಅಧ್ಯಕ್ಷ ರಿತೇಶ್ ಮೂಲ್ಕಿ ಸ್ವಾಗತಿಸಿದರು. ಕಾರ್ಯದರ್ಶಿ ಲತೀಶ್ ಸಾಲ್ಯಾನ್ ಕಾರ್ನಾಡು ವರದಿ ವಾಚಿಸಿ, ವಂದಿಸಿದರು.

ಮಾಜಿ ಅಧ್ಯಕ್ಷ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.