ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಬಿಲ್ಡರ್ ಮಾಫಿಯಾಗೆ ಬಲಿ ಆಗಿದೆಯಾ?
ವಿಶೇಷ ವರದಿ: ಬಾಪು ಉಚ್ಚಿಲ.
(Uchila) ಉಚ್ಚಿಲ: ಉಚ್ಚಿಲ ಬಡ ಗ್ರಾಮ ಪಂಚಾಯತ್ ಆಡಳಿತ ಬಿಲ್ಡರ್ ಮಾಫಿಯಕ್ಕೆ ಬಲಿಯಾಗಿದೆಯಾ ಎಂಬ ಪ್ರಶ್ನೆ ಉಚ್ಚಿಲ ಗ್ರಾಮಾದ್ಯಂತ ಕೇಳಿ ಬರುತ್ತಿದೆ.
ಈ ಪ್ರಶ್ನೆಯನ್ನು ಸರಿಯಾಗಿ ಅವಲೋಕಿಸಿದಾಗ ಹೌದು ಎಂಬ ಉತ್ತರ ಸಿಗುತ್ತಿದೆ. ಇದಕ್ಕೆ ಸಕಾರಣವೂ ಸಿಗುತ್ತಿದೆ.
ಉಚ್ಚಿಲ ಬಡ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು ಹಾಗೂ ಸದಸ್ಯರು ಯಾರೆಂದೇ ಜನರಿಗೆ ತಿಳಿಯದ ಪರಿಸ್ಥಿತಿ ನೆಲೆಯಾಗಿದೆ.
ಉಚ್ಚಿಲ ಗ್ರಾಮವು ಬೆಳೆಯುತ್ತಿರುವ ಕಿರು ಪಟ್ಟಣವಾಗಿದ್ದು, ಇಲ್ಲಿ ಎಲ್ಲವೂ ಇದೆ. ಅಧ್ಯಕ್ಷರಾಗಿ ಸದಸ್ಯರ ಪ್ರಕಾರ ಗ್ರಾಮ ಅಭಿವೃದ್ಧಿಯತ್ತ ಸಾಗುತ್ತಿದೆ ಎನ್ನುವ ಮಾತು. ಆದರೆ ಇಲ್ಲಿ ಆಗುತ್ತಿರುವುದೇನು ಗ್ರಾಮದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಗ್ರಾಮ ಪಂಚಾಯತ್ ತಲೆ ಕೆಡಿಸಿ ಕೊಳ್ಳುವುದೇ ಇಲ್ಲ.
ಉಚ್ಚಿಲ ಗ್ರಾಮದಾದ್ಯಂತ 10 ಕ್ಕೂ ಹೆಚ್ಚು ಕಡೆ ಬಿಲ್ಡರ್ ಗಳು ಲೇಔಟ್ ಮಾಡಿ ವ್ಯಾಪಾರ ಜಾಗವನ್ನು ಮಾರುವುದರಲ್ಲಿ ತಲ್ಲೀನರಾಗಿದ್ದಾರೆ. ಗ್ರಾಮ ಪಂಚಾಯತ್ ಸರಿಯಾದ ಕಾರ್ಯ ಸೂಚಿ ಎಂದು ಯಾರು ಪರವಾನಿಗೆ ಕೇಳು ಕೇಳುತ್ತಾರೆಯೋ ಅವರಿಗೆ ತುರ್ತಾಗಿ ನೀಡುತ್ತಿದೆ.(ತುರ್ತಾಗಿ) ಎಲ್ಲೆಲ್ಲೋ ಲೇಔಟ್ ನಿರ್ಮಾಣ ಆಗಿ ಮನೆಯೂ ತಯಾರಾಗುತ್ತಿದೆ.
ಗ್ರಾಮ ಪಂಚಾಯತ್ ಲೇಔಟಿಗೆ ಪರವಾನಿಗೆ ನೀಡಿದ ನಂತರ ಅತ್ತ ಕಣ್ಣು ಹಾಯಿಸುವುದಿಲ್ಲ. ಉಚ್ಚಿಲದ ಲೇಔಟ್ ಪ್ರದೇಶದಲ್ಲಿ ಎಲ್ಲಿಯೂ ಚರಂಡಿ ನಿರ್ಮಾಣವನ್ನೇ ಮಾಡುತ್ತಿಲ್ಲ. ಈ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರಾಧಿ ಸದಸ್ಯರು ಹಾಗೂ ಗ್ರಾಮಸ್ಥರೂ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಬಿಲ್ಡರ್ ಹಣ ಕೊಟ್ಟು ಪರವಾನಿಗೆ ಪಡೆಯುತ್ತಿದ್ದಾರೆ. ಗ್ರಾಮ ಪಂಚಾಯತ್ ಪರವಾನಿಗೆ ನೀಡುತ್ತಿದೆ.
ಇದೀಗ ಮಳೆಗಾಲ ಪ್ರಾರಂಭ ಆಗಿದ್ದು, ಚರಂಡಿಯೇ ಇಲ್ಲದ ಲೇಔಟ್ ನಲ್ಲಿ ನೀರು ಸರಾಗವಾಗಿ ರಸ್ತೆಯಲ್ಲಿ ಸಾಗುತ್ತಿದೆ. ಉತ್ತಮವಾಗಿದ್ದ ರಸ್ತೆ ಕೊಚ್ಚಿ ಹೋಗಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ತಲೆಕೆಡಿಸಿಕೊಂಡಿಲ್ಲ. ತಲೆ ಕೆಡಿಸಿ ಕೊಳ್ಳುವುದೂ ಇಲ್ಲ. ಅಧ್ಯಕ್ಷರು, ಸದಸ್ಯರು ಇದೇ ಪರಿಸರದಲ್ಲಿ ಇದ್ದರೂ ಇದ್ದರೂ ಈ ಬಗ್ಗೆ ಯೋಚಿಸುವುದನ್ನೇ ಬಿಟ್ಟಿದ್ದಾರೆ.
ಉಚ್ಚಿಲ – ಮುದರಂಗಡಿ ರಸ್ತೆಯ ಇಕ್ಕಡೆಗಳಲ್ಲಿ ವ್ಯವಸ್ಥಿತ ಚರಂಡಿ ಇತ್ತು. ಕಾರ್ಕಳದ ಗುತ್ತಿಗೆದಾರನಿಗೆ ಈ ರಸ್ತೆ ಅಗಲೀಕರಣ ಗುತ್ತಿಗೆಯನ್ನು ಮಾಜಿ ಶಾಸಕ ಲಾಲಾಜಿ ಮೆಂಡನ್ ನೀಡಿದ್ದರು. ಆತ ರಸ್ತೆ ಅಗಲೀಕರಣ ಮಾಡುವಾಗ ಇಕ್ಕಡೆಗಳಲ್ಲಿ ಇದ್ದ ಚರಂಡಿಯನ್ನು ಮುಚ್ಚಿ, ರಸ್ತೆ ಅಗಲೀಕರಣ ಮಾಡಿದ ಬಳಿಕ ಇತ್ತಕಡೆ ಬಂದಿಲ್ಲ. ಈ ಬಗ್ಗೆ ಮಾಜಿ ಶಾಸಕರಲ್ಲಿ ವಿಚಾರಿಸಿದಾಗ ಚರಂಡಿ ಮಾಡುತ್ತೇವೆ ಎಂದು ಹೇಳಿದ್ದಾರೆ ಮಾಡುತ್ತಾರೆ ಎನ್ನುತ್ತಿದ್ದರು. ಆದರೆ ಚರಂಡಿಯನ್ನು ಮಾಢಿಸಿ ಕೊಡಲು ಲಾಲಾಜಿ ಮೆಂಡನ್ ಶಾಸಕರಾಗಿ ಉಳಿದಿಲ್ಲ.ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಇದು ರಸ್ತೆಯಲ್ಲಿ ಸಂಚರಿಸುವವರಿಗೆ ಸಂಪ್ರೋಕ್ಷಣೆ ಆಗುತ್ತಿದೆ.
ಆದರೆ ಬಡಾ ಗ್ರಾಮದ ಬಳಿ ಬರುವ ಬೆಳಪು ಗ್ರಾಮದಲ್ಲಿ ಅದೇ ಗುತ್ತಿಗೆದಾರ ರಸ್ತೆ ಅಗಲೀಕರಣದೊಂದಿಗೆ ಚರಂಡಿಯನ್ನು ಮಾಡಿದ್ದಾನೆ. ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರ ಹೆದರಿಕೆ ಆ ಗುತ್ತಿಗೆದಾರನಿಗೆ ಇದೆ. ಆದರೆ ಬಡಾ ಗ್ರಾಮದಲ್ಲಿ ಮಾಡಿಲ್ಲ. ಬಡಾ ಪಂಚಾಯತ್ ಆಡಳಿತ ಇಕ್ಕಡೆಗಳಲ್ಲಿ ಚರಂಡಿ ಇತ್ತು ಎನ್ನುವುದನ್ನೇ ಮರೆತಿದೆ. ಈ ಪರಿಸರದ ಗ್ರಾಮ ಪಂಚಾಯತ್ ಸದಸ್ಯರ ಮೌನವು ಸಂಶಯಾಸ್ಪದ ಎನಿಸಿದೆ.
ಬೆಳೆಯುತ್ತಿರುವ ಗ್ರಾಮ ಆದುದರಿಂದ ಬಡ ಗ್ರಾಮದ ಎಲ್ಲೆಡೆ ಕಟ್ಟಡಗಳು ತಲೆ ಎತ್ತುತ್ತಿದೆ. ಪೊಲ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಮಸೀದಿಯ ಬಳಿ ಇಕ್ಕಡೆಗಳಲ್ಲಿ ಉತ್ತಮ ಚರಂಡಿ ವ್ಯವಸ್ಥೆ ಇತ್ತು. (ಮಸೀದಿವರೆಗೆ ಇದೆ.) ಆದರೆ ಮಸೀದಿ ಪಕ್ಕ ಓರ್ವ ಬೃಹತ್ ಮನೆ ಕಟ್ಟುವುದಕ್ಕಾಗಿ ಚರಂಡಿಯನ್ನೇ ನೆಲಸಮ ಮಾಡಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ದಿನಕ್ಕೆ ಒಂದೆರಡು ಸಲ ಆ ಪರಿಸರದಲ್ಲಿ ಸಂಚರಿಸಿದರೂ ತಲೆ ತಲೆ ಕೆಡಿಸಿಕೊಂಡಿಲ್ಲ.
ಉಚ್ಚಿಲ – ಪೊಲ್ಯ ರಸ್ತೆ ಅವಸ್ಥೆ ಸಂಚರಿಸುವ ಯಾರೂ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ವಿಶೇಷವಾಗಿ ಈ ರಸ್ತೆ ಪಕ್ಕ ಮನೆ ಕಟ್ಟುವವರು ಚರಂಡಿ ಎಂದು ಯೋಚಿಸದೆ ಅದರ ಮೇಲೆ ಮಣ್ಣು ಹಾಕಿ ತಮ್ಮ ಮನೆಗೆ ಸಾಗಲು ರಸ್ತೆ ನಿರ್ಮಿಸಿದ್ದಾರೆ.
ಮಳೆಗಾಲ ಪ್ರಾರಂಭ ಆಗುವುದಕ್ಕಿಂತ ಮೊದಲು ಪರಿಸರದ ಚರಂಡಿಗಳ ಸ್ವಚ್ಛತೆ ಹಾಗೂ ಸರಾಗವಾಗಿ ನೀರು ಹರಿಯಲು ವ್ಯವಸ್ಥೆ ಮಾಡುವುದು ಗ್ರಾಮ ಪಂಚಾಯತ್ ಕರ್ತವ್ಯ. ಆದರೆ ಗ್ರಾಮ ಪಂಚಾಯತ್ ನಮ್ಮ ಕರ್ತವ್ಯವನ್ನು ಮರೆತಿದೆ.
ಗ್ರಾಮ ಪಂಚಾಯತ್ ನಿದ್ರೆಯಿಂದ ಯಾವಾಗ ಏಳುತ್ತದೆ ಎಂದು ಗ್ರಾಮಸ್ಥರು ಕಾಯುತ್ತಿದ್ದಾರೆ.

